Homeಮುಖಪುಟಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಪಾರ್ಲಿಮೆಂಟ್ ಭೂಮಿ ಪೂಜೆ ಮತ್ತು ಭಾರತ ಸಂವಿಧಾನ

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

- Advertisement -
- Advertisement -

ನೂತನ ಪಾರ್ಲಿಮೆಂಟ್ ಭೂಮಿ ಪೂಜೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸಿಲ್ಲವೆಂಬ ಚರ್ಚೆ ಆರಂಭವಾಗಿದೆ. ನಿಜಕ್ಕೂ ಇಂತಹ ಸಂವಿಧಾನ ವಿರೋಧಿ ನಡೆ ಸಹ್ಯವಲ್ಲ. ರಾಷ್ಟ್ರಪತಿಗಳು ದಲಿತರೆಂಬ ಕಾರಣಕ್ಕೆ ಇಂತಹ ಅಮಾನವೀಯ ಕೃತ್ಯದಲ್ಲಿ ಕೇಂದ್ರ ಸರ್ಕಾರವೇ ಭಾಗಿಯಾಗಿದ್ದು ಖುದ್ದು ಪ್ರಧಾನ ಮಂತ್ರಿಗಳೇ ಇದರ ಸಹಭಾಗಿಯಾಗಿರುವುದು ವಿಷಾದನೀಯ ಸಂಗತಿ.

ಇದರ ಜೊತೆಗೆ ಮತ್ತೊಂದು ಸಂವಿಧಾನ ವಿರೋಧಿ ಕೃತ್ಯವೂ ಅಂದು ನಡೆದು ಹೋಗಿದೆ. ಭಾರತದ ಸಂವಿಧಾನವು ಧರ್ಮ, ಲಿಂಗ, ಜಾತಿ, ಜನಾಂಗ, ಪ್ರದೇಶಗಳ ಅಧಾರದಲ್ಲಿ ತಾರತಮ್ಯ ಸಲ್ಲದು ಎಂದು ಹೇಳಿರುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಆದರೆ ನೂತನ ಪಾರ್ಲಿಮೆಂಟ್ ಕಟ್ಟಡದ ಭೂಮಿ ಪೂಜೆಯನ್ನು ಕೇವಲ ಬ್ರಾಹ್ಮಣ ಪುರೋಹಿತರು ನೆರವೇರಿಸಿರುವುದು ಸಂವಿಧಾನ ವಿರೋಧಿಯೇ ಆಗಿದೆ.ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಮೋದಿ ಭೂಮಿಪೂಜೆ: ಮುಂದುವರಿದ ಅನ್ನದಾತರ ಪ್ರತಿಭಟನೆ

ಹಿಂದೂ ಧರ್ಮದಲ್ಲಿ ಬಹುತ್ವ ಪೂಜಾರಾಧನೆ ಇದೆ. ನೂರಾರು ಪಂಥದ ಪೂಜಾವಿಧಿಗಳಿವೆ. ಅಣ್ಣಮ್ಮ, ಮಾರಮ್ಮ, ಹುಲಿಗೆಮ್ಮ, ಉಕ್ಕಡದಮ್ಮ ಮುಂತಾದ ಮಾತೃಪ್ರಧಾನ ದೇವತೆಗಳಿಗೆ ಮಹಿಳಾ ಪೂಜಾರಿಗಳೂ ಇದ್ದಾರೆ. ಅದಲ್ಲದೆ ನಾಥ-ದತ್ತ ಪಂಥದಲ್ಲಿ ಶೂದ್ರ ಜಾತಿಗಳ ಪೂಜಾರಿಗಳಿದ್ದಾರೆ‌. ಲಿಂಗಾಯತ, ವೀರಶೈವ, ಬುಡಕಟ್ಟು, ದಲಿತ ಪೂಜಾರಿಗಳಿದ್ದಾರೆ. ದಕ್ಷಿಣ, ಈಶಾನ್ಯ, ಮಧ್ಯ ಭಾರತದಲ್ಲಿ ಹಲವು ರೀತಿಯ ಪೂಜಾರಿಕೆ ಇದ್ದು ಅದೆಲ್ಲವೂ ಅಬ್ರಾಹ್ಮಣ ಪೂಜಾ ಪದ್ಧತಿಗಳಾಗಿವೆ. ಹಿಂದೂ ಪೂಜಾವಿಧಿ ಬಹುತ್ವ ಪೂಜಾವಿಧಿಯಾಗಿದ್ದು ಬ್ರಾಹ್ಮಣರ ಪೂಜಾವಿಧಿ ಅದರ ಒಂದು ಸಣ್ಣ ಭಾಗವಷ್ಟೆ. ಅಂತಹದ್ದರಲ್ಲಿ ಕೇವಲ ಬ್ರಾಹ್ಮಣ ವಿಧಿವಿಧಾನಗಳ ಮೂಲಕ ಸಂವಿಧಾನಾತ್ಮಕ ಶಾಸಕಾಂಗದ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿಸಿದ್ದು ಎಷ್ಟು ಸರಿ?

ಭಾರತದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಇದ್ದಾರೆಯೇ? ಹಿಂದೂಗಳಲ್ಲಿಯೇ ಸಾವಿರಾರು ಜಾತಿಗಳಿವೆ. ಇವರೆಲ್ಲರನ್ನು ಬ್ರಾಹ್ಮಣರು ಹೇಗೆ ಪ್ರತಿನಿಧಿಸುತ್ತಾರೆ. ಭಾರತೀಯರೆಂದರೆ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಮುಂತಾದವರು. ಅಷ್ಟೇ ಅಲ್ಲ ಧರ್ಮವನ್ನು ನಂಬದವರೂ ಸಹ ಭಾರತೀಯರೆ. ಭಾರತ ಯಾವೊಂದು ಧರ್ಮದವರ ಸ್ವತ್ತಲ್ಲ. ಭಾರತದಲ್ಲಿರುವ ಸಮಸ್ತ ಜನರೂ ಭಾರತೀಯರೇ. ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಇಲ್ಲಿ ಯಾವುದೋ ಒಂದು ಧರ್ಮದವರು ಮಾತ್ರ ತೆರಿಗೆ ಕಟ್ಟುವುದಿಲ್ಲ. ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದ್ದರಿಂದ ಪಾರ್ಲಿಮೆಂಟ್ ಭೂಮಿ ಪೂಜೆಗೆ ಬ್ರಾಹ್ಮಣರೊಟ್ಟಿಗೆ, ಬೌದ್ಧ ಭಿಕ್ಕುಗಳು, ಜೈನ ಶ್ರಮಣರು, ಸಿಖ್ ಗುರುಗಳು, ಮೌಲ್ವಿ, ಪಾದ್ರಿ ಹಾಗೂ ನೂರಾರು ಹಿಂದೂ ಜಾತಿಗಳ ಪೂಜಾರಿಗಳು, ಮಹಿಳಾ ಪೂಜಾರಿಗಳು ಅಲ್ಲಿದ್ದು ಭೂಮಿ ಪೂಜೆ ನೆರವೇರಿಸಬೇಕಿತ್ತಲ್ಲವೇ?

ಇದನ್ನೂ ಓದಿ: ಇದು ಗ್ರಾಮದೇವತೆಗಳ ಭಾರತ: ದೇಶದ ಬಹುತ್ವವೂ ಗ್ರಾಮಗಳ ವೈವಿಧ್ಯ ನಂಬಿಕೆಗಳಲ್ಲಿ ಅಡಗಿದೆ

ಇದೇನು ಹೊಸತಲ್ಲ. ಕಾಂಗ್ರೆಸ್ ಪಕ್ಷ ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿಯಾಗಿದ್ದಾಗ 200 ಜನ ಬ್ರಾಹ್ಮಣರ ಪಾದ ಪೂಜೆ ಮಾಡಿದ್ದರು. ನೆಹರೂರವರು ಸ್ವತಂತ್ರ ಭಾಷಣ ಮಾಡಲು ಶಾಸ್ತ್ರ ಕೇಳಿ ಸಮಯ ನಿಗಧಿಗೊಳಿಸಿದ್ದರು. ಈಗಿನ ಛತ್ತೀಸ್ಗಡದ ಕಾಂಗ್ರೆಸ್ ಮುಖ್ಯಮಂತ್ರಿ ಎರಡು ವರ್ಷದ ಸಾಧನೆ ನೆನಪಿಗೆ ರಾಮ ರಥ ಯಾತ್ರೆ ಮಾಡುತ್ತಿದ್ದಾರೆ. ಇವರೆಲ್ಲರೂ ಮಾಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆಸಿದ್ದಾರೆ. ಹೊಸದೇನನ್ನೂ ಮಾಡಿಲ್ಲ.

ಅವರನ್ನು ಕೇಳಿದರೆ ಕಾಂಗ್ರೆಸ್ ಮಾಡಿದಾಗ ನೀವು ಕೇಳಿದಿರಾ ಎನ್ನುತ್ತಾರೆ ಅಷ್ಟೆ. ಮೋದಿಯವರು ಕಾಂಗ್ರೆಸ್‌ನವರನ್ನು ಆಪ್ತರಕ್ಷಕ ದಳದಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯರಿಗೆ ಉತ್ತರಿಸಲೇಬೇಕಲ್ಲ? ಭಾರತೀಯರೆಂದರೆ ಕಾಂಗ್ರೆಸ್-ಬಿಜೆಪಿ‌ ಮಾತ್ರವಲ್ಲ. ಧರ್ಮನಿರಪೇಕ್ಷವಾಗಿ ಯಾರೂ ಇಲ್ಲದೆ ಪ್ರಧಾನಿಗಳೇ ಒಂದು ಇಟ್ಟಿಗೆ ಇಟ್ಟಿದ್ದರೆ ನಾವೆಲ್ಲ ಚಪ್ಪಾಳೆ ತಟ್ಟಿ ಅನಂಧಿಸಬಹುದಿತ್ತಲ್ಲವೇ? ಅದು ಬಿಟ್ಟು 60 ವರ್ಷ ಕಾಂಗ್ರೆಸ್ ಮಾಡಿದ್ದನ್ನೇ ಮಾಡಿದ್ದಾರೆ.

ಬಹುತ್ವವೇ ತುಂಬಿರುವ ಭಾರತದಲ್ಲಿ ಕೇವಲ ಬ್ರಾಹ್ಮಣರಿಂದ ಭೂಮಿ ಪೂಜೆ ಮಾಡಿಸಿದ್ದು ನಿಜಕ್ಕೂ ಸಂವಿಧಾನ ವಿರೋಧಿಯಾಗಿದೆ. ಅಂದರೆ ಭಾರತೀಯತೆ ವಿರೋಧಿಯಾಗಿದೆ. ಅಂದರೆ ದೇಶವಿರೋಧಿಯಾಗಿದೆ.

ಇದನ್ನೂ ಓದಿ: ಏಕತ್ವವನ್ನು ನಿರಾಕರಿಸಿ ಬಹುತ್ವವನ್ನು ಕಟ್ಟಿಕೊಡುವ ‘ದಲಿತ ಸಾಹಿತ್ಯ ಮೀಮಾಂಸೆ’

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...