Homeಮುಖಪುಟಕ್ಲಿಷ್ಟ ಸನ್ನಿವೇಶದಲ್ಲಿ ಗೊಂದಲ ಹೆಚ್ಚಿಸುತ್ತಿರುವ ಕಾಂಗ್ರೆಸ್ಸಿನ ಬುದ್ಧಿವಂತರು

ಕ್ಲಿಷ್ಟ ಸನ್ನಿವೇಶದಲ್ಲಿ ಗೊಂದಲ ಹೆಚ್ಚಿಸುತ್ತಿರುವ ಕಾಂಗ್ರೆಸ್ಸಿನ ಬುದ್ಧಿವಂತರು

- Advertisement -
- Advertisement -

ಕಾಂಗ್ರೆಸ್ಸಿನ ಬುದ್ಧಿವಂತರ ನಡೆ ವಿಚಿತ್ರವಾಗಿದೆ. ಪಕ್ಷದ ಹಿರಿಯ ನಾಯಕರುಗಳೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಮತ್ತು ನೈಪುಣ್ಯತೆಗಳಿಗೆ ಹೆಸರುವಾಸಿಯಾದವರೂ ಆದ ಜೈರಾಮ್ ರಮೇಶ್, ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಇತ್ತೀಚಿಗೆ ಬೇರೆ ಬೇರೆ ಕಡೆ ಮಾತನಾಡುತ್ತಾ ಪ್ರಧಾನಮಂತ್ರಿ ಮೋದಿಯವರನ್ನು ಪದೇ ಪದೇ ಎಲ್ಲಾ ವಿಚಾರಗಳಲ್ಲೂ ದೂರುವುದು ಮತ್ತು ಅವರಲ್ಲಿ ತಪ್ಪು ಕಂಡು ಹಿಡಿಯುವುದು ಸರಿಯಲ್ಲವೆಂತಲೂ, ಇದರಿಂದಾಗಿ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ಹಾನಿ ಅಂತಲೂ ಹೇಳಿಕೆ ನೀಡಿದ್ದಾರೆ.

ಮೊದಲಿಗೆ ಈ ಮಾತುಗಳನ್ನು ಆಡಿದ್ದು ಜೈರಾಮ್ ರಮೇಶ್. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಆಡಿದ ಮೇಲಿನ ಅರ್ಥದ ಮಾತುಗಳನ್ನು ಆ ನಂತರ ಕ್ರಮವಾಗಿ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಪುನರುಚ್ಚರಿಸಿದ್ದಾರೆ. ಹಿಂದೊಮ್ಮೆ ಮೋದಿಯವರನ್ನು ತೀರಾ ಕೆಳಮಟ್ಟದಲ್ಲಿ ಟೀಕಿಸಿದ್ದ ಇನ್ನೊಬ್ಬ ಬುದ್ಧಿವಂತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಕೂಡಾ ಈಗ ಈ ಹೊಸ ರಾಗಕ್ಕೆ ತಾಳ ಹಾಕುತ್ತಿದ್ದಾರೆ.

ಜೈರಾಂ ರಮೇಶ್

ಇದಾಗುವುದಕ್ಕೆ ಕೆಲದಿನಗಳ ಹಿಂದೆ ಮೋದಿ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ ವಿಚಾರದಲ್ಲೂ ಕೆಲ ಕಾಂಗ್ರೆಸ್ ನಾಯಕರು ಸರಕಾರದ ನಡೆಯನ್ನು ಸಮರ್ಥಿಸುತ್ತಾ ತಮ್ಮ ಪಕ್ಷದ ನಿಲುವನ್ನು ಖಂಡಿಸಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು. ಹೀಗೆ ಮಾಡಿದವರಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಯ ನಾಯಕ ಎಂದೇ ಪರಿಗಣಿತವಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೇರಿದ್ದರು ಎನ್ನುವುದನ್ನು ಗಮನಿಸಬೇಕು.

ಮೇಲ್ನೋಟಕ್ಕೆ ಹೀಗೆಲ್ಲಾ ಹೇಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಪಕ್ಷಭೇದ ಮರೆತು ಒಳ್ಳೆಯ ಕೆಲಸಗಳನ್ನು ಯಾವುದೇ ಪಕ್ಷದ ಸರಕಾರ ಅಥವಾ ಯಾವುದೇ ಪಕ್ಷಕ್ಕೆ ಸೇರಿದ ಪ್ರಧಾನ ಮಂತ್ರಿ ಮಾಡಿದರೂ ಅದನ್ನು ಪ್ರಾಂಜಲ ಮನಸ್ಸಿನಿಂದ ಮೆಚ್ಚಿಕೊಳ್ಳಬೇಕು ಎನ್ನುವ ಪ್ರಬುದ್ಧ ನಿಲುವು ಇದು ಎಂಬಂತೆ ಇದು ತತ್‍ಕ್ಷಣ ಅನ್ನಿಸಬಹುದು. ಆದರೆ ದೇಶದ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಮತ್ತು ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಮಗ್ರವಾಗಿ ಗಮನದಲ್ಲಿರಿಸಿಕೊಂಡು ನೋಡಿದಾಗ ಈ ನಾಯಕರ ಹೇಳಿಕೆ ರಾಜಕೀಯ ಪ್ರಬುದ್ಧತೆಯಿಂದ ಮೂಡಿಬಂದದ್ದು ಅಂತ ಅನ್ನಿಸುವುದಿಲ್ಲ. ಬದಲಿಗೆ, ಅವರ ಈ ಹೇಳಿಕೆಗಳು ಅವರಿಗೆ ಇಂದಿನ ರಾಜಕೀಯ ಪರಿಸ್ಥಿತಿಯ ಗಂಭೀರತೆಯೇ ಅರ್ಥವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಕಪಿಲ್ ಸಿಬಲ್

ಸಿದ್ಧಾಂತಗಳ ವಿಚಾರ ಹಾಗಿರಲಿ, ತೀರಾ ವ್ಯಾವಹಾರಿಕವಾದ ವಿಚಾರಗಳಲ್ಲೂ ಅವರಿಗಿರುವ ಗೊಂದಲವನ್ನು ಇದು ತೋರಿಸುತ್ತದೆ. ಕಾಂಗ್ರೆಸ್ಸಿನ ಚಾಣಾಕ್ಷ ಸಂಸದೀಯ ಪಟುಗಳು ಎನ್ನಲಾದ ಈ ಮಂದಿಯೇ ಈ ರೀತಿಯ ಗೊಂದಲದಲ್ಲಿ ಸಿಲುಕಿರುವಾಗ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು? ಅವರು ತಮ್ಮ ತಮ್ಮ ಪರಿಸರ, ಪರಿಸ್ಥಿತಿಯಲ್ಲಿ ಬಿಜೆಪಿಯ ದಾಳಿಯನ್ನು ಎದುರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.

ಮೋದಿಯವರನ್ನು ಎಲ್ಲದಕ್ಕೂ ಟೀಕಿಸುವುದು ಸರಿಯಲ್ಲ ಎನ್ನುತ್ತಿರುವ ಕಾಂಗ್ರೆಸ್ ನಾಯಕರುಗಳು ಅದಕ್ಕೆ ನೀಡುತ್ತಿರುವ ಸಮರ್ಥನೆ ಕೂಡ ವಿಚಿತ್ರವಾಗಿದೆ. ಮೋದಿ ಸರಕಾರ ಕೆಲ ಜನಪ್ರಿಯ ಯೋಜನೆಗಳನ್ನು ಅದ್ಭುತವಾಗಿ ರೂಪಿಸಿದ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕಾರಣ ಮೋದಿಯ ಆಡಳಿತ ಮಾದರಿಯಲ್ಲಿ ಮೆಚ್ಚಬೇಕಾಗಿರುವ ಹಲವಾರು ಅಂಶಗಳಿವೆ ಎನ್ನುವುದು ಅವರ ವಾದ.

ಒಂದು ಸರಕಾರದ ಆಡಳಿತ ಮಾದರಿಯ ಬಗ್ಗೆ ತೀರ್ಪು ನೀಡಲು ಕೇವಲ ಕೆಲ ಜನಪ್ರಿಯ ಯೋಜನೆಗಳಷ್ಟೇ ಯಾವತ್ತಿಗೂ ಆಧಾರವಾಗಬಾರದು. ಎಲ್ಲಾ ಕಾಲದಲ್ಲೂ ಎಲ್ಲಾ ಸರಕಾರಗಳೂ ಕೆಲ ಯೋಜನೆಗಳನ್ನು ಚೆನ್ನಾಗಿಯೇ ನಡೆಸಿವೆ. ಅದನ್ನು ಜನ ಮೆಚ್ಚಿದ್ದೂ ಇದೆ. ಮೋದಿ ಸರಕಾರ ಕೆಲ ಯೋಜನೆಗಳನ್ನು ಹಿಂದಿನ ಎಲ್ಲಾ ಸರಕಾರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಿರಬಹುದು. ಪ್ರಧಾನಮಂತ್ರಿಗಳು ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ತೋರುತ್ತಿರುವ ತಾಂತ್ರಿಕವಾದ ಕ್ಷಮತೆಯನ್ನು ಆಡಳಿತದಲ್ಲಿಯೂ ಬಳಸಿಕೊಳ್ಳುತ್ತಿದೆ ಎನ್ನುವುದು ನಿರ್ವಿವಾದ. ಆದರೆ ಇಷ್ಟಕ್ಕೆ ಅದೊಂದು ಅದ್ಭುತ ಆಡಳಿತ ಮಾದರಿ ಎನ್ನುವ ನಿರ್ಣಯಕ್ಕೆ ಕಾಂಗ್ರೆಸ್ ನಾಯಕರುಗಳು ಯಾಕೆ ಬಂದರೋ ತಿಳಿಯುತ್ತಿಲ್ಲ.

ಇಡೀ ದೇಶ ಇಂದು ಕಂಡುಕೇಳರಿಯದ ಆರ್ಥಿಕ ತಲ್ಲಣವನ್ನು ಅನುಭವಿಸುತ್ತಿದೆ. ಸಮಾಜದಲ್ಲಿ ಹಿಂಸೆ ಎಗ್ಗಿಲ್ಲದೆ ವಿಜೃಂಭಿಸುತ್ತಿದೆ. ಪ್ರತಿರೋಧದ ಧ್ವನಿ ಚಾರಿತ್ರಿಕವಾಗಿ ಉಡುಗಿಹೋಗಿದೆ. ಇವೆಲ್ಲವೂ ಅದೇ ಆಡಳಿತ ಮಾದರಿಯ ಬಳವಳಿಗಳಲ್ಲವೇ? ಇನ್ನೊಂದು ಅರ್ಥವಾಗದ ವಿಚಾರ ಎಂದರೆ ಈ ಕಾಂಗ್ರೆಸ್ ನಾಯಕರುಗಳೆಲ್ಲಾ ಮೋದಿಯ ವಿರುದ್ಧ ಯಾರು ಮಾಡಿದ ಯಾವ ಟೀಕೆಗಳನ್ನು ಗಮನದಲ್ಲಿರಿಸಿಕೊಂಡು ಈ ರೀತಿ ಹೇಳಿದ್ದು ಎನ್ನುವ ಪ್ರಶ್ನೆ. ವಾಸ್ತವದಲ್ಲಿ 2019ರ ಚುನಾವಣಾ ಫಲಿತಾಂಶದ ನಂತರ ಇಡೀ ದೇಶ ಬಾಯಿಗೆ ಬೀಗ ಜಡಿದು ಕುಳಿತಿದೆ. ಯಾರೊಬ್ಬರೂ ಈ ಸರಕಾರದ ಬಗ್ಗೆ, ಅದರ ನೀತಿಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಏನನ್ನೂ ಹೇಳುತ್ತಿಲ್ಲ. ಆದುದರಿಂದ ಕಾಂಗ್ರೆಸ್‍ನ ಬುದ್ಧಿವಂತರ ಯೋಚನಾ ಲಹರಿಯೇ ಒಗಟಾಗಿ ಕಾಣಿಸುತ್ತಿದೆ.

ಕಾಶ್ಮೀರದ ವಿಚಾರ ಅದೆಷ್ಟು ಕ್ಲಿಷ್ಟಕರವಾಗಿದೆ ಎಂದರೆ ಬರಬರುತ್ತಾ ಈ ವಿಚಾರದಲ್ಲಿ ಸ್ಪಷ್ಟತೆಗಿಂತ ಗೊಂದಲಗಳೇ ಹೆಚ್ಚಾಗುತ್ತಿವೆ. ಮೊನ್ನೆ ಸಂವಿಧಾನ ತಜ್ಞ ಮತ್ತು ಹೈದರಾಬಾದಿನ ಕಾನೂನು ವಿಶ್ವವಿದ್ಯಾನಿಯದ ಕುಲಪತಿಗಳಾಗಿದ್ದ ಪ್ರೊಫೆಸರ್ ಫೈಸಾನ್ ಮುಸ್ತಫಾ ಖ್ಯಾತ ಟೆಲಿವಿಷನ್ ನಿರೂಪಕ ಕರಣ್ ತಾಪರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಕಾಶ್ಮೀರದ ವಿಷಯದ ಕುರಿತು ಹಲವಾರು ಸೂಕ್ಷ್ಮಗಳನ್ನು ದೇಶದ ಮುಂದೆ ತೆರೆದಿಟ್ಟರು. ಅವರ ಪ್ರಕಾರ 370ನೇ ವಿಧಿಯ ರದ್ಧತಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನೀಡಿದ್ದ ಬಹುತೇಕ ಸಮರ್ಥನೆಗಳೆಲ್ಲಾ ಅಪ್ಪಟ ಸುಳ್ಳು. ಕಾಶ್ಮೀರದಲ್ಲಿ 370ನೇ ವಿಧಿ ಇದ್ದಾಗ ಮೀಸಲಾತಿ ಇರಲಿಲ್ಲ, ಮಾಹಿತಿ ಹಕ್ಕು ಇರಲಿಲ್ಲ, ವಿದ್ಯಾಭ್ಯಾಸ ಖಾತರಿ ಇರಲಿಲ್ಲ, ಅಲ್ಲಿನ ಮಹಿಳೆಯರು ಹೊರಗಿನವರನ್ನು ಮದುವೆಯಾದರೆ ಅವರಿಗೆ ಆಸ್ತಿ ಹಕ್ಕು ಇರಲಿಲ್ಲ ಇತ್ಯಾದಿ ವಿಚಾರಗಳಲ್ಲಿ ಸರಕಾರ ಹೇಳಿದ್ದು ಒಂದಾದರೆ ವಾಸ್ತವ ಸ್ಥಿತಿ ಬೇರೆಯೇ ಇತ್ತು.

ಅದಕ್ಕಿಂತಲೂ ಮುಖ್ಯವಾಗಿ 370ನೇ ವಿಧಿ ರದ್ದು ಮಾಡಿದ ಕಾರಣಕ್ಕೆ ಕಾಶ್ಮೀರ ಕಳೆದುಕೊಂಡದ್ದಕ್ಕಿಂತ ಹೆಚ್ಚಾಗಿ ಕೇಂದ್ರ ಸರಕಾರ ಕಾಶ್ಮೀರದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು ಹೇಗೆ ಎನ್ನುವುದನ್ನು ಎತ್ತಿ ತೋರಿಸಿದರು. ಈ 370ನೇ ವಿಧಿಯ ರದ್ದು ಎನ್ನುವುದು ಕೇವಲ ಸಾಂಕೇತಿಕವಾಗಿತ್ತು ಎಂದರು. ದಿನದಿಂದ ದಿನಕ್ಕೆ ಹೆಚ್ಚು ಕಗ್ಗಂಟಾಗಿ ಪರಿಣಮಿಸುತ್ತಿರುವ ಈ ವಿಷಯದಲ್ಲಿ ಅಡಗಿರುವ ಸೂಕ್ಷ್ಮಗಳನ್ನು ದೇಶದ ಮುಂದಿಡಬೇಕಾಗಿದ್ದ ನಾಯಕರುಗಳು ಗುಂಪಿನಲ್ಲಿ ಸೇರಿ ಗೋವಿಂದಾ ಎನ್ನುತ್ತಿರುವುದು ತೀರಾ ಅಸಂಗತವಾಗಿದೆ.

ರಾಜಕೀಯ ನಾಯಕರು ಪಕ್ಷಾತೀತವಾಗಿ ಯೋಚಿಸಬೇಕು, ವಿರೋಧಿಸುವುದಕ್ಕಾಗಿ ವಿರೋಧಿಸಬಾರದು, ಸೂಕ್ಷ್ಮ ವಿಚಾರಗಳಲ್ಲಿ ಸರಕಾರಕ್ಕೆ ಸಹಕರಿಸಬೇಕು ಇತ್ಯಾದಿ ವಾದಗಳನ್ನು ಒಪ್ಪಿಕೊಳ್ಳಬಹುದು. ಹೀಗೆ ಮಾಡುವುದು ರಾಜಕೀಯ ಪ್ರಬುದ್ಧತೆಯ ಸಂಕೇತ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ ಮೋದಿಯವರ ಆಡಳಿತ ಮಾದರಿಗೆ ಮೆಚ್ಚುಗೆ ಸೂಚಿಸುವಲ್ಲಿ ಮತ್ತು 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಯಾವುದೇ ಪ್ರಶ್ನೆಗಳನ್ನು ಎತ್ತದೆ ಸ್ವಾಗತಿಸುವಲ್ಲಿ ಕೆಲ ಕಾಂಗ್ರೆಸ್ ನಾಯಕರುಗಳು ತೋರಿದ್ದು ಪ್ರಬುದ್ಧತೆಯನ್ನಲ್ಲ. ಅವರು ತಮ್ಮ ಗೊಂದಲವನ್ನು ಪ್ರದರ್ಶಿಸಿದ್ದಾರೆ, ದೇಶದ ಆಗುಹೋಗುಗಳ ವಿಚಾರದಲ್ಲಿ ಅವರು ಎಷ್ಟು ನಿರ್ಲಕ್ಷತೆಯಿಂದ ಇದ್ದಾರೆ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಈಗ ಇರುವ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೆ ನೂಕುವ ಈ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಿರುವ ಈ ನಾಯಕರುಗಳ ಪಕ್ಷ ನಿಷ್ಠೆಯ ಬಗ್ಗೆಯೂ ಸಂದೇಹ ಮೂಡುತ್ತದೆ. ಹಾಗೊಂದು ವೇಳೆ ಮೋದಿಯವರನ್ನು ಟೀಕಿಸುವ ವಿಚಾರದಲ್ಲಿ ಅವರಿಗೇನಾದರೂ ಭಿನ್ನಾಭಿಪ್ರಾಯವಿದ್ದದ್ದೇ ಆದಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿ ಪ್ರಶ್ನಾರ್ಹವಾದ ಒಂದು ಆಡಳಿತ ಮಾದರಿಗೆ ಹೊಸ ಒಪ್ಪಿಗೆಯ ಮುದ್ರೆಯನ್ನು ನೀಡುವ ಬದಲು, ಪಕ್ಷದ ವೇದಿಕೆಯಲ್ಲಿ ಅವರು ತಮ್ಮ ಅಭಿಪ್ರಾಯ ಮಂಡಿಸಬಹುದಿತ್ತು. ಅದೇನೇ ಇರಲಿ. ಕಾಂಗ್ರೆಸ್ ಪಕ್ಷಕ್ಕೆ ಇವರುಗಳ ಹೇಳಿಕೆಯಿಂದ ಆಗುವ ಲಾಭ ನಷ್ಟಗಳ ವಿಚಾರ ಮುಖ್ಯವಲ್ಲ. ಇಂತಹ ಹೇಳಿಕೆಗಳನ್ನೆಲ್ಲಾ ನೀಡುವ ಮೂಲಕ ಈ ಮಂದಿ ವಿರೋಧ ಪಕ್ಷಗಳಿಗಿರುವ ಸಾಂವಿಧಾನಿಕ ಜವಾಬ್ದಾರಿಯನ್ನು ಕ್ಷುಲ್ಲಕಗೊಳಿಸುತ್ತಿದ್ದಾರೆ ಎನ್ನುವುದು ಗಂಭೀರವಾಗಿ ಯೋಚಿಸಬೇಕಾದ ವಿಚಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...