ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು ಆರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಝಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ 9.30 ರ ಸುಮಾರಿಗೆ ಚೋಪನ್-ಪ್ರಯಾಗರಾಜ್ ಪ್ಯಾಸೆಂಜರ್ ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 4 ಕ್ಕೆ ಬಂದಾಗ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಮೃತ ಮಹಿಳೆಯರು ರೈಲಿನಿಂದ ಇಳಿದು ಒಂದು ಪ್ಲಾಟ್‌ಫಾರ್ಮ್‌ನಿಂದ ಎದುರುಗಡೆಯ ಮತ್ತೊಂದು ಫ್ಲಾಟ್‌ಫಾರ್ಮ್‌ಗೆ ಹೋಗಲು ಹಳಿ ದಾಟುತ್ತಿದ್ದರು. ಈ ವೇಳೆ ಅತಿ ವೇಗದಲ್ಲಿ ಬಂದ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಗಳು ವಿವರಿಸಿವೆ.
ಮಿರ್ಝಾಪುರದ ನಿವಾಸಿಗಳಾದ ಸವಿತಾ (28), ಸಾಧನಾ (16), ಶಿವಕುಮಾರಿ (12), ಅಂಜು ದೇವಿ (20), ಸುಶೀಲಾ ದೇವಿ (60) ಮತ್ತು ಪಕ್ಕದ ಸೋನಭದ್ರ ಜಿಲ್ಲೆಯ ನಿವಾಸಿ ಕಲಾವತಿ ದೇವಿ (50) ಮೃತರು ಎಂದು ತಿಳಿದು ಬಂದಿದೆ.
ರೈಲ್ವೆ ಪೊಲೀಸರ ಪ್ರಕಾರ, ಮೃತ ಮಹಿಳೆಯರು ಕಾರ್ತಿಕ ಪೂರ್ಣಿಮೆ ನಿಮಿತ್ತ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚುನಾರ್‌ಗೆ ಪ್ರಯಾಣಿಸಿದ್ದರು. ಚುನಾರ್ ರೈಲ್ವೆ ನಿಲ್ದಾಣವು ಮಿರ್ಝಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ : ಪ.ಬಂಗಾಳದಲ್ಲಿ ‘ನರೇಗಾ’ ಪುನರಾರಂಭಕ್ಕೆ ಮುಂದಾದ ಕೇಂದ್ರ


