ಪಂಜಾಬ್‌ನ ಕಾಂಗ್ರೆಸ್‌ನಲ್ಲಿ ಪ್ರಾರಂಭವಾಗಿದ್ದ ಆಂತರಿಕ ಕಲಹ ನಿಲುಗಡೆಯಾಗುವ ಹಂತಕ್ಕೆ ತಲುಪಿದೆ. ಪಕ್ಷದ ಮುಖಂಡ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿ ಭಾನುವಾರ ನೇಮಕಗೊಂಡಿದ್ದಾರೆ. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಆದರೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ರಾಜ್ಯದ ಮತ್ತೊಬ್ಬ ನಾಯಕ ನವಜೋತ್ ಸಿಂಗ್ ಸಿಧು ನಡುವೆ ವೈಮಸ್ಸು ಏರ್ಪಟ್ಟಿತ್ತು. ಇದು ಕೇಂದ್ರ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಭಿನ್ನಮತ ಶಮನ: ಕೇಜ್ರಿವಾಲ್ ವಿರುದ್ಧ ಸಿಧು ಟ್ವೀಟ್ ವಾರ್
ಟ್ವಿಟರ್‌ನಲ್ಲಿ ಸಿಧು, ತಮ್ಮ ಮೇಲೆ ನಂಬಿಕೆ ಇಟ್ಟು ಪ್ರಮುಖ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಮೂವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. “ಜನರ ಅಧಿಕಾರವನ್ನು ಜನರಿಗೆ ಮರಳಿ ನೀಡುವ ಧ್ಯೇಯವನ್ನು ಪೂರೈಸಲು ಪಂಜಾಬ್ ಕಾಂಗ್ರೆಸ್‌ನ ಪ್ರತಿಯೊಬ್ಬ ಸದಸ್ಯರೊಂದಿಗೆ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಪ್ರಯಾಣವು ಇದೀಗ ಪ್ರಾರಂಭವಾಗಿದೆ” ಎಂದು ಅವರು ಹೇಳಿದ್ದಾರೆ.
Will work along every member of Congress family in Punjab to fulfil the mission of #JittegaPunjab as a humble Congress worker to Give Power of the People Back to the People through the #PunjabModel & High Command’s 18 Point Agenda … My Journey has just begun !!
— Navjot Singh Sidhu (@sherryontopp) July 19, 2021
ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ತಲೆದೂರಿದಾಗಿನಿಂದ ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಹಲವಾರು ಸಭೆಗಳನ್ನು ಮಾಡಿದ್ದು, ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನವಾಗಿ ಇದೀಗ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಸಿಧು ಅವರನ್ನು ಹೊರತುಪಡಿಸಿ, ಸಂಗತ್ ಸಿಂಗ್ ಗಿಲ್ಜಿಯಾನ್, ಸುಖ್ವಿಂದರ್ ಸಿಂಗ್ ಡ್ಯಾನಿ, ಪವನ್ ಗೋಯೆಲ್ ಮತ್ತು ಕುಲ್ಜಿತ್ ಸಿಂಗ್ ನಗ್ರಾ ಅವರನ್ನು ಪಂಜಾಬ್ ಕಾಂಗ್ರೆಸ್ ಘಟಕದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪಕ್ಷದ ಹೈಕಮಾಂಡ್‌ನ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ. “ಹೈಕಮಾಂಡ್ ನಿರ್ಧಾರ 100% ಸರಿಯಾಗಿದ್ದು, ಇದರ ಬಗ್ಗೆ ಯಾರೂ ಅಸಮಾಧಾನ ಹೊಂದಿಲ್ಲ, ಎಲ್ಲವೂ ಸರಿಯಾಗಲಿದೆ” ಎಂದು ಕಾಂಗ್ರೆಸ್ ಶಾಸಕ ನಿರ್ಮಲ್ ಸಿಂಗ್ ಶೂತ್ರಾನಾ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಪಂಜಾಬ್: ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ-ಬಂಧನಕ್ಕೆ ಆಗ್ರಹಿಸಿ ಅಕಾಲಿ ದಳ ಪ್ರತಿಭಟನೆ


