ದೆಹಲಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜೆಎನ್‌ಯು ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್‌ಗೆ ಗುಂಡು ಹಾರಿಸಲು ಯತ್ನಿಸಿದ ಆರೋಪ ಹೊತ್ತಿದ್ದ ನವೀನ್ ದಲಾಲ್ ಈಗ ಹರಿಯಾಣದ ಬಹದ್ದೂರ್‌ಗ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿಯಾಗಿದ್ದಾರೆ. ಅಕ್ಟೋಬರ್ 21 ರಂದು ಹರಿಯಾಣ ಚುನಾವಣೆ ನಡೆಯಲಿದೆ.
2018ರ ಆಗಸ್ಟ್‌ನಲ್ಲಿ, ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಬಳಿ ಜೆಎನ್‌ಯು ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ಅವರ ಮೇಲೆ ನವೀನ್ ದಲಾಲ್ ಮತ್ತು ದರ್ವೇಶ್ ಶಹಪುರ್ ಅವರು ಗುಂಡು ಹಾರಿಸಿದ್ದರು. ಸಾಕ್ಷಿಗಳ ಪ್ರಕಾರ ಆರೋಪಿಯ ಬಂದೂಕು ಜಾಮ್ ಆಗಿದ್ದರಿಂದ ಎರಡು ಗುಂಡುಗಳನ್ನು ಹಾರಿಸಿದ್ದರೂ ಕೂಡ ಖಾಲಿದ್ ಯಾವುದೇ ಗಾಯಗಳಾಗದೆ ಪಾರಾಗಿದ್ದರು.
The person who attacked me (on the right) with Editor in Chief of Sudarshan News, Suresh Chavhanke. No further comments!!! pic.twitter.com/IfQBwLNcwA
— Umar Khalid (@UmarKhalidJNU) August 16, 2018
ಆಗ ತಕ್ಷಣ ಇಬ್ಬರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಈ ದಾಳಿ ದೇಶಕ್ಕೆ “ಸ್ವಾತಂತ್ರ್ಯ ದಿನಾಚರಣೆ”ಯ ಉಡುಗೊರೆ ಎಂದು ವೀಡಿಯೊ ಅಪ್‌ಲೋಡ್ ಮಾಡಿದ ನಂತರ ಅವರಿಬ್ಬರನ್ನು ಬಂಧಿಸಲಾಗಿತ್ತು. ಶಿವಸೇನೆ ಅಭ್ಯರ್ಥಿ ದಲಾಲ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ.
ಆರೋಪಿಯೊಬ್ಬನಿಗೆ ಟಿಕೇಟ್ ನೀಡುವುದರ ಕುರಿತ ಪ್ರಶ್ನೆಗೆ ಶಿವಸೇನೆ, ದಲಾಲ್ ಅವರ ಆ ಕ್ರಮವನ್ನು “ಇದು ದೇಶಪ್ರೇಮವನ್ನು ತೋರಿಸುವ ವಿಧಾನ” ಎಂದು ಕರೆದಿದೆ. ದಲಾಲ್ ತನ್ನನ್ನು “ಗೌ ರಕ್ಷಕ್” ಮತ್ತು “ರಾಷ್ಟ್ರೀಯವಾದಿ” ಎಂದು ಕರೆದುಕೊಳ್ಳುತ್ತಾನೆ. ಆರು ತಿಂಗಳ ಹಿಂದೆಯಷ್ಟೆ ಆತ ಶಿವಸೇನೆ ಪಕ್ಷ ಸೇರಿದ್ದರು.
ಹರಿಯಾಣದ ಶಿವಸೇನೆ ನಾಯಕ ವಿಕ್ರಮ್ ಯಾದವ್ ಅವರ ಉಮೇದುವಾರಿಕೆಯನ್ನು ದೃಢಪಡಿಸಿದ್ದಾರೆ ಮತ್ತು ಗೋ ರಕ್ಷಣೆ ಮತ್ತು “ರಾಷ್ಟ್ರ ವಿರೋಧಿಗಳ” ವಿರುದ್ಧದ ಅವರ ನಿಲುವಿನಿಂದಾಗಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನವೀನ್ ದಲಾಲ್ ಅವರ ವಿರುದ್ಧ ಉಮರ್ ಖಾಲಿದ್ ಪ್ರಕರಣ ಸೇರಿದಂತೆ ಮೂರು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಅವರು ಒಮ್ಮೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಸುವಿನ ಕತ್ತರಿಸಿದ ತಲೆಯನ್ನು ಇಟ್ಟುಕೊಂಡಿದ್ದರು. ಹರಿಯಾಣದಲ್ಲಿ ನಡೆದ ಗಲಭೆ ಪ್ರಕರಣದ ಮೇಲೂ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿ ಐಟಿ ಸೆಲ್ ನಡೆಸುತ್ತಿರುವ ತಪ್ಪು ಮಾಹಿತಿಯ ಅಭಿಯಾನದಿಂದಾಗಿ ಉಮರ್ ಖಾಲಿದ್ ಅವರನ್ನು ಕೊಲ್ಲಲು ಆರೋಪಿಗಳಿಬ್ಬರು ಯತ್ನಿಸಿದ್ದರು. ಜೆಎನ್‌ಯು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪವಿದೆ. ಆದರೆ ತನಿಖೆಯ ಸಮಯದಲ್ಲಿ ಈ ವಿಡಿಯೋ ನಿಜಕ್ಕೂ ನಕಲಿ ಎಂದು ತಿಳಿದುಬಂದಿದೆ ಮತ್ತು ಕನ್ಹಯ್ಯ ಕುಮಾರ್ ಮತ್ತು ಉಮರ್ ಖಾಲಿದ್ ಇಬ್ಬರ ವಿರುದ್ಧದ ಎಲ್ಲಾ ಆರೋಪಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಸತ್ಯವು ಹೊರಬಂದಿದ್ದರೂ, ಹಲವು ಗೋಧಿ ಮಾಧ್ಯಮಗಳು ಜೆಎನ್‌ಯು ವಿದ್ಯಾರ್ಥಿಗಳನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಉಲ್ಲೇಖಿಸುತ್ತಲೇ ಇವೆ. ವಿದ್ಯಾರ್ಥಿಯ ಮೇಲೆ ಕೊಲೆ ಪ್ರಯತ್ನ ಮಾಡಿದ ವ್ಯಕ್ತಿಯು ಮುಕ್ತವಾಗಿ ತಿರುಗಾಡುತ್ತಿದ್ದಾನೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎಂದರೆ ನಾವು ಯಾವ ಕಾಲದಲ್ಲಿದ್ದೇವೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲಾತಾಣದಲ್ಲಿ ಕೇಳಿಬಂದಿವೆ.


