ಸಮ್ಮಿಶ್ರ ಸರ್ಕಾರವನ್ನು ಸಿದ್ದರಾಮಯ್ಯ ಬೀಳಿಸಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, “ಸರ್ಕಾರ ಬಿಳಿಸುವುದಾಗಿದ್ದರೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಆಗುವುದಕ್ಕೆ ಬಿಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಗ್ರಾಮ್ ಜನಾಧಿಕಾರ’ ಸಮಾವೇಶದಲ್ಲಿ ಮಾತನಾಡಿದ ಅವರ, “ಕುಮಾರಸ್ವಾಮಿ ನಾನು ಸರ್ಕಾರ ಬಿಳಿಸಿದೆ ಅಂತಾರೆ. ನಾನು ಸರ್ಕಾರ ಬಿಳಿಸುವುದಾಗಿದ್ದರೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಆಗುವುದಕ್ಕೆ ಬಿಡುತ್ತಿರಲಿಲ್ಲ. 80 ಸೀಟು ನಾವು ಗೆದ್ದಿದ್ದೆವು, ನಾವು ಜೆಡಿಎಸ್‌ಗೆ ಬೆಂಬಲಿಸದೆ ಇದ್ದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿದ್ದರೆ? ನಾನು ಒಪ್ಪದೆ ಕುಳಿತಿದ್ದರೆ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಆಗುತ್ತಿತ್ತೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಕೋಲಾಹಲ ಬಿಜೆಪಿ-ಜೆಡಿಎಸ್‌ನ ಷಡ್ಯಂತ್ರ: ಸಿದ್ದರಾಮಯ್ಯ
“ಇವರು ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ. ಬದಲಿಗೆ ವೆಸ್ಟ್‌ಎಂಡ್‌ನಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಿದ್ದಕ್ಕೆ ಅಧಿಕಾರ ಕಳೆದುಕೊಂಡರು. ಶಾಸಕರು ಹಾಗೂ ಸಚಿವರ ಕೈಗೆ ಸಿಗಲಿಲ್ಲ. ಯಾವ ಪತ್ರ ಕೊಟ್ಟರು ಒಂದಕ್ಷರ ಬರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಎಂಎಲ್‌ಎಗಳು ಹೊರಗೆ ಹೋದರು. ಇವರು ಎಂಎಲ್‌ಎಗಳ ಕೈಗೆ ಸಿಗುತ್ತಿದ್ದರೆ 14 ಎಂಎಲ್‌ಎಗಳು ನಮ್ಮಲ್ಲೆ ಇರುತ್ತಿದ್ದರು ಮತ್ತು ಸರ್ಕಾರವು ಬಿಳುತ್ತಿರಲಿಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಕುಣಿಯೋಕೆ ಆಗದವರು ನೆಲಡೊಂಕು ಎನ್ನುತ್ತಾರೆ, ಕುಮಾರಸ್ವಾಮಿ ಕೂಡಾ ಇದೇ ರೀತಿ. ಸಮ್ಮಿಶ್ರ ಸರ್ಕಾರ ಬೀಳಲು ಕುಮಾರಸ್ವಾಮಿಯೆ ಕಾರಣ. 5 ವರ್ಷ ನನ್ನ ವಿರುದ್ದ ಯಾವತ್ತು ಯಾವ ಎಂಎಲ್ಎಗಳು ಧ್ವನಿ ಎತ್ತಿರಲಿಲ್ಲ. ಸಚಿವ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಶ್ರೀನಿವಾಸ್ ಪ್ರಸಾದ್ ಹೋಗಿದ್ದು ಬಿಟ್ಟರೆ ಇನ್ಯಾರು ಮಾತನಾಡಿದ್ದಾರೆ. ಆದರೆ ಒಂದೂವರೆ ವರ್ಷ ಕುಮಾರಸ್ವಾಮಿ ವಿರುದ್ದ ಎಲ್ಲ ಎಂಎಲ್‌ಎಗಳು ಮಾತನಾಡಿದ್ದಾರೆ. ಈಗ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP ಮತೀಯ ಭಾವನೆ ಕೆರಳಿಸುತ್ತದೆಯೆ ವಿನಃ ಗೋವಿನ ಬಗ್ಗೆ ಭಕ್ತಿ, ಕಾಳಜಿ ಇಲ್ಲ: ಸಿದ್ದರಾಮಯ್ಯ


