ಏಪ್ರಿಲ್ 16 ರಂದು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಕೇಂದ್ರಕ್ಕೆ ಪ್ರವೇಶಿಸುವಾಗ ವಿದ್ಯಾರ್ಥಿಗಳು ಧರಿಸಿದ್ದ ‘ಜನಿವಾರ’ವನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಹೊರತೆಗೆಸಿದ್ದಾರೆ ಎಂದು ಶಿವಮೊಗ್ಗ ನಗರದ ಬ್ರಾಹ್ಮಣ ಸಮುದಾಯದ ಗುಂಪು ಆರೋಪಿಸಿದೆ. ಈ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಮುಸ್ಲಿಂ ಶಿಕ್ಷಕಿಯರು ಸೇರಿದಂತೆ ವಿದ್ಯಾರ್ಥಿನಿಯರು ಧಾರ್ಮಿಕ ಕಾರಣಕ್ಕೆ ಧರಿಸಿದ್ದ ಶಿರವಸ್ತ್ರವನ್ನು ತೆಗೆಸಿದರೆ ಬೆಂಬಲಿಸಿದವರು ಈಗ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ನೇತೃತ್ವದ ಬ್ರಾಹ್ಮಣ ಸಮುದಾಯದ ನಿಯೋಗವು ಗುರುವಾರ ಉಪ ಆಯುಕ್ತ ಗುರುದತ್ತ ಹೆಗ್ಡೆ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
“ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಮೂವರು ವಿದ್ಯಾರ್ಥಿಗಳು ತಮ್ಮ ‘ಜನಿವಾರ’ ತೆಗೆಯುವಂತೆ ಕೇಳಿದ್ದಾರೆ. ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರು ಅದನ್ನು ವಿರೋಧಿಸಿದ್ದು, ಜನಿವಾರವನ್ನು ತೆಗೆಯದೆಯೇ ಪರೀಕ್ಷಾ ಸಭಾಂಗಣಕ್ಕೆ ಪ್ರವೇಶಿಸಿದ್ದಾರೆ. ಅವರಿಗೆ ಅವಕಾಶ ನೀಡಲಾಗಿದ್ದು, ವಿರೋಧಿಸದ ಇತರರನ್ನು ಅದನ್ನು ತೆಗೆಯುವಂತೆ ಮಾಡಲಾಯಿತು.” ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಸಿಬ್ಬಂದಿ ‘ಜನಿವಾರ’ವನ್ನು ಕಸದ ಬುಟ್ಟಿಗೆ ಎಸೆದಿರುವುದು ದುರದೃಷ್ಟಕರ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಇದಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು” ಎಂದು ಅವರು ಹೇಳಿದ್ದಾರೆ. ಇಷ್ಟೆ ಅಲ್ಲದೆ, ಮಣಿಕಟ್ಟಿನ ಸುತ್ತಲೂ ಧರಿಸಲಾಗಿದ್ದ ‘ಕಾಶಿ ದರ’ವನ್ನು ತೆಗೆದುಹಾಕಲು ಸಿಬ್ಬಂದಿ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈ ಸಮಸ್ಯೆಯನ್ನು ಪರಿಶೀಲಿಸುವುದಾಗಿ ನಿಯೋಗಕ್ಕೆ ತಿಳಿಸಿದ್ದು, ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿ ಹೇಳಿದೆ.
ಘಟನೆ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಮುಸ್ಲಿಂ ಶಿಕ್ಷಕಿಯರು ಸೇರಿದಂತೆ ವಿದ್ಯಾರ್ಥಿನಿಯರು ಧಾರ್ಮಿಕ ಕಾರಣಕ್ಕೆ ಧರಿಸಿದ್ದ ಶಿರವಸ್ತ್ರವನ್ನು ತೆಗೆಸಿದ್ದನ್ನು ಬೆಂಬಲಿಸಿದವರು ಈಗ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿ ಹಿಂದುಳಿದ ಸಮದಾಯವಾದ ಮುಸ್ಲಿಮರಿಗೆ ಒಂದು ನ್ಯಾಯ, ಬಲಿಷ್ಠ ಬ್ರಾಹ್ಮಣ ಸಮುದಾಯಕ್ಕೆ ಒಂದು ನ್ಯಾಯವೆ ಎಂದು ಕೇಳಿದ್ದಾರೆ. ಶಿವಮೊಗ್ಗ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳು: ‘ಸಾಂಸ್ಕೃತಿಕ ಹೇರಿಕೆ’ ವಿರೋಧಿಸಿದ ದಕ್ಷಿಣ ರಾಜ್ಯಗಳು
ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳು: ‘ಸಾಂಸ್ಕೃತಿಕ ಹೇರಿಕೆ’ ವಿರೋಧಿಸಿದ ದಕ್ಷಿಣ ರಾಜ್ಯಗಳು

