Homeಮುಖಪುಟಯೋಗಿ ಸರ್ಕಾರ ಟೀಕಿಸಿದ್ದ ಮಾಜಿ ರಾಜ್ಯಪಾಲರ ಮೇಲೆ ದೇಶದ್ರೋಹ ಪ್ರಕರಣ!

ಯೋಗಿ ಸರ್ಕಾರ ಟೀಕಿಸಿದ್ದ ಮಾಜಿ ರಾಜ್ಯಪಾಲರ ಮೇಲೆ ದೇಶದ್ರೋಹ ಪ್ರಕರಣ!

- Advertisement -
- Advertisement -

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ, ಕಾಂಗ್ರೆಸ್ ನಾಯಕ ಅಜೀ಼ಜ್‌ ಖುರೇಷಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಮುಖಂಡ ಆಕಾಶ್ ಕುಮಾರ್ ಸಕ್ಸೇನಾ ನೀಡಿದ ದೂರಿನ ಆಧಾರದಲ್ಲಿ ರಾಮ್ ಪುರದ ಸಿವಿಲ್‌ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಾಗಿದೆ.

ಸಮಾಜವಾದಿ ಪಾರ್ಟಿಯ ನಾಯಕ ಆಝಾಮ್ ಖಾನ್ ಅವರ ಮನೆಗೆ ತೆರಳಿ ಅವರ ಕುಟುಂಬದೊಂದಿಗೆ ಸಭೆ ನಡೆಸಿದ ಬಳಿಕ ಖುರೇಷಿ ಅವರು ಯೋಗಿ ಸರ್ಕಾರದ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಸರ್ಕಾರವನ್ನು “ರಕ್ತ ಹೀರುವ ದೆವ್ವ” ಎಂದು ಜರಿದಿದ್ದಾರೆ. ಈ ಹೇಳಿಕೆ ಎರಡು ಕೋಮುಗಳ ನಡುವೆ ದ್ವೇಷವನ್ನು ಬಿತ್ತಿದ್ದು, ಸಮಾಜದಲ್ಲಿ ಕ್ಷೋಭೆಯನ್ನು ಉಂಟು ಮಾಡಿದೆ” ಎಂದು ಸಕ್ಸೆನಾ ದೂರಿದ್ದಾರೆ. ವಿವಿಧ ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾದ ತುಣುಕುಗಳನ್ನು ಪೆನ್‌ಡ್ರೈವ್ಗೆ ನಕಲು ಮಾಡಿ ಸಕ್ಸೇನಾ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: 5 ವರ್ಷಗಳಲ್ಲಿ 326 ದೇಶದ್ರೋಹ ಪ್ರಕರಣಗಳು ಕಾನೂನಿನ ದುರುಪಯೋಗವನ್ನು ತೋರಿಸುತ್ತವೆ: ಸುಪ್ರೀಂಕೋರ್ಟ್‌

ಎರಡು ಧರ್ಮಗಳ ನಡುವೆ ದ್ವೇಷ ಬಿತ್ತುವ ಆರೋಪದಲ್ಲಿ ಸೆಕ್ಷನ್‌ 153ಎ, ದೇಶದ ಏಕತೆಗೆ ಧಕ್ಕೆ ತರುವ ಪೂರ್ವಗ್ರಹಗಳ ಆರೋಪದಲ್ಲಿ ಸೆಕ್ಷನ್ 153ಬಿ, 124ಎ (ದೇಶದ್ರೋಹ), ಸಾರ್ವಜನಿಕರಲ್ಲಿ ಭಯ ಉಂಟು ಮಾಡುವ ಆಪಾದನೆ ಮೇಲೆ ಸೆಕ್ಷನ್ 505(1)(ಬಿ) ಕೇಸ್‌ಗಳನ್ನು ಹಾಕಲಾಗಿದೆ. ಖುರೇಷಿಯವರಿಗೆ 81 ವರ್ಷ ವಯಸ್ಸಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...