- Advertisement -
- Advertisement -
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಪ್ರವಾಹ ಬಂದು ಹಲವಾರು ಹಳ್ಳಿಗಳು ಕೆಸರುಮಯವಾಗಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಬೇಕೆಂದು ನಾಡಿನ ಸಮಸ್ತ ವೈದ್ಯರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಪ್ರವಾಹ ಪೀಡಿತ ಹಳ್ಳಿಗಳಿಗೆ ತೆರಳುವ ವೈದ್ಯರು ಹಾಗೂ ದಾದಿಯರಿಗೆ ಈ ಕುರಿತು ಅನುಕೂಲಗಳನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೂ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಹಲವು ನೆರವುಗಳನ್ನು ಸಹ ಕುಮಾರಸ್ವಾಮಿಯವರು ನೀಡಿದ್ದು ಪ್ರವಾಹಕ್ಕೀಡಾದ ಹಲವು ಜಿಲ್ಲೆಗಳಿಗೆ ಭೀಟಿ ನೀಡಿ ಪರಿಶೀಲಿಸಿದ್ದರು.


