Homeಕರೋನಾ ತಲ್ಲಣರೋಗಲಕ್ಷಣಗಳು ಇರುವವರು, ಇಲ್ಲದವರು ಕೊರೊನಾ ಪರೀಕ್ಷೆ ಮಾಡಿಸಬೇಕೆ, ಬೇಡವೇ?

ರೋಗಲಕ್ಷಣಗಳು ಇರುವವರು, ಇಲ್ಲದವರು ಕೊರೊನಾ ಪರೀಕ್ಷೆ ಮಾಡಿಸಬೇಕೆ, ಬೇಡವೇ?

- Advertisement -
- Advertisement -

ಚೀನಾದಲ್ಲಿ ಹುಟ್ಟಿಕೊಂಡಿತು ಎನ್ನಲಾಗಿರುವ ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿ ಸರ್ವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೊರೊನಾ ಹೊಡೆತದಿಂದ ವಿಶ್ವವನ್ನು ಹೊರತರಬೇಕು ಎಂದು ಹಲವಾರು ವಿಜ್ಞಾನಿಗಳು ಅದಕ್ಕೆ ಲಸಿಕೆ ಕಂಡುಹಿಡಿಯುವ ಸ್ಫರ್ಧೆಗೆ ಇಳಿದಿದ್ದಾರೆ.

ಭಾರತದಂತಹ ಜನಸಾಂದ್ರತೆ ಹೊಂದಿರುವ ದೇಶದಲ್ಲಿ ವಿಶ್ವದ ಅತೀ ದೀರ್ಘವಾದ ಲಾಕ್‌ಡೌನ್ ಹಾಕಿದ ಪರಿಣಾಮ ದೇಶದ ಕೋಟ್ಯಾಂತರ ಜನರು ದೇಶದ ಹೆದ್ದಾರಿಗಳಲ್ಲಿ ರಕ್ತದ ಮೆರವಣಿಗೆ ನಡೆಸಿದರು. ಅಂದು ಹೇರಲ್ಪಟ್ಟ ಲಾಕ್‌ಡೌನ್ ಇನ್ನೂ ಸಹ ಸಂಪೂರ್ಣವಾಗಿ ತೆರವುಗೊಂಡಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರೂ ನೂರಾರು ಗೊಂದಲಗಳಲ್ಲಿ ಸಿಕ್ಕಿ ನಲುಗುತ್ತಿದ್ದಾರೆ. ಈ ಗೊಂದಲ ನಿವಾರಿಸಲು ಸರ್ಕಾರ ಮಾಡಿದ್ದೇನು? ಧೀರ್ಘ ಅವಧಿಯ ಲಾಕ್‌ಡೌನ್ ಘೊಷಿಸುವ ಸಂಧರ್ಭದಲ್ಲೇ ಮುಂದಾಲೋಚನೆ ಮಾಡದ ಸರ್ಕಾರ ಈಗ ಮಾಡುತ್ತದೆಯೇ? ಉತ್ತರ ಶೂನ್ಯ.

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ದೇಶದಲ್ಲಿ ಕೊರೊನಾ ಪ್ರಾರಂಭವಾಗಿ 7 ತಿಂಗಳಾದರೂ ಸರ್ಕಾರದಿಂದ ಏರ್ಪಟ್ಟ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಸರ್ಕಾರಗಳೇ ಗೊಂದಲ ಉಂಟುಮಾಡಿದರೆ ಅದರಿಂದ ಕಷ್ಟಪಡುವುದು ಸಾಮಾನ್ಯ ಜನರು. ಈಗಾಗಲೆ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆಗೆ ಒಳಗಾಗಿದ್ದಾರೆ. ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಒತ್ತಡದಲ್ಲಿ ಸಿಲುಕಿದ್ದಾರೆ. ಈ ವೈದ್ಯರಿಗೆ, ಕೊರೊನಾ ನೋಡಲ್ ಅಧಿಕಾರಿಗಳಿಗೆ ಸರ್ಕಾರವೆ ದಿನಕ್ಕೆ ಇಂತಿಷ್ಟು ಕೊರೊನಾ ಪರೀಕ್ಷಗಳನ್ನು ನಡೆಸಿ ಎಂದು ಟಾರ್ಗೆಟ್ ಕೊಡುತ್ತಿದೆ. ಏಕೆ ಟಾರ್ಗೆಟ್? ಇದರಿಂದ ಏನು ಪ್ರಯೋಜನ ಎಂದು ಮಾತ್ರ ಸರ್ಕಾರ ಹೇಳುತ್ತಿಲ್ಲ.

ಇದನ್ನೂ ಓದಿ: 6ನೇ ತರಗತಿ ‘ವೇದ ಕಾಲದ ಸಂಸ್ಕೃತಿ’ ಪಾಠ ಮಾಡದಂತೆ ಶಿಕ್ಷಣ ಸಚಿವರ ಆದೇಶ: ಅಂಥದ್ದೇನಿದೆ ಪಾಠದಲ್ಲಿ?

ಕಳೆದ ವಾರವಷ್ಟೆ ಮೈಸೂರಿನ ಸರ್ಕಾರಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾರಣ ’ಕೊರೊನಾ ಟೆಸ್ಟ್ ಟಾರ್ಗೆಟ್’ ಕೊಡುತ್ತಿದ್ದದ್ದೇ ಎಂದು ಅವರ ಕುಟುಂಬ ಸದಸ್ಯರು ದೂರಿದ್ದಾರೆ. ಇದರಲ್ಲೂ ಹುರುಳಿಲ್ಲದಿಲ್ಲ. ರ್‍ಯಾಪಿಡ್ ಟೆಸ್ಟ್, ಆರ್‌‌‌ಟಿ ಪಿಸಿಆರ್ ಟೆಸ್ಟ್‌‌ಗಳು ಎಂದೆಲ್ಲ ಹಲವಾರು ಟೆಸ್ಟ್‌ಗಳನ್ನು ಸರ್ಕಾರ ಟಾರ್ಗೆಟ್ ಕೊಟ್ಟು ಮಾಡಿಸುತ್ತಿದೆ. ಹೆಚ್ಚಿನ ವೈದ್ಯರು ರೋಗ ಲಕ್ಷಣಗಳಿದ್ದರಷ್ಟೆ ಆಸ್ಪತ್ರೆಗೆ ಹೋಗಿ, ಬೇಕಾಬಿಟ್ಟಿ ಟೆಸ್ಟ್‌ಗಳು ಅಗತ್ಯವಿಲ್ಲ ಎಂದು ಹೇಳುತ್ತಿದ್ದರೂ, ಸರ್ಕಾರ ಮಾತ್ರ ಜಿದ್ದಿಗೆ ಬಿದ್ದು ಇಂತಿಷ್ಟು ಟೆಸ್ಟ್‌ಗಳು ಆಗಲೆಬೇಕು ಎಂದು ಹಠ ಹಿಡಿದಿದೆ.

ಮೈಸೂರಿನ ವೈದ್ಯ ಡಾ. ನಾಗೇಂದ್ರ

ಈ ಟೆಸ್ಟ್ ಟಾರ್ಗೆಟ್ ಹಿಂದೆ ಭ್ರಷ್ಟಾಚಾರದ ವಾಸನೆಯಿದೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ. ಇಲ್ಲದಿದ್ದರೆ ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇರುವವರನ್ನು ತಂದು ಪರೀಕ್ಷೆ ಮಾಡುವ ಜರೂರತ್ತಾದರೂ ಏನು?  ಬೆಂಗಳೂರಿನಲ್ಲಿ ಸಾಮಾನ್ಯವಾಗಿರು ದೃಶ್ಯವೆಂದರೆ ಬೀದಿ ಬೀದಿಯಲ್ಲಿ ಪರೀಕ್ಷಾ ಮಾದರಿ ಸಂಗ್ರಹಿಸಿವ ಟೆಂಟ್ ಹಾಕಿ ಹಾದಿ ಬೀದಿಯಲ್ಲಿ ಹೋಗುವವರನ್ನು ಕರೆದು, ಮನೆ ಮನೆ ತೆರಳಿ “ಉಚಿತ ಟೆಸ್ಟ್ ಮಾಡಿಸಿಕೊಳ್ಳಿ” ಎನ್ನುವುದರಲ್ಲಿ ಯಾರ ಹಿತಾಸಕ್ತಿ ಅಡಗಿದೆ? ಒಟ್ಟಿನಲ್ಲಿ ಲಕ್ಷಗಟ್ಟಲೇ ಟೆಸ್ಟ್‌ ಕಿಟ್‌ಗಳನ್ನು ತರಿಸುವ, ಅದರಲ್ಲಿ ಕಿಕ್‌ ಬ್ಯಾಕ್ ಪಡೆಯುವ ಉದ್ದೇಶ ಬಿಟ್ಟರೆ ಇದರಲ್ಲಿ ಬೇರೇನಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಜನರು ಕೊರೊನಾ ಪರೀಕ್ಷೆ ಮಾಡಿಸಬೇಕೆ? ಬೇಡವೇ? ರೋಗ ಲಕ್ಷಣಗಳಿರುವವರ ಮಾತ್ರ ಮಾಡಿಸಿದರೆ ಸಾಕೇ ಇತ್ಯಾದಿ ಗೊಂದಲಗಳು ಸಾರ್ವಜನಿಕರಲ್ಲಿ ಮೂಡಿವೆ. ಒಂದು ಕಡೆ ಸರ್ಕಾರದ ಟಾರ್ಗೆಟ್, ಇನ್ನೊಂದು ಕಡೆ ಸೋಂಕು ಇಲ್ಲದಿದ್ದರೂ ಪರೀಕ್ಷಾ ತಪ್ಪಿನಿಂದಾಗಿ ಪಾಸಿಟಿವ್ ಬಂದುಬಿಡಬಹುದೆಂಬ ಭಯ ಜನರನ್ನು ಕಾಡುತ್ತಿದೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಮಂಜುನಾಥ್ ಪ್ರಸಾದ್‌ರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ರ್‍ಯಾಪಿಡ್‌ ಟೆಸ್ಟ್‌ ಎಲ್ಲರಿಗೂ ಮಾಡುವುದಿಲ್ಲ. ಕೊರೊನಾ ರೋಗಿಗಳ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಹೊಂದಿರುವವರಿಗೆ, ಕಂಟೈನ್‌ಮೆಂಟ್ ಪ್ರದೇಶದಲ್ಲಿವವರಿಗೆ, SARI (ತೀವ್ರವಾದ ಉಸಿರಾಟದ ಸೋಂಕು) ಇರುವವರಿಗೆ, ವೈದ್ಯರು ಶಿಫಾರಸ್ಸು ಮಾಡಿದವರಿಗೆ ಮಾತ್ರ ಪರೀಕ್ಷೆ ಮಾಡುತ್ತೇವೆ. ಅದು ಬಿಟ್ಟು ಸಿಕ್ಕಸಿಕ್ಕವರನ್ನು ತಂದು ಪರೀಕ್ಷೆ ಮಾಡಿದರೆ, ಟೆಸ್ಟ್‌ ಕಿಟ್‌ಗಳು ವ್ಯರ್ಥವಾಗುತ್ತವೆ ಅಷ್ಟೇ. ಅದರಿಂದ ಏನೂ ಪ್ರಯೋಜನವಿಲ್ಲ” ಎಂದಿದ್ದಾರೆ.

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್‌

ಬೆಂಗಳೂರಿನಲ್ಲಿ ಮನೆಮನೆಗೆ ಹೋಗಿ ’ಫ್ರೀ ಟೆಸ್ಟ್ ಮಾಡಿಸಿ’ ಎಂಬ ಅಭಿಯಾನ ನಡೆಯುತ್ತಿರುವುದರ ಬಗ್ಗೆ ಆಯುಕ್ತರ ಗಮನಕ್ಕೆ ತಂದಾಗ, “ಮನೆಮನೆ ಸರ್ವೆ ಮಾಡುತ್ತಿರುವಾಗ ಯಾರಿಗಾದರು SARI ಲಕ್ಷಣಗಳು ಕಂಡು ಬಂದರೆ, ಕೊಮೋರ್ಬಿಡ್ ಇದ್ದರೆ ಅಂತವರಿಗೆ ಟೆಸ್ಟ್ ಮಾಡಿಸುವುದು ಒಳ್ಳಯದೆ ಮತ್ತು ಅಂತವರಿಗೆ ಮಾತ್ರ ಟೆಸ್ಟ್ ಮಾಡಿಸುತ್ತಿದ್ದೇವೆ” ಎಂದರು.

ಇದನ್ನೂ ಓದಿ: NEET, JEE ಪರೀಕ್ಷೆ ವಿಳಂಬ ವಿದ್ಯಾರ್ಥಿಗಳ ಭವಿಷ್ಯ ಮುಂದೂಡಿದಂತೆ: ಪರೀಕ್ಷೆಗೆ ಒತ್ತಾಯಿಸಿ ಮೋದಿಗೆ ಪತ್ರ

ಈ ಬಗ್ಗೆ ಮಾತನಾಡಿದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, “ಸೋಂಕಿನ ಗುಣಲಕ್ಷಣ ಹೊಂದಿರುವವರು ಮನೆಯಲ್ಲೇ ಇರಿ ಎಂದು ಸರ್ಕಾರವೆ ಹೇಳುತ್ತಿದೆ. ಅಂದರೆ ಇದರ ಉದ್ದೇಶ ಇದಕ್ಕೆ ಪರೀಕ್ಷೆಯು ಬೇಕಾಗಿಲ್ಲ ಎಂದಲ್ಲವೆ?. ಆದರೆ ಮನೆಯಲ್ಲೆ ಇರಲು ಹೇಳುವ ಸರ್ಕಾರ ಮತ್ತೊಂದೆಡೆ ಟೆಸ್ಟ್‌ ಮಾಡಿಸಲು ಹೇಳುತ್ತಿದೆ. ಸರ್ಕಾರಕ್ಕೆ ಕಾಯಿಲೆಯನ್ನು ನಿಯಂತ್ರಿಸುವ ಆಸಕ್ತಿ ಇದ್ದರೆ ಜನರನ್ನು ಮನೆಯಲ್ಲೇ ಇದ್ದು, ಅಲ್ಲಿಂದಲೆ ಆರೋಗ್ಯದ ಮಾಹಿತಿಯನ್ನು ನೀಡಲು ಕೇಳಬಹುದಿತ್ತು. ಆದರೆ ಅದನ್ನು ಸರ್ಕಾರ ಮಾಡುತ್ತಿಲ್ಲ. ಅದಲ್ಲದೆ ಎಲ್ಲರಿಗೂ ಪರೀಕ್ಷೆಗಳು ನಡೆಸಿದರೆ ಕೋಟ್ಯಾಂತರ ರೂಪಾಯಿಗಳು ಬೇಕಾಗುತ್ತದೆ. ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳುವ ಸರ್ಕಾರಕ್ಕೆ ಸ್ಪಷ್ಟ ಯೋಜನೆಯಿಲ್ಲ” ಎಂದು ಹೇಳಿದರು.

ಡಾ. ಶ್ರೀನಿವಾಸ ಕಕ್ಕಿಲ್ಲಾಯ

“ನಿಜವಾಗಿಯೂ ಕೊರೊನಾ ಪರೀಕ್ಷೆಗಳನ್ನು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾರಿಗೆ ಕೊರೊನಾ ಲಕ್ಷಣಗಳಿವೆಯೋ ಅವರು ಸಹ ಪರೀಕ್ಷೆ ಮಾಡಿಸಬೇಕಾಗದ ಅಗತ್ಯವಿಲ್ಲ. ಅವರು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾದರೆ ಯಾವುದೇ ಸಮಸ್ಯೆ ಆಗುವುದಿಲ್ಲ, ಮಕ್ಕಳು, ವೃದ್ದರು ಮತ್ತು ಇತರ ರೋಗಗಳಿಂದ ಬಳಲುತ್ತಿರುವವರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಜನರಿಗೆ ಚಿಕಿತ್ಸೆಯ ಅಗತ್ಯವು ಇರುವುದಿಲ್ಲ. ನಿಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಪರೀಕ್ಷಿಸುತ್ತಾ ಅದರಲ್ಲಿ 95% ಕ್ಕಿಂತ ಕಡಿಮೆ ಬಂದರೆ ಮಾತ್ರ ಆಸ್ಪತ್ರೆಗಳಿಗೆ ಹೋಗಬೇಕು” ಎಂದು ಡಾ. ಕಕ್ಕಿಲ್ಲಾಯ ಮಾಹಿತಿ ನೀಡಿದರು.

ಗುಣಮಟ್ಟ ಸರಿಯಾಗಿಲ್ಲ ಎಂದು ಹೇಳುತ್ತಾ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ಭಯಪಡುತ್ತಿದ್ದ ಜನರು ಇತ್ತ ಲಕ್ಷಗಟ್ಟಲೆ ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳಿಗೂ ಹೋಗಲು ಹೆದರುತ್ತಿದ್ದಾರೆ. ಸರ್ಕಾರ ಕೂಡಾ ದಿನಕ್ಕೊಂದು ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸುತ್ತಾ ಜನರನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತಿದೆ. ಮಾಸ್ಕ್‌ ಕಡ್ಡಾಯದ ವಿಚಾರದಲ್ಲಾಗಲಿ, ಸೀಲ್‌ಡೌನ್‌ ಮಾಡಬೇಕೇ, ಬೇಡವೇ ಎನ್ನುವ ವಿಚಾರದಲ್ಲಾಗಲಿ ಸರ್ಕಾರಕ್ಕೆ ಇನ್ನೂ ಸಹ ಸರಿಯಾದ ನಿರ್ಧಾರಕ್ಕೆ ಬರಲಾಗಿಲ್ಲ.


ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ಬಿಜೆಪಿ ನಾಯಕ ವಿಶ್ವನಾಥ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...