ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಜೂನ್ 19 ರಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿದ್ದು, ಈ ವರ್ಚುವಲ್ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
In order to discuss the situation in the India-China border areas, Prime Minister @narendramodi has called for an all-party meeting at 5 PM on 19th June. Presidents of various political parties would take part in this virtual meeting.
— PMO India (@PMOIndia) June 17, 2020
ಲಡಾಖ್‌ನ ಪೂರ್ವಭಾಗದ ಗಾಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಯೋಧರು ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್ ಪಕ್ಷವು ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿತ್ತು.
ಈ ಕುರಿತು ಕಾಂಗ್ರೆಸ್ ವಕ್ತಾರ ಪವನ್ ಖೇರ ಟ್ವೀಟ್ ಮಾಡಿ, “ಗೌರವಾನ್ವಿತ ಪ್ರಧಾನಮಂತ್ರಿಗಳೇ ದೇಶ ದುಃಖದಲ್ಲಿದೆ. ದಯವಿಟ್ಟು ಸರ್ವಪಕ್ಷ ಸಭೆ ಕರೆಯಿರಿ. ರಾಷ್ಟ್ರೀಯ ಭದ್ರತಾ ಬಿಕ್ಕಟ್ಟಿನ ನಡುವೆ ಏಕೀಕೃತ ರಾಜಕೀಯ ವೇದಿಕೆ ರೂಪಿಸುವ ಬಗ್ಗೆ ಎಲ್ಲಾ ಪಕ್ಷಗಳ ಸಭೆ ಕರೆದು ಚರ್ಚಿಸಿ” ಎಂದು ಸಲಹೆ ನೀಡಿದ್ದಾರೆ.
ಮತ್ತುಷ್ಟು ಸುದ್ದಿಗಳು
ಇದನ್ನೂ ಓದಿ: ಯೋಧರ ಹತ್ಯೆ ಬಗ್ಗೆ ಪ್ರಧಾನಿ ಮೌನವೇಕೆ? ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
ಇದನ್ನೂಓದಿ: ಕರ್ನಲ್ ಸಂತೋಷ್ ಬಾಬು ಪೋಷಕರ ಹೇಳಿಕೆ: ನಮ್ಮ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಕ್ಕೆ ಹೆಮ್ಮೆಯಿದೆ
ಇದನ್ನೂಓದಿ: ಲಡಾಖ್ ಘರ್ಷಣೆ: 20 ಭಾರತೀಯ ಸೈನಿಕರ ಹತ್ಯೆ, ನಾಲ್ವರ ಸ್ಥಿತಿ ಗಂಭೀರ
ಫ್ಯಾಕ್ಟ್‌ಚೆಕ್: ಇತ್ತೀಚಿನ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಡಿಯೋ ಬಹಿರಂಗ? ವಾಸ್ತವವೇನು?
ಇದನ್ನೂ ಓದಿ: ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ಮೋದಿ ಏಕೆ ಅಡಗಿಕೂತಿದ್ದಾರೆ? – ರಾಹುಲ್


