ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ನಡುವಿನ ಆಂತರಿಕ ತಿಕ್ಕಾಟ ಭಾನುವಾರ ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ನಮ್ಮ ಪ್ರಶ್ನಾತೀತ ನಾಯಕ” ಎಂದು ಹಾಡಿ ಹೊಗಳಿದ್ದಾರೆ. ಅದಾಗ್ಯೂ, ಮುಖ್ಯಮಂತ್ರಿಯ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ಅವರ ಆಪ್ತರನ್ನು ಶಿವಕುಮಾರ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ನಮ್ಮ
ತಮ್ಮ ಸರ್ಕಾರದಲ್ಲಿ “ಕಾರ್ಯನಿರ್ವಹಿಸದ” ಸಚಿವರನ್ನು ಕೈಬಿಟ್ಟು ರಾಜ್ಯ ಸಂಪುಟದ ಪುನರ್ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಅವರು ತನ್ನ ರಾಜಕೀಯ ಚದುರಂಗದಾಟದ ನಡೆಯನ್ನು ಬದಲಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಿದ್ದರಾಮಯ್ಯ ನಮ್ಮ ಪ್ರಶ್ನಾತೀತ ನಾಯಕ, ನಿಸ್ಸಂದೇಹವಾಗಿ. ಪಂಚಾಯತ್, ತಾಲ್ಲೂಕು ಮಟ್ಟದ ಚುನಾವಣೆಗಳು, ಶಾಸಕ ಮತ್ತು ಎಂಎಲ್‌ಸಿ ಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಗಳಿಗೂ ನಮಗೆ ಅವರ ಅಗತ್ಯವಿದೆ. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಉತ್ತಮ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ನಮ್ಮ
“ಪ್ರತಿದಿನ ಅವರ ಹೆಸರನ್ನು ತೆಗೆದುಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಅಗತ್ಯವಿಲ್ಲ, ಅದು ಅನಗತ್ಯ. ಇವು ಮಾಧ್ಯಮಗಳಿಗೆ ಆಹಾರವಾಗಬಾರದು” ಎಂದು ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಬಯಸುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷಕ್ಕೆ “ಅನಿವಾರ್ಯ” ಎಂದು ಅವರಿಗೆ ನಿಷ್ಠರಾಗಿರುವ ಸಚಿವರು ಮತ್ತು ನಾಯಕರ ಹೇಳುತ್ತಿರುವ ಬೆನ್ನಲ್ಲೆ ಡಿ.ಕೆ. ಶಿವಕುಮಾರ್ ಅವರು ಈ ಹೇಳಿಕೆ ನೀಡಿದ್ದಾರೆ.
“ಕಾರ್ಯನಿರ್ವಹಿಸದ” ಸಚಿವರನ್ನು ಕೈಬಿಡಲು ಶಿವಕುಮಾರ್ ಸಂಪುಟ ಪುನರ್ರಚನೆಗೆ ಪ್ರಯತ್ನಿಸಿದ್ದಾರೆ ಎಂಬ ವರದಿಗಳ ನಂತರ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ ಅವರಂತಹ ಸಚಿವರು ಈ ಹೇಳಿಕೆ ನೀಡಿದ್ದರು.
ಸಂಪುಟ ಪುರ್ರಚನೆ ಆದರೆ ಕೈಬಿಡಲ್ಪಡುವ ಸಚಿವರ ಪಟ್ಟಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ (ಬೈರತಿ) ಮುಂತಾದ ಸಿದ್ದರಾಮಯ್ಯ ಅವರ ಕೆಲವು ಆಪ್ತರು ಸೇರಿದ್ದಾರೆ ಎಂದು ಫೆಬ್ರವರಿ 14 ರಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ನಾಯಕರಲ್ಲಿ ಕೆಲವರು ಶಿವಕುಮಾರ್ ಅವರು ಹೊಂದಿರುವ ‘ದ್ವಿ ಹುದ್ದೆಗಳನ್ನು’ ವಿಷಯವನ್ನು ಉಲ್ಲೇಖಿಸಿ, ಅವರ ಬದಲಿಗೆ ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ರೀತಿಯ “ಗೊಂದಲಮಯ” ಹೇಳಿಕೆಗಳನ್ನು ಏಕೆ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, “ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಪ್ರತಿದಿನ ಎಲ್ಲವನ್ನೂ ಗಮನಿಸುತ್ತದೆ.” ಎಂದು ಹೇಳಿದ್ದರು.
ಇದನ್ನೂಓದಿ: ಗಾಜಾ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆ ಕೈಬಿಡಲು 70 ಅಮೆರಿಕದ ನಾಗರಿಕ ಹಕ್ಕುಗಳ ಒತ್ತಾಯ
ಗಾಜಾ ಸ್ವಾಧೀನಪಡಿಸಿಕೊಳ್ಳುವ ಟ್ರಂಪ್ ಯೋಜನೆ ಕೈಬಿಡಲು 70 ಅಮೆರಿಕದ ನಾಗರಿಕ ಹಕ್ಕು ಸಂಘಟನೆಗಳ ಒತ್ತಾಯ


