Homeಮುಖಪುಟಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ: ಪ್ರಿಯಾಂಕಾ ಗಾಂಧಿ ಸಿಎಂ ಅಭ್ಯರ್ಥಿ?

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ: ಪ್ರಿಯಾಂಕಾ ಗಾಂಧಿ ಸಿಎಂ ಅಭ್ಯರ್ಥಿ?

ಬಿಜೆಪಿಯ ಯೋಗಿ ಆದಿತ್ಯನಾಥ್ ಎದುರಿಸಲು ಆಕೆಯ ಜನಪ್ರಿಯತೆ ಅಗತ್ಯಗತ್ಯವಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

- Advertisement -
- Advertisement -

2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮೌನವಹಿಸಿದೆ. ಆ ಸಾಧ್ಯತೆಯನ್ನು ಅದು ತಳ್ಳಿಹಾಕಿಲ್ಲ. “ಅಂತಹ ಪ್ರೊಜೆಕ್ಷನ್ ಅನ್ನು ಈಗಲೇ ನೀಡುವುದು ತೀರ ಮುಂಚಿತವಾಗುತ್ತದೆ. ಸೂಕ್ತ ಸಮಯ ಬರಲಿ” ಎಂದು ಪ್ರಿಯಾಂಕಾ ಗಾಂಧಿ ಕೆಲವು ದಿನಗಳ ಹಿಂದೆ ಹೇಳಿದ್ದರು.

ದೇಶದ ಅತಿದೊಡ್ಡದಾದ ಮತ್ತು ರಾಜಕೀಯವಾಗಿ ಅತ್ಯಂತ ನಿರ್ಣಾಯಕ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 2019 ರಿಂದ ಪ್ರಿಯಾಂಕಾಗಾಂಧಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶ ಉಸ್ತುವಾರಿ ಹೊತ್ತಿರುವ ಅವರು ಪಕ್ಷವನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ಅವರು ಉತ್ತರ ಪ್ರದೇಶದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪಕ್ಷದ ಧ್ಯೇಯವನ್ನು ಮನೆ-ಮನೆಗಳಿಗೆ ತಲುಪಿಸುವುದು ಅವರ ಸದ್ಯದ ಯೋಜನೆಯಾಗಿದೆ. ಅವರು ಕೆಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರು. ಪಕ್ಷದ ಹೊಸ ತಲೆಮಾರಿನ ನಾಯಕರು ಮತ್ತು ಹಳೆಯ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ತರಲು ಯತ್ನಿಸುತ್ತಿದ್ದಾರೆ.

“ಅವರ ಭೇಟಿಯು ಪ್ರಾಥಮಿಕವಾಗಿ ಪಕ್ಷದ ಕಾರ್ಯಕರ್ತರನ್ನು ಹೆಚ್ಚಿಸುವುದಾಗಿದೆ” ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

“ಅವರ ದೀರ್ಘಾವಧಿಯ ಅನುಪಸ್ಥಿತಿಯು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಪಕ್ಷವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಭದ್ರಗೊಳಿಸುವುದು. ಜಿಲ್ಲಾ ಮಟ್ಟದ ನಾಯರಿಗೆ ಪಕ್ಷದಲ್ಲಿ ತಮ್ಮ ಪಾತ್ರವನ್ನು ಅರ್ಥೈಸುವುದು. ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸುವುದು ಸೇರಿದಂತೆ ಕೆಲವು ಕಠಿಣ ಸವಾಲುಗಳಿವೆ” ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಒಪ್ಪಿಕೊಂಡಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಲಲ್ಲು ಅವರು ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ರಾಯ್ ಬರೇಲಿಯಲ್ಲಿ ಮತ್ತು ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಅಮೇಥಿಯಲ್ಲಿ ಚುನಾವಣಾ ಉಸ್ತುವಾರಿಯನ್ನು ನೋಡಿಕೊಳ್ಳುವುದರ ಜೊತೆಗೆ ರಾಜ್ಯಾದ್ಯಂತ ಪಕ್ಷದ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದರು.

ಇದು ಅವರಿಗೆ ಹೆಚ್ಚಿನ ಒತ್ತಡವನ್ನು ತಂದಿತ್ತು. ಮಾತ್ರವಲ್ಲದೆ, ಫಲಿತಾಂಶವು ನಿರಾಶಾದಾಯಕವಾಗಿತ್ತು. ಕಾಂಗ್ರೆಸ್ ತನ್ನ ಭದ್ರಕೋಟೆಯಾದ ಅಮೇಥಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೋತಿತು. ರಾಯ್ ಬರೇಲಿಯಲ್ಲಿ ಮಾತ್ರ ಗೆದ್ದು, ಒಂದೇ ಒಂದು ಸ್ಥಾನವನ್ನು ಉಳಿಸಿಕೊಂಡಿತು.

ಆದ್ದರಿಂದ, 2022ರ ಚುನಾವಣೆಯು ಪ್ರಿಯಾಂಕಾಗೆ ಮಹತ್ವವನ್ನು ನೀಡುತ್ತದೆ. ರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ತಮ್ಮ ಚುನಾವಣಾ ಸ್ಟ್ರಾಟಜಿಯನ್ನು ಒರಗೆ ಹಚ್ಚಬೇಕಿದೆ. ಏಕೆಂದರೆ ಬಿಜೆಪಿಯ ಯೋಗಿ ಆದಿತ್ಯನಾಥ್ ಎದುರಿಸಲು ಆಕೆಯ ಜನಪ್ರಿಯತೆ ಅಗತ್ಯಗತ್ಯವಾಗಿದೆ. ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಅತ್ಯಂತ ಕೆಳಮಟ್ಟದಲ್ಲಿದೆ. ಅದು ಕೇವಲ ಏಳು ಶಾಸಕರನ್ನು ಹೊಂದಿದೆ. ಅವರಲ್ಲೂ ಇಬ್ಬರು ಪಕ್ಷದ ವಿರುದ್ಧ ಬಂಡೆದಿದ್ದಾರೆ.

“ಕಳೆದ ಮೂರು ದಶಕಗಳಲ್ಲಿ, ಪಕ್ಷವು ಯುಪಿಯಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ; ಪಕ್ಷದ ಸಂಘಟನೆ ನೆಲಕಚ್ಚಿದೆ. ತನ್ನ ನೆಲೆಯನ್ನು ಮರಳಿ ಪಡೆಯಲು ಪ್ರಿಯಾಂಕಾ ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ. ಅವರು ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ಎಂಬುದು ಒಂದು ಮುಖ್ಯ ಪ್ರಶ್ನೆಯಾಗಿದೆ”ಎಂದು ರಾಜಕೀಯ ವೀಕ್ಷಕರಾದ ಪ್ರೊಫೆಸರ್ ಎ.ಕೆ ಮಿಶ್ರಾ ಹೇಳುತ್ತಾರೆ.

ಪಕ್ಷವು 500 ಸದಸ್ಯರ ರಾಜ್ಯ ಕಾರ್ಯಕಾರಿ ಸಮಿತಿಯನ್ನು ಹೊಂದಿತ್ತು. ಪ್ರಿಯಾಂಕಾ ಆ ಸಂಖ್ಯೆಯನ್ನು 115 ಕ್ಕೆ ಇಳಿಸಿದರು. ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ ಅಜಯ್ ಕುಮಾರ್ ಲಲ್ಲು ಅವರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ 115ರಲ್ಲಿ ಶೇಕಡ 34 ರಷ್ಟು ಮೇಲ್ಜಾತಿಗಳು ಮತ್ತು ಹಿಂದುಳಿದವರು, ಶೇಕಡಾ 17 ರಷ್ಟು ಮುಸ್ಲಿಮರು ಮತ್ತು 12 % SC/ST ಮುಖಂಡರಿದ್ದಾರೆ.

ಈಗ ಯುಪಿಸಿಸಿ ಕಾರ್ಯಕಾರಿಣಿ 16 ಪ್ರಧಾನ ಕಾರ್ಯದರ್ಶಿಗಳು ಮತ್ತು ಆರು ಉಪಾಧ್ಯಕ್ಷರನ್ನು ಹೊಂದಿದೆ.

“ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಸಮರ್ಪಕ ಕ್ರಮಕ್ಕೆ ತರಲು ರಾಜ್ಯ ಮಟ್ಟದಲ್ಲಿ ರಚನೆಯಾದ ವಿವಿಧ ಸಮಿತಿಗಳಲ್ಲಿ ಅನುಭವಿಗಳನ್ನು ನೇಮಿಸಲಾಗಿದೆ” ಎಂದು ಲಲ್ಲೂ ಹೇಳುತ್ತಾರೆ.

ಆದರೆ ರಾಜ್ಯದಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಗೊಂದಲವಿದೆ. ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಮೈತ್ರಿಯ ವಿರುದ್ಧ ಇದ್ದರೂ, ಕಳೆದ ತಿಂಗಳು ನಡೆದ ಸಭೆಯಲ್ಲಿ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂದು ಪ್ರಿಯಾಂಕಾ ಹೇಳಿದ್ದರು.

ಚುನಾವಣೆಗೆ 160-165 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವುದರೊಂದಿಗೆ ಪಕ್ಷದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತವೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್


ಇದನ್ನೂ ಓದಿ: ಸ್ವಾತಂತ್ರ್ಯ ದಿನಕ್ಕೆ ಕೆಂಪುಕೋಟೆಗೆ ಭದ್ರತೆ: ದೊಡ್ಡ ಕಂಟೈನರ್‌ಗಳ ಮೂಲಕ ಗೋಡೆ ನಿರ್ಮಾಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...