ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದ ಪ್ರತಿ ತಿನಿಸು ಮತ್ತು ಆಹಾರ ಮಳಿಗೆಗಳಲ್ಲಿ ಮಾಲೀಕರ ಗುರುತಿನ ಚೀಟಿಯನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ ಕೆಲವೇ ದಿನಗಳಲ್ಲಿ, ರಾಜ್ಯದ PWD ಮತ್ತು ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಭಾನುವಾರ ನವದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಅಂಗಡಿ ಮಾಲೀಕರ ಗುರುತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಷ್ಟೆ ಅಲ್ಲದೆ, ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಹಿಮಾಚಲ ಕಾಂಗ್ರೆಸ್ ಸಹ-ಪ್ರಭಾರಿ ರಾಜೀವ್ ಶುಕ್ಲಾ ಅವರನ್ನು ಕೂಡಾ ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಹೇಳಿಕೆಗಳ ಬಗ್ಗೆಗಿನ ನಿಲುವನ್ನು ಸ್ಪಷ್ಟಪಡಿಸುವ ಪ್ರಯತ್ನದಲ್ಲಿದ್ದಾರೆ.
“ಖರ್ಗೆ ಅವರೊಂದಿಗಿನ ಸಭೆಯಲ್ಲಿ, ವಿಕ್ರಮಾದಿತ್ಯ ಸಿಂಗ್ ಅವರು ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸುವ ಮತ್ತು ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಪಕ್ಷವನ್ನು ಬಲಪಡಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದು ತಮ್ಮ ಪ್ರಮುಖ ಆದ್ಯತೆಗಳು ಎಂದು ಅವರು ಹೇಳಿದರು. ಇದನ್ನು ಸಂಪೂರ್ಣ ಬದ್ಧತೆಯಿಂದ ಮುಂದುವರಿಸಲಾಗುವುದು” ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿವೆ.
ಇದನ್ನೂಓದಿ: ಬಿಹಾರ | ಚುನಾವಣೆ ನಂತರ ಅಥವಾ ಮುಂಚೆ, ಬಿಜೆಪಿ ಜೊತೆ ಮೈತ್ರಿಯಿಲ್ಲ: ಪ್ರಶಾಂತ್ ಕಿಶೋರ್
“ಹೆಚ್ಚುವರಿಯಾಗಿ, ವಿಕ್ರಮಾದಿತ್ಯ ಸಿಂಗ್ ಅವರು ತಮ್ಮ ಸರ್ಕಾರವು ಪಕ್ಷದ ಮೂಲ ತತ್ವಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ನಿರ್ಧರಿಸುತ್ತದೆ ಎಂದು ಭರವಸೆ ನೀಡಿದರು.” ಎಂದು ಕಾಂಗ್ರೆಸ್ ಮೂಲ ಹೇಳಿವೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವಿಕ್ರಮಾದಿತ್ಯ ಸಿಂಗ್, “ನಾನು ಹಿಮಾಚಲ ಪ್ರದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಖರ್ಗೆ ಅವರೊಂದಿಗೆ ಪ್ರಸ್ತಾಪಿಸಿದೆ. ಅವರು ನನ್ನ ಮಾತನ್ನು ತಾಳ್ಮೆಯಿಂದ ಆಲಿಸಿದರು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಮರ್ಪಿತ ಸೈನಿಕರಾಗಿದ್ದಾರೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಕಾಂಗ್ರೆಸ್‌ನ ಮೂಲ ತತ್ವಗಳಲ್ಲಿ ಯಾವುದೇ ರಾಜಿ ಇಲ್ಲ” ಎಂದು ಹೇಳಿದರು.
ವಿಕ್ರಮಾದಿತ್ಯ ಸಿಂಗ್ ಖರ್ಗೆ ಅವರನ್ನು ಖರ್ಗೆ ಅವರು ಏಕಾಂಗಿಯಾಗಿ ಭೇಟಿ ಮಾಡಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಈ ಸಭೆಯಲ್ಲಿ ಹಿಮಾಚಲ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಅದು ಹೇಳಿವೆ.ಅಂಗಡಿ ಮಾಲೀಕರ ಗುರುತು
ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ರಾಜ್ಯ ಸರ್ಕಾರವು ಸಚಿವ ವಿಕ್ರಮಾದಿತ್ಯ ಅವರ ಹೇಳಿಕೆಯಿಂದ ಈಗಾಗಲೇ ಅಂತರ ಕಾಪಾಡಿಕೊಂಡಿದೆ. ನಾಮಫಲಕಗಳನ್ನು ಪ್ರದರ್ಶಿಸಲು ಆಹಾರ ಮಳಿಗೆಗಳ ಮಾಲೀಕರನ್ನು ಕಡ್ಡಾಯಗೊಳಿಸುವ ಯಾವುದೇ ಅಧಿಕೃತ ನಿರ್ದೇಶನವಿಲ್ಲ ಎಂದು ಹೇಳಿಕೊಂಡಿದೆ.
ವಿಡಿಯೊ ನೋಡಿ: ದಲಿತ ಸಮುದಾಯಗಳ ಒಡಕಿನಲ್ಲೂ ಒಗ್ಗಟ್ಟಿದೆ: ಅಗ್ರಹಾರ ಕೃಷ್ಣಮೂರ್ತಿ


