Homeಮುಖಪುಟಪಂಜಾಬ್ ಕಾಂಗ್ರೆಸ್‌ ಭಿನ್ನಮತ ಶಮನ: ಕೇಜ್ರಿವಾಲ್ ವಿರುದ್ಧ ಸಿಧು ಟ್ವೀಟ್‌ ವಾರ್

ಪಂಜಾಬ್ ಕಾಂಗ್ರೆಸ್‌ ಭಿನ್ನಮತ ಶಮನ: ಕೇಜ್ರಿವಾಲ್ ವಿರುದ್ಧ ಸಿಧು ಟ್ವೀಟ್‌ ವಾರ್

- Advertisement -
- Advertisement -

ಕಳೆದ ಕೆಲವು ತಿಂಗಳಿನಿಂದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ನಡೆಯುತ್ತಿದ್ದ ರಾಜಕೀಯ ಕಿತ್ತಾಟ ಅಂತ್ಯವಾಗುವ ಲಕ್ಷಣ ಕಾಣಿಸಿಕೊಳ್ಳತೊಡಗಿದೆ. ನವಜೋತ್ ಸಿಂಗ್ ಸಿದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲಿನ ಮುನಿಸನ್ನು ಮರೆತು ಕಾಂಗ್ರೆಸ್‌ ಪಕ್ಷದ ಪರವಾಗಿ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಇದಕ್ಕೆ ಸೂಚನೆಯೆಂಬಂತೆ  ಸಿಧು ಟ್ವಿಟರ್ ಮೂಲಕ ಶಿರೋಮಣಿ ಅಕಾಲಿ ದಳ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್‌ನಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಟ್ವೀಟ್‌ ಮಾಡಿರುವ ಅವರು ಅರವಿಂದ್ ಕೇಜ್ರಿವಾಲ್ ಪಂಜಾಬ್‌ಗೆ ಉಚಿತ ವಿದ್ಯುತ್‌ ನೀಡುವ ಮಾತನಾಡುತ್ತಾರೆ. ಆದರೆ ಪಂಜಾಬ್‌ನ ಜೀವನಾಡಿಯಾದ ಉಷ್ಟ ವಿದ್ಯುತ್‌ ಸ್ಥಾವರವನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತಾರೆ. ಎಂದು ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಆಮ್‌ ಆದ್ಮಿಗೆ ನವಜೋತ್‌ ಸಿಂಗ್ ಸಿಧು?; ಅನುಮಾನ ಮೂಡಿಸಿದ ಕೇಜ್ರಿವಾಲ್ ಹೇಳಿಕೆ

ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧವೂ ಟ್ವೀಟ್ ಮಾಡಿರುವ  ಸಿಧು ಪ್ರಕಾಶ್ ಸಿಂಗ್‌ ಬಾದಲ್‌ ನೇತೃತ್ವದ ಹಿಂದಿನ ಸರ್ಕಾರ ದುಬಾರಿ ಬೆಲೆಗೆ ಸೌರವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ. ಆ ಮೂಲಕ ಜನರನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಎಲ್ಲಿಯೂ ಅವರು ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಕಳೆದ ಒಂದು ವಾರದ ಹಿಂದೆ ಲೋಡ್‌ ಶೆಡ್ಡಿಂಗ್ ವಿರೋಧಿಸಿ ತಮ್ಮದೇ ಸರ್ಕಾರದ ವಿರುದ್ಧ ನವಜೋತ್ ಸಿಂಗ್ ಆರೋಪಗಳನ್ನು ಮಾಡಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿಸದ್ದರು.

ಒಂದು ವಾರದ ಹಿಂದೆ ನವಜೋತ್‌ ಸಿಂಗ್ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಮಧಿಯವರನ್ನು ಭೇಟಿಯಾಗಿ ಚರ್ಚಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಾಂಗ್ರೆಸ್‌ ಹೈಕಮಾಂಡ್ ಮಧ್ಯಪ್ರವೇಶದಿಂದ ಕ್ಯಾಪ್ಟನ್ ಮತ್ತು ಸಿಧು ನಡುವಿನ ಅಸಮಾಧಾನದ ಕಿಡಿ ತಣ್ಣಗಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಹೈಕಮಾಂಡ್‌ ಸಿದು  ಅವರಿಗೆ ಮಹತ್ವದ ಸ್ಥಾನಮಾನ ನೀಡಲು ನಿರ್ಧರಿಸಿದ್ದು ಕ್ಯಾಪ್ಟನ್‌ ಕೂಡ ಇದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ.

ಸಿದು ಆಮ್‌ ಆದ್ಮಿ ಪಕ್ಷವನ್ನು ಸೇರುತ್ತಾರೆ ಎಂಬ ಚರ್ಚೆಗಳಿಗೆ ಇಂದಿನ ಅವರ ಟ್ವೀಟ್ ತೆರೆ ಎಳೆದಿದೆ.

ಇದನ್ನೂ ಓದಿ:    ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -