Homeಮುಖಪುಟಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ದಿ ವೈರ್ ಸಂದರ್ಶನ| ನಾಗರಿಕರಲ್ಲಿ ಭಯವನ್ನು ಸೃಷ್ಟಿಸಲು ದೇಶದ್ರೋಹ ಕಾನೂನನ್ನು ಸರ್ಕಾರಗಳು ಬಳಸುತ್ತಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -
- Advertisement -

ಅದರ ದುರುಪಯೋಗದ ಪ್ರಕರಣಗಳು “ಘಾತೀಯವಾಗಿ” (ವಿಪರೀತ ಪ್ರಮಾಣದಲ್ಲಿ) ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ- ದೇಶದ್ರೋಹದ ಕಾನೂನನ್ನು “ತಕ್ಷಣವೇ ರದ್ದುಗೊಳಿಸಬೇಕು” ಎಂದು ಗುಪ್ತಾ ಹೇಳಿದ್ದಾರೆ. ಭಿನ್ನಮತವನ್ನು ತಡೆಗಟ್ಟಲು ಅಥವಾ ತಡೆಯಲು, ನಾಗರಿಕರಲ್ಲಿ ಭಯವನ್ನು ಸೃಷ್ಟಿಸಲು ಇದನ್ನು ಸರ್ಕಾರಗಳು ಬಳಸುತ್ತಿವೆ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದ್ದಾರೆ.

ಸುಮಾರು 60 ವರ್ಷಗಳ ಹಿಂದೆ 1962 ರಲ್ಲಿ ಕೇದಾರ ನಾಥ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 124 ಎ ಅನ್ನು ಉಲ್ಲೇಖಿಸಿದೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಇದ್ದಲ್ಲಿ ಮಾತ್ರ ಇದು ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್‌ ರ್‍ಯಾಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

ಆರೋಪ ಹೊರಿಸಲು ಹಿಂಸಾಚಾರಕ್ಕೆ ಪ್ರಚೋದನೆಯ ವಿಷಯ ಅಗತ್ಯವಾದ ಘಟಕಾಂಶವಾಗಿದೆ ಮತ್ತು ಆ ಪ್ರಚೋದನೆಯಿಲ್ಲದೆ ಸೆಕ್ಷನ್ 124 ಎ ಅಂದರೆ ದೇಶದ್ರೋಹ ಕಾನೂನನ್ನು ಬಳಸಲಾಗುವುದಿಲ್ಲ. ಆದಾಗ್ಯೂ, ದೇಶಾದ್ಯಂತ ಬಹುಪಾಲು ಮ್ಯಾಜಿಸ್ಟ್ರೇಟ್‌ಗಳಿಗೆ ಈ ಅಂಶ ತಿಳಿದಂತಿಲ್ಲ ಅಥವಾ ಅದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಪದೇ ಪದೇ ಈ ಓದುವಿಕೆಯನ್ನು ( 1962 ರ ಉಲ್ಲೇಖ) ಪುನರುಚ್ಚರಿಸಿದೆ ಮತ್ತು ಸುಪ್ರೀಂ ಕೋರ್ಟ್‌ನ ನಿಲುವಿನ ಬಗ್ಗೆ ಯಾವುದೇ ಸಂದೇಹ ಅಥವಾ ಗೊಂದಲಗಳಿಲ್ಲ. ಇದರರ್ಥ ಸೆಕ್ಷನ್ 124 ಎ ಮುದ್ರಣದಲ್ಲಿ ಇರುವಂತೆ ಇರಲಾರದು. ಇದನ್ನು ತೀರಾ ವಿರಳವಾಗಿ ಬಳಸಬೇಕು ಎಂಬುದು ಕೂಡ ಸತ್ಯ ಎಂದು ಗುಪ್ತಾ ಹೇಳಿದ್ದಾರೆ.

ದಿ ವೈರ್‌ಗಾಗಿ ಕರಣ್ ಥಾಪರ್‌ಗೆ ನೀಡಿದ 36 ನಿಮಿಷಗಳ ಸಂದರ್ಶನದಲ್ಲಿ, ನ್ಯಾಯಮೂರ್ತಿ ಗುಪ್ತಾ, ತಮ್ಮ ಮೊದಲ ಆದ್ಯತೆಯೆಂದರೆ ದೇಶದ್ರೋಹದ ಕಾನೂನನ್ನು ತಕ್ಷಣವೇ ರದ್ದುಪಡಿಸುವುದು, ಎರಡನೆಯದು ಪೊಲೀಸರು ಆರೋಪವನ್ನು ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಬೇಕು. ಅದನ್ನು ತೆಗೆದುಕೊಳ್ಳುವ ಮೊದಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕೌಂಟರ್‌ಸೈನ್ ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಇಂತಹ ಮಾರ್ಗಸೂಚಿಗಳನ್ನು ರೂಪಿಸುತ್ತದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!

ಈ ವಿಷಯವನ್ನು ಚರ್ಚಿಸುವ ಅಧಿಕಾರ ಹೊಂದಿರುವ ಮುಖ್ಯ ನ್ಯಾಯಮೂರ್ತಿ, ಸೆಕ್ಷನ್ 124 ಎ ಗೆ ಸಂಬಂಧಿಸಿದ ಅವಳಿ ಸಮಸ್ಯೆಗಳನ್ನು ಎತ್ತಬೇಕು: ಅದನ್ನು ದುರುಪಯೋಗಪಡಿಸಿಕೊಳ್ಳುವ ರೀತಿ ಮತ್ತು ತೀವ್ರವಾಗಿ ಹೆಚ್ಚುತ್ತಿರುವ ದುರುಪಯೋಗದ ಪ್ರಕರಣಗಳು- ಈ ವಿಷಯಗಳನ್ನು ಮುಖ್ಯ ನ್ಯಾಯಮೂರ್ತಿ ಎತ್ತಿಕೊಳ್ಳಬೇಕು. ಈ ವಿಷಯವನ್ನು ಪರಿಶೀಲಿಸಲು ಮುಖ್ಯ ನ್ಯಾಯಾಧೀಶರು ತಮ್ಮ ಸು-ಮೋಟು ಅಧಿಕಾರವನ್ನು ಬಳಸುತ್ತಾರೆ ಎಂದು ನಾನು ನಂಬಲಾರೆ. ಈ ವಿಷಯ ಕುರಿತು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಅಥವಾ ಸವಾಲನ್ನು ಸಲ್ಲಿಸುವವರೆಗೆ ಕಾಯಬೇಕಾಗಿದೆ ಮತ್ತು ಅದು ಈ ವಿಷಯಕ್ಕೆ ಹೋಗಲು ಸರಿಯಾದ ಮಾರ್ಗವಾಗಿದೆ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ.

ತಾವು ಮುಖ್ಯ ನ್ಯಾಯಮೂರ್ತಿಯಾಗಿದ್ದರೆ, ಕಾನೂನನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಂಬಿದ್ದರೂ ಸಹ, ದೇಶದ್ರೋಹದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಲು ಕಚೇರಿಯ ಸು-ಮೋಟು ಅಧಿಕಾರವನ್ನು ಬಳಸುವುದಿಲ್ಲ ಎಂದು ಹೇಳಿದರು.

ದಿ ವೈರ್ ಸಂದರ್ಶನದಲ್ಲಿ, ನ್ಯಾಯಮೂರ್ತಿ ಗುಪ್ತಾ ಅವರನ್ನು ಇತ್ತೀಚೆಗೆ ದೇಶದ್ರೋಹದ ಆರೋಪಕ್ಕೆ ಒಳಪಡಿಸಿದ ಮೂರು ಪ್ರಕರಣಗಳ ಬಗ್ಗೆ ಪ್ರಶ್ನಿಸಲಾಯಿತು.

ಮೊದಲು, ದಿಶಾ ರವಿ ಪ್ರಕರಣ. ಟೂಲ್ಕಿಟ್ ಸಂಪಾದಿಸಲು ಅಥವಾ ಅದರ ವಿಷಯಗಳನ್ನು ಟ್ವೀಟ್ ಮಾಡುವುದು ಖಂಡಿತವಾಗಿಯೂ ದೇಶದ್ರೋಹವಲ್ಲ ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ. ತಾನು ಟೂಲ್ಕಿಟ್ ಅನ್ನು ಪರಿಶೀಲಿಸಿದ್ದೇನೆ ಮತ್ತು ಅದರ ವಿಷಯದಲ್ಲಿ ದೇಶದ್ರೋಹಿ ಅಂಶ ಅಥವಾ ಅಪರಾಧವೂ ಇಲ್ಲ ಎಂದು ಅವರು ಹೇಳಿದರು. ದಿಶಾ ರವಿ ಅವರು ಪೋಯೆಟಿಕ್ ಜಸ್ಟೀಸ್ ಫೌಂಡೇಶನ್‌ನ ಸದಸ್ಯರೊಂದಿಗೆ ವೆಬ್‌ನಾರ್‌ನಲ್ಲಿ ಭಾಗಿಯಾಗುವುದು ದೇಶದ್ರೋಹ ಅಥವಾ ಅಪರಾಧವಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?

ಈ ಸಂಬಂಧದಲ್ಲಿ, ಖಲಿಸ್ತಾನವನ್ನು ಚಾಂಪಿಯನ್ ಮಾಡುವ ಅಥವಾ ನಿಷೇಧಿತ ಸಂಘಟನೆಯ ಸದಸ್ಯರಾಗಿರುವ ಯಾರೊಂದಿಗಾದರೂ ಮಾತನಾಡುವುದು ದೇಶದ್ರೋಹ ಅಥವಾ ಅಪರಾಧವೇ ಎಂದು ನ್ಯಾಯಮೂರ್ತಿ ಗುಪ್ತಾ ಅವರನ್ನು ಕೇಳಲಾಯಿತು. ಅವರ ಸ್ಪಷ್ಟ ಉತ್ತರವೆಂದರೆ ಅದು ದೇಶದ್ರೋಹವಲ್ಲ ಮತ್ತು ಅಪರಾಧವಲ್ಲ.

ಎರಡನೆಯದಾಗಿ, ರಿಪಬ್ಲಿಕ್ ದಿನದಂದು ಪ್ರತಿಭಟನಾಕಾರರೊಬ್ಬರು ಗುಂಡು ಹಾರಿಸಲ್ಪಟ್ಟ ಕಾರಣ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರು ಟ್ವೀಟ್ ಮಾಡುವುದು ದೇಶದ್ರೋಹವಲ್ಲ ಎಂದು ಹೇಳಿದರು, ಟ್ವೀಟ್‌ನ ವಿಷಯ ತಪ್ಪಾಗಿದ್ದರೂ ಅದು ದೇಶದ್ರೋಹ ಅಥವಾ ಅಪರಾಧವಲ್ಲ ಎಂದು ಹೇಳಿದರು. ಇದು ಕಳಪೆ ಪತ್ರಿಕೋದ್ಯಮವಾಗಬಹುದು, ಆದರೆ ಅದು ಅಪರಾಧವಲ್ಲ ಎಂದು ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

1995 ರಲ್ಲಿ ಸುಪ್ರೀಂ ಕೋರ್ಟ್ ಬಲ್ವಂತ್ ಸಿಂಗ್ ಪ್ರಕರಣದಲ್ಲಿ ’ಖಲಿಸ್ತಾನ್ ಜಿಂದಾಬಾದ್’ ಎಂದು ಕೂಗುವುದು ದೇಶದ್ರೋಹವಲ್ಲ ಎಂದು ತೀರ್ಪು ನೀಡಿತ್ತು. ಜೆಎನ್‌ಯು ವಿದ್ಯಾರ್ಥಿಗಳು, ’ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ ಇನ್ಸಾ ಅಲ್ಲಾ ಇನ್ಸಾ ಅಲ್ಲಾ’ ಎಂದು ಘೋಷಣೆ ಕೂಗಿದ್ದು ದೇಶದ್ರೋಹವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಗುಪ್ತಾ, ಘೋಷಣೆಯನ್ನು ಹಿಂಸಾಚಾರಕ್ಕೆ ಪೊಲೀಸರು ನೇರವಾಗಿ ಲಿಂಕ್ ಮಾಡಲು ಸಾಧ್ಯವಾದರೆ ಅದು ದೇಶದ್ರೋಹ ಎಂದು ಹೇಳಿದ್ದಾರೆ. ಮೂರು ವರ್ಷಗಳು ಕಳೆದಿವೆ. ಅಂತಹ ಯಾವುದೇ ಪುರಾವೆಗಳು ಮುಂದೆ ಬಂದಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಇದು ದೇಶದ್ರೋಹವಾಗುವ ಸಾಧ್ಯತೆಯಿದೆ ಎಂದು ತಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಗುಪ್ತಾ ಮಂಡಿಸಿದ ಪ್ರಮುಖ ಅಂಶವೆಂದರೆ, ’ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ ಇನ್ಸಾ ಅಲ್ಲಾ ಇನ್ಸಾ ಅಲ್ಲಾ’ ಎಂಬ ಘೋಷಣೆ ದೇಶದ್ರೋಹವಲ್ಲ ಮತ್ತು ಇದು ಹಿಂಸಾಚಾರಕ್ಕೆ ಪ್ರಚೋದನೆ ಎಂದು ಪೊಲೀಸರು ಸಾಬೀತುಪಡಿಸಿದರೆ ಮಾತ್ರ ದೇಶದ್ರೋಹವಾಗುತ್ತದೆ.
ಕಳೆದ ತಿಂಗಳು ದಿಶಾ ರವಿ ಅವರಿಗೆ ಜಾಮೀನು ನೀಡುತ್ತಿದ್ದಾಗ, “ಸರ್ಕಾರಗಳ ಗಾಯಗಳನ್ನು ಮುಚ್ಚಿಕೊಳ್ಳಲು ದೇಶದ್ರೋಹದ ಕಾನೂನನ್ನು ಬಳಸಲಾಗುತ್ತಿದೆ’’ ಎಂದು ಕಿರಿಯ ನ್ಯಾಯಾಧೀಶರು ಹೇಳಿದ್ದನ್ನು ತಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ನ್ಯಾಯಮೂರ್ತಿ ಗುಪ್ತಾ ದಿ ವೈರ್‌ಗೆ ತಿಳಿಸಿದರು.

ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...