Homeಮುಖಪುಟತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

ತಾಂತ್ರಿಕತೆ, ಸಿನಿಮಾ ಅಭಿವ್ಯಕ್ತಿಗೆ ಅಡ್ಡಿಯೇ??

- Advertisement -
- Advertisement -

ಕ್ಯಾಮೆರಾ ಎಲ್ಲಿ ಇಡಬೇಕು?’
‘ಝೂಮ್ ಮಾಡಬೇಕಾ ಅಥವಾ ಡಾಲಿ ಮಾಡಬೇಕಾ?’
‘ಯಾವ ಲೆನ್ಸ್ ಹಾಕಬೇಕು?’
‘ಡೆಪ್ತ್ ಆಫ್ ಫೀಲ್ಡ್ ಎಷ್ಟಿರಬೇಕು?’
‘ಸಬ್ಜೆಕ್ಟ್ ಮೂವ್ ಮಾಡ್ತಿಲ್ಲ, ಸ್ಟ್ಯಾಟಿಕ್ ತಗೋಬೇಕಾ ಅಥವಾ ಟ್ರಾಲಿ ಬಳಸೋದಾ?’
‘ಒಂದು ಮಾಸ್ಟರ್ ಆಯ್ತಲ್ಲ, ಈಗ ಎಲ್ಲಾರದೂ ಒಂದೊಂದು ಕ್ಲೋಸ್ ಅಪ್ ತೊಗೊಂಡ್ರೆ ಸಾಕಲ್ವಾ?’
‘ಫಿಲ್ಟರ್ ಯಾವುದು ಹಾಕಬೇಕು? ಸೀರಿಯಸ್ ದೃಶ್ಯ, ಕೆಂಪು ಹಾಕುವಾ?’

ಹೀಗೆ ಹತ್ತಾರು ಪ್ರಶ್ನೆಗಳು ಚಿತ್ರ ನಿರ್ದೇಶನ ಮಾಡುವಾಗ ಕೊರೆಯುತ್ತವೆ. “ಇವುಗಳೆಲ್ಲ ತಾಂತ್ರಿಕ ಪ್ರಶ್ನೆಗಳು, ಡಿಓಪಿ ಇವನ್ನೆಲ್ಲಾ ನೋಡಿಕೊಳ್ಳುತ್ತಾನೆ. ಒಳ್ಳೇ ಡಿಓಪಿ ಇದ್ರೆ ಸಾಕು. ನಿರ್ದೇಶಕ ಕಲಾತ್ಮಕ ಅಂಶಗಳ ಮೇಲೆ ಕಾನ್ಸಂಟ್ರೇಟ್ ಮಾಡಿದರೆ ಸಾಕು, ಕಲೆಯ ಅಭಿವ್ಯಕ್ತಿಗೆ ತಾಂತ್ರಿಕತೆ ಅಡ್ಡಿಯಾಗಬಾರದು” ಹೌದಾ?

ಒಂದು ಚಿತ್ರ ರಚಿಸುವಲ್ಲಿ ತಾಂತ್ರಿಕ ಅಂಶಗಳೇ ಅಡ್ಡಿಯಾಗಬಲ್ಲವೇ? ಕೆಲವೊಂದು ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಎದ್ದುಕಾಣುತ್ತವೆ. ಕೆಲವು ಚಿತ್ರಗಳಲ್ಲಿ ಕಂಡುಬರುವ ತಾಂತ್ರಿಕ ದೋಷಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ, ಆ ಚಿತ್ರ ಇಷ್ಟವಾದರೆ ಅವುಗಳನ್ನು ಕ್ಷಮಿಸಲಾಗುತ್ತದೆ. ಆದರೆ, ಚಿತ್ರ ನಿರ್ದೇಶಕರಿಗೆ ತಾಂತ್ರಿಕ ಅಂಶಗಳು ಎಂದಿಗೂ ಅಡ್ಡಿಯಾಗಲಾರವು. ಚಲನಚಿತ್ರ ರಚಿಸುವುದು ಕಲೆಯ ಇತರ ಕಲೆಯ ಮಾಧ್ಯಮಗಳಂತೆ ನಮ್ಮ ಭಾವನೆಗಳ, ಕಥೆಗಳ, ಜೀವನದ ಮತ್ತು ಈ ಜಗತ್ತಿನ ಪ್ರಶ್ನೆಗಳ ಹುಡುಕಾಟ ಹಾಗೂ ಅದರ ಅಭಿವ್ಯಕ್ತಿಯ ಮಾಧ್ಯಮವೆಷ್ಟೋ, ಅಷ್ಟೇ ಸಂಕೀರ್ಣ ತಾಂತ್ರಿಕತೆಯ ಮಾಧ್ಯಮವೂ ಹೌದು. ತಾಂತ್ರಿಕತೆಯನ್ನು ಅಭಿವ್ಯಕ್ತಿಯಲ್ಲಿ ಅಡ್ಡಿ ಎಂದು ಭಾವಿಸುವುದು ಅಥವಾ ಅದನ್ನು ಕಡೆಗಣಿಸುವುದು ಒಬ್ಬ ಕಲಾವಿದ ತನ್ನ ಕುಂಚ ತನ್ನ ಕ್ಯಾನ್ವಾಸ್‍ನ್ನು ತಾನು ಬಿಡಿಸಬಯಸುವ ಚಿತ್ರಕ್ಕೆ ಅಡ್ಡಿ ಎಂದಹಾಗೆ. ಬರಹಗಾರನಿಗೆ ತನ್ನ ಭಾಷೆ ಮತ್ತು ಪದಗಳೇ ಅಡ್ಡಿಯಾದ ಹಾಗೆ.

ಸಿನೆಮಾ ಎಂದರೆ ಕತೆ ಹೇಳುವ ಮಾಧ್ಯಮ ಎಂದು ನಾವೀಗಾಗಲೇ ತಿಳಿದಿದ್ದೇವೆ; ಸಿನೆಮಾದ ಕಥೆ ಎಂದರೆ ಅದಕ್ಕೆ ತನ್ನದೇ ಆದ ಮಿತಿಗಳಿರುತ್ತವೆ ಹಾಗೂ ಅ ಮಿತಿಗಳನ್ನೇ ಚಿತ್ರದ ಸಾಮಥ್ರ್ಯಗಳೆಂದೂ ಪರಿಗಣಿಸಬಹುದಾಗಿದೆ. ಈ ವಿಷಯದ ಬಗ್ಗೆ ಮುಂಚೆ ಬರೆಯಲಾಗಿದೆ ಹಾಗಾಗಿ ಅದನ್ನು ವಿಸ್ತರಿಸುತ್ತಿಲ್ಲ.

ತಾಂತ್ರಿಕವಾಗಿ ಗಟ್ಟಿಯಾಗಿರುವ ಚಿತ್ರ ಎಂದರೆ ಹಾಲಿವುಡ್‍ನ ಸಾಹಸ ಚಿತ್ರಗಳಲ್ಲ, ಹೆಲಿಕಾಪ್ಟರ್‍ನಿಂದ ತೆಗೆದ ಶಾಟ್‍ಗಳಲ್ಲ, ಪರ್ವತದ, ಅನ್ಯಗ್ರಹಗಳ ಅದ್ಭುತ ಶಾಟ್‍ಗಳನ್ನು ಹೊಂದಿದ ಚಿತ್ರವಲ್ಲ, ಚಾಣಾಕ್ಷತೆಯಿಂದ ಮಾಡಿದ ಸಂಕಲನವಲ್ಲ. ಒಂದು ಸರಳವಾದ ದೃಶ್ಯವನ್ನು ಅಷ್ಟೇ ಸರಳವಾಗಿ ಪರದೆಯ ಮೇಲೆ ತೋರಿಸಿದರೂ ಅದನ್ನು ತಾಂತ್ರಿಕವಾಗಿ ಗಟ್ಟಿಯಾಗಿರುವ ದೃಶ್ಯ ಎನ್ನಬಹುದು.

ತಾಂತ್ರಿಕವಾಗಿ ಗಟ್ಟಿಯಾಗಿರುವ ನಾವೆಲ್ಲರೂ ನೋಡಿದ ಒಂದು ಕನ್ನಡ ಚಿತ್ರವನ್ನು ಹೆಸರಿಸಬೇಕಾದರೆ, ನನಗೆ ಮೊದಲು ಹೊಳೆಯುವುದು ರಾಮ್ ರೆಡ್ಡಿ ನಿರ್ದೇಶಿಸಿದ ‘ತಿಥಿ’. ಹೌದು, ತಾಂತ್ರಿಕವಾಗಿಯೂ ಅದೊಂದು ಅದ್ಭುತ ಚಿತ್ರ. ಆ ಚಿತ್ರದಲ್ಲಿ ಅದ್ಭುತ ಎನ್ನಿಸಬಹುದಾದ ಯಾವುದೇ ಶಾಟ್‍ಗಳಿಲ್ಲ; ಸಾಹಸ ದೃಶ್ಯಗಳಿಲ್ಲ, ಹಳ್ಳಿಗಾಡಿನ, ಪರಿಸರದ, ನದಿ ಬೆಟ್ಟದ ಮನಮೋಹಕ ಚಿತ್ರಣಗಳಿಲ್ಲ. ಚಿತ್ರದಲ್ಲಿ ಅದ್ಭುತವಾದ ಕ್ಯಾಮೆರಾ ಮೂವ್‍ಮೆಂಟ್‍ಗಳೂ ಕಾಣಿಸಿಕೊಳ್ಳುವುದಿಲ್ಲ ಆದರೂ ಅದೊಂದು ತಾಂತ್ರಿಕವಾಗಿ ಅದ್ಭುತ ಚಿತ್ರ. ತನ್ನ ಕಥೆಯನ್ನು ಹೇಳಲು ಏನು ಬೇಕಾಗುತ್ತದೆಯೋ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಆ ಚಿತ್ರ ನೋಡುವಾಗ ನೋಡುಗರು ಅದರಲ್ಲಿ ಬರುವ ಪಾತ್ರಗಳು, ಆಯಾ ಪಾತ್ರಗಳ ತೊಳಲಾಟ, ಕಥೆಯಲ್ಲಿ ಮುಂದೇನಾಗುತ್ತದೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಾರೆಯೇ ಹೊರತು ಕ್ಯಾಮರಾ ಚಳಕದ ಕಡೆ ಅಲ್ಲ.

ಆದರೆ ಅದು ಸುಮ್ಮನೇ ಆಗಿದ್ದಲ್ಲ. ಪ್ರತಿಯೊಂದು ದೃಶ್ಯಕ್ಕೂ ಅದರ ತಿರುಳು ಅಥವಾ ಆತ್ಮ ಎಂಬುದೊಂದಿರುತ್ತದೆ. ಆ ತಿರುಳು ಅಥವಾ ಆತ್ಮವನ್ನು ಸಮರ್ಪಕವಾಗಿ ಸೆರೆ ಹಿಡಿಯಬೇಕೆಂದರೆ, ಯಾವ ಲೆನ್ಸ್ ಬಳಸಬೇಕು, ಫಿಲ್ಟರ್ ಬಳಸಬೇಕಾ, ಫೋಕಸ್ ಯಾರ ಮೇಲಿರಬೇಕು, ಆ ಒಂದು ದೃಶ್ಯಕ್ಕೆ ಎಷ್ಟು ಮತ್ತು ಯಾವ್ಯಾವ ಶಾಟ್ ತೆಗೆದುಕೊಳ್ಳಬೇಕು, ಆಯಾ ಶಾಟ್‍ನಲ್ಲಿ ಕ್ಯಾಮರ ಚಲಿಸಬೇಕೇ ಅಥವಾ ಒಂದೇ ಕಡೆ ಇರಬೇಕೇ ಎನ್ನುವ ಹಲವಾರು ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಆಗ ಮಾತ್ರ ಆ ದೃಶ್ಯದ ಜೀವವು, ನಿರ್ದೇಶಕನು ಬಯಸಿದಂತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬರಹಗಾರರಿಗೆ ತನ್ನ ಭಾಷೆ, ಗಾಯಕನಿಗೆ ತನ್ನ ಕಂಠವು, ನಟನಿಗೆ ತನ್ನ ಇಡೀ ದೇಹ ತಾನು ಹೇಳುವುದನ್ನು ಮುಟ್ಟಿಸುವ ಸಾಧನವಾದ ಹಾಗೆ ಚಲನಚಿತ್ರ ನಿರ್ದೇಶಕರಿಗೆ ಸಿನೆಮಾದ ತಾಂತ್ರಿಕತೆಯೇ ಸಾಧನ. ಸಿನೆಮಾ ಮಾಧ್ಯಮವು ಸಂಕೀರ್ಣವೆನಿಸುವುದು ಇದೇ ಕಾರಣಕ್ಕಾಗಿ. ಸ್ಟೀವನ್ ಸ್ಪೀಲ್‍ಬರ್ಗ್‍ನಿಂದ ಹಿಡಿದು ವಿಶ್ವದ ಬಹುತೇಕ ನಿರ್ದೇಶಕರು, ತಮ್ಮ ಚಿಕ್ಕವಯಸ್ಸಿನಿಂದಲೇ ಕ್ಯಾಮೆರ ಜೊತೆಗೆ ಆಟವಾಡಿದರು; ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದರು, ಕ್ಯಾಮರಾದ, ಚಿತ್ರ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಕಂಡು ಬೆರಗುಗೊಂಡರು. ಅವರಲ್ಲಿ ಹೆಚ್ಚಿನವು ತಾವು ಹೇಳಬಯಸಬಹುದಾದ ಕಥೆಗಳಿಗಿಂತಲೂ ಕ್ಯಾಮರ ಸೃಷ್ಟಿಸುವ ಮ್ಯಾಜಿಕ್ ಅನ್ನು ಪ್ರೀತಿಸಿದವರು. ಹಾಗಾಗಿಯೇ ಅವರ ಚಿತ್ರಗಳಲ್ಲಿ ತಾಂತ್ರಿಕ ದೋಷಗಳು ಹಾಗೂ ಕೇವಲ ತಾಂತ್ರಿಕ ಶ್ರೇಷ್ಠತೆಯೂ ಕಾಣಿಸಿಕೊಳ್ಳುವುದಿಲ್ಲ.

ಚಿತ್ರ ನಿರ್ದೇಶನಕ್ಕೆ ಕ್ಯಾಮರ ಚಳಕ ಮಾತ್ರ ತಾಂತ್ರಿಕ ಅಂಶವಲ್ಲ. ಅದರೊಂದಿಗೆ ಚಿತ್ರದ ಕಲಾ ನಿರ್ದೇಶನ (ಆರ್ಟ್ ಡೈರೆಕ್ಷನ್), ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್ಸ್ ಮುಂತಾದ ಹಲವಾರು ತಾಂತ್ರಿಕ ಅಂಶಗಳಿರುತ್ತವೆ. ಅವೆಲ್ಲವೂ ಆ ಚಿತ್ರದ ಜೀವಕ್ಕೆ, ಆಯಾ ದೃಶ್ಯದ ಜೀವಕ್ಕೆ ಹೇಗೆ ಪೂರಕವಾಗಿಸಬಹುದು ಮತ್ತು ಅವುಗಳೇ ದೃಶ್ಯದ ಜೀವವನ್ನು ಮೀರಿ ನೋಡುಗರು ಆ ತಾಂತ್ರಿಕ ಅಂಶಗಳನ್ನೇ ಮೆಚ್ಚಬಹುದಾದ ಸನ್ನಿವೇಶ ಹೇಗೆ ತಡೆಯಬೇಕು ಎನ್ನುವುದನ್ನೂ ಆಯಾ ವಿಭಾಗಗಳ ತಾಂತ್ರಿಕತೆಯನ್ನು ಅಭ್ಯಸಿಸಿದಾಗ ಮಾತ್ರ ತಿಳಿಯುವುದು.

ಈ ಎಲ್ಲ ತಾಂತ್ರಿಕತೆಗಳನ್ನು ತಾನು ಹೇಳಬೇಕಾದ ಕಥೆಯನ್ನು ತಾಂತ್ರಿಕತೆ ಎದ್ದುಕಾಣದಂತೆ, ತಾಂತ್ರಿಕ ದೋಷಗಳಂತೂ ನುಸುಳದಂತೆ ಸರಳವಾಗಿ ಹೇಳಲು ಬಳಸಿಕೊಂಡಿರುವುದಕ್ಕೆ ತಿಥಿ ಎಂಬ ಚಿತ್ರ ಒಂದು ಒಳ್ಳೆಯ ಉದಾಹರಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...