ಪಂಜಾಬ್‌ನಲ್ಲಿ ಭಾರಿ ಸಂಚಲನ ಸೃಷ್ಠಿಸಿದ್ದ ಸರಣಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ 18 ತಿಂಗಳ ಅವಧಿಯಲ್ಲಿ 11 ಜನರನ್ನು ಹತ್ಯೆಗೈದಿದ್ದು, ಶವವೊಂದರ ಮೇಲೆ ‘ಧೋಕೆಬಾಜ್’ (ಮೋಸಗಾರ) ಎಂದು ಬರೆದಿದ್ದ ಎಂದು ತಿಳಿದುಬಂದಿದೆ.
ಲಿಫ್ಟ್ ನೀಡುವುದಾಗಿ ಹೇಳಿ ಕಾರು ಹತ್ತಿಸಿಕೊಳ್ಳುತ್ತಿದ್ದ ಈತ, ನಂತರ ದರೋಡೆ ಮಾಡುತ್ತಿದ್ದ. ಮಂಗಳವಾರ ರೂಪನಗರ ಜಿಲ್ಲೆಯಿಂದ ಕೊಲೆಗಾರನ್ನು ಬಂಧಿಸಲಾಗಿದೆ. ಆರೋಪಿಯನ್ನು 33 ವರ್ಷದ ರಾಮ್ ಸರೂಪ್ ಎಂದು ಗುರುತಿಸಲಾಗಿದ್ದು, ಆತ ಹೋಶಿಯಾರ್‌ಪುರದ ಗರ್ಶಂಕರ್‌ನ ಚೌರಾ ಗ್ರಾಮದ ನಿವಾಸಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಬಲಿಪಶುಗಳೆಲ್ಲರೂ ಪುರುಷರಾಗಿದ್ದು, ಮುಖ್ಯವಾಗಿ ಅವರಿಗೆ ಲಿಫ್ಟ್ ನೀಡಿದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಆರೋಪಿಯು ನಂತರ ಕೊಲೆ ಮಾಡಿದ ವ್ಯಕ್ತಿಗಳನ್ನು ದರೋಡೆ ಮಾಡಿ, ಸಂತ್ರಸ್ತರು ಹಣ ನೀಡಲು ನಿರಾಕರಿಸಿದ ನಂತರ ಅವರನ್ನು ಕೊಲ್ಲುತ್ತಿದ್ದ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ತನ್ನ ಬಲಿಪಶುಗಳನ್ನು ತುಂಡು ಬಟ್ಟೆಯಿಂದ ಕತ್ತು ಹಿಸುಕಿದರೆ, ಇತರ ಪ್ರಕರಣಗಳಲ್ಲಿ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಕೊಲೆಯಲ್ಲಿ, ಆರೋಪಿಯು ಬಲಿಪಶುವಿನ ಬೆನ್ನಿನ ಮೇಲೆ ‘ಧೋಕೆಬಾಜ್’ (ವಂಚಕ) ಎಂದು ಬರೆದಿದ್ದಾನೆ. ಮೃತ ವ್ಯಕ್ತಿ ಖಾಸಗಿ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕರಾಗಿದ್ದರು.
ಆಗಸ್ಟ್ 18 ರಂದು ಟೋಲ್ ಪ್ಲಾಜಾ ಮೋದ್ರಾದಲ್ಲಿ ಚಹಾ ಮತ್ತು ನೀರು ಬಡಿಸುತ್ತಿದ್ದ 37 ವರ್ಷದ ವ್ಯಕ್ತಿಯ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಆರಂಭದಲ್ಲಿ ಬಂಧಿಸಲಾಯಿತು. ವಿಚಾರಣೆ ವೇಳೆ ಸರೂಪ್ ಅವರು ಇನ್ನೂ 10 ಜನರನ್ನು ಕೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾನೆ. ಈ ಪೈಕಿ ಐದು ಪ್ರಕರಣಗಳು ಈವರೆಗೆ ದೃಢಪಟ್ಟಿದ್ದು, ಉಳಿದ ಕೊಲೆಗಳ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 5 ರಂದು 34 ವರ್ಷದ ಟ್ರ್ಯಾಕ್ಟರ್ ರಿಪೇರಿ ಮಾಡುವವರ ಕೊಲೆ ಮತ್ತು ಜನವರಿ 24 ರಂದು ಕಾರಿನಲ್ಲಿ ಪತ್ತೆಯಾದ ಯುವಕನನ್ನು ಹತ್ಯೆ ಮಾಡಿದ ಪ್ರಕರಣಗಳು ಸೇರಿವೆ. ಹೋಶಿಯಾರ್ಪುರ್ ಮತ್ತು ಫತೇಗಢ್ ಜಿಲ್ಲೆಗಳಲ್ಲಿ ಕೃತ್ಯ ನಡೆದಿವೆ. ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಮಾದಕ ವ್ಯಸನಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಹಂತಕನ ಪ್ರಕಾರ, ಅವನು ಮೃತರ ಪಾದಗಳನ್ನು ಸ್ಪರ್ಶಿಸುತ್ತಿದ್ದನು ಮತ್ತು ಅವರನ್ನು ಕೊಂದ ನಂತರ ಪಶ್ಚಾತ್ತಾಪ ಪಡುತ್ತಿದ್ದನು. ನಶೆ ಏರಿದ ನಂತರವೇ ಅಪರಾಧಗಳನ್ನು ಎಸಗಿರುವುದಾಗಿ ಒಪ್ಪಿಕೊಂಡಿರುವ ಆತ, ಇನ್ನು ಮುಂದೆ ಅವುಗಳನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.
ಆರೋಪಿಯು ಮೂರು ಮದುವೆಯಾಗಿದ್ದನೆಂದು ವರದಿಯಾಗಿದೆ. ಆದರೆ, ಆತನ ಸಲಿಂಗಿಯಾಗಿದ್ದ ಕಾರಣ ಎರಡು ವರ್ಷಗಳ ಹಿಂದೆ ಆತನ ತನ್ನ ಮನೆ ತೊರೆದಿದ್ದ.
“ನಾವು ಆರೋಪಿಯನ್ನು ಬಂಧಿಸಿದ್ದೇವೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ; ಗುಜರಾತ್| ಸೂರತ್ ಪೊಲೀಸರ ಕಾರ್ಯಾಚರಣೆ; 10, 12ನೇ ತರಗತಿವರೆಗೆ ಓದಿದ್ದ ನಕಲಿ ವೈದ್ಯರ ಬಂಧನ


