ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಐತಿಹಾಸಿನ ಕೆಂಪು ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡ ಕಂಟೈನರ್‌ಗಳನ್ನು ನಿಲ್ಲಿಸುವ ಮೂಲಕ ಬೃಹತ್ ಗೋಡೆಗಳನ್ನು ಕಟ್ಟಿ ರಕ್ಷಣಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ವರ್ಷದ ಗಣರಾಜ್ಯೋತ್ಸವದಂದು ರೈತ ಹೋರಾಟದ ಟ್ರಾಕ್ಟರ್ ರ್ಯಾಲಿಯಲ್ಲಿ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ರಕ್ಷಣೆ ಒದಗಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜನವರಿ 26 ರಂದು ರೈತರು ಕಿಸಾನ್ ಗಣರಾಜ್ಯೋತ್ಸವ ಆಚರಿಸಲು ಕರೆ ನೀಡಿದ್ದರು. ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಯುತ್ತಿದ್ದ ಸಂದರ್ಭದಲ್ಲಿ ದೀಪ್ ಸಿಧು ಬಣದ ರೈತರು ನಿಯಮ ಉಲ್ಲಂಘಿಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಆಗ ಘರ್ಷಣೆ ಸಂಭವಿಸಿತ್ತು.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ದ್ರೋಣ್ ದಾಳಿ ನಡೆದ ಹಿನ್ನೆಲೆಯಲ್ಲಿಯೂ ಹೆಚ್ಚಿನ ಬಿಗಿ ಭದ್ರತೆ ಮಾಡಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ತಿಳಿಸಿದೆ.
ಪ್ರತಿವರ್ಷ ಕೆಂಪು ಕೋಟೆ ಮೇಲಿಂದ ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿಗಳು ಭಾಷಣ ಮಾಡುತ್ತಾರೆ. ಈ ಬಾರಿ ತಮ್ಮ ಭಾಷಣಕ್ಕೆ ಸಾರ್ವಜನಿಕರು ಸಲಹೆ ನೀಡಬೇಕೆಂದು ನರೇಂದ್ರ ಮೋದಿ ಮನವಿ ಮಾಡಿದ್ದರು.
ಇದನ್ನೂ ಓದಿ: ಮಂಗಳೂರು ಕೋಸ್ಟಲ್ ಬರ್ತ್‌ಗಾಗಿ ಸಾಂಪ್ರದಾಯಿಕ ಮೀನುಗಾರರ ಒಕ್ಕಲೆಬ್ಬಿಸುವುದಕ್ಕೆ ವಿರೋಧ


