ಬಜಾಜ್ ಫೈನಾನ್ಸ್ ಕಂಪೆನಿಯ ಏರಿಯಾ ಮ್ಯಾನೇಜರ್ ಆಗಿದ್ದ 42 ವರ್ಷದ ತರುಣ್ ಸಕ್ಸೇನಾ ಎಂಬ ವ್ಯಕ್ತಿ ಕಂಪೆನಿಯ ತೀವ್ರ ಕೆಲಸದ ಒತ್ತಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಸಕ್ಸೇನಾ ಅವರು ತಮ್ಮ ಪತ್ನಿ ಮೇಘಾ ಅವರನ್ನು ಉದ್ದೇಶಿಸಿ ಐದು ಪುಟಗಳ ಡೆತ್‌ನೋಟ್‌ಗಳನ್ನು ಬರೆದಿದ್ದು, ಅದರಲ್ಲಿ ಅವರು ಕಂಪೆನಿಯ ಅಧಿಕಾರಿಗಳು ಅವಾಸ್ತವಿಕ ಗುರಿಗಳನ್ನು ಸಾಧಿಸಲು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತನಗೆ ವೇತನ ಕಡಿತ ಮತ್ತು ಉದ್ಯೋಗ ಕಳೆದುಕೊಳ್ಳುವ ಬೆದರಿಕೆಗಳನ್ನೂ ಮಾಡಲಾಗಿದೆ ಡೆತ್‌ನೋಟ್‌ನಲ್ಲಿ ಸಾವಿಗೀಡಾದ ತರುಣ್ ಸಕ್ಸೇನಾ ಅವರು ಉಲ್ಲೇಖಿಸಿದ್ದಾರೆ. ಮೃತ ತರುಣ್ ಅವರು ತಮ್ಮ ಪ್ರದೇಶದಲ್ಲಿ ಬಜಾಜ್ ಫೈನಾನ್ಸ್ ಲೋನ್‌ಗಳ ಮೇಲೆ EMI ಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದ್ದರು.
ಇದನ್ನೂ ಓದಿ: ‘ಬಾಲಕಿ ಆಘಾತಗೊಂಡಿಲ್ಲ’ ಎಂದು ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್
ಹಿರಿಯ ಮ್ಯಾನೇಜ್‌ಮೆಂಟ್‌ಗೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೊರತಾಗಿಯೂ, ತರುಣ್ ಮತ್ತು ಅವರ ಸಹೋದ್ಯೋಗಿಗಳು ಸಂಗ್ರಹಿಸದ EMI ಗಳನ್ನು ಸರಿದೂಗಿಸಲು ಒತ್ತಾಯಿಸಲಾಗುತ್ತಿದೆ ಎಂದು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ತರುಣ್ ಅವರ ಡೆತ್‌ನೋಟ್ ತನ್ನ ಮೇಲೆ ಆದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ವಿವರಿಸುತ್ತದೆ. “ತಾನು 45 ದಿನಗಳವರೆಗೆ ಸರಿಯಾಗಿ ನಿದ್ದೆ ಮಾಡಿಲ್ಲ. ಹಸಿವನ್ನು ಕಳೆದುಕೊಂಡಿದ್ದು, ತೀವ್ರ ಆತಂಕದಿಂದ ಮುಳುಗಿದ್ದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಾಯುವ ದಿನದಂದು ನಡೆದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಕೂಡಾ ತನ್ನ ಮೇಲಿನ ಒತ್ತಡಗಳನ್ನು ವಿವರಿಸಿದ್ದರು, ಆದರೆ ಅಲ್ಲಿ ಅವರ ಮೇಲಧಿಕಾರಿಗಳು ಅವರನ್ನು ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಇದನ್ನೂಓದಿ: ‘ಇತರರು ಇನ್ನೂ ಅನಿಶ್ಚಿತತೆಯ ಜೀವನದಲ್ಲಿ ಬಳಲುತ್ತಿದ್ದಾರೆ’: ಬಿಡುಗಡೆ ಬಳಿಕ ದುಃಖ ವ್ಯಕ್ತಪಡಿಸಿದ ಗೌತಮ್ ನವಲಾಖಾ
ಪತ್ರದಲ್ಲಿ ಅವರು ತಮ್ಮ ಕಂಪೆನಿಯ ಹಿರಿಯ ಮ್ಯಾನೇಜರ್‌ಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲು ಕುಟುಂಬಿಕರಿಗೆ ಸೂಚಿಸಿದ್ದು, ತನ್ನ ಆತ್ಮಹತ್ಯೆಗೆ ಅವರೆ ಕಾರಣ ಎಂದು ದೂಷಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ವಿಡಿಯೊ ನೋಡಿ: ಅಟ್ರಾಸಿಟಿ’ ಕಾದಂಬರಿ; ಮನುಷ್ಯ ಲೋಕದ ರೂಪಾಂತರವನ್ನ ಕಟ್ಟುತಿದೆಯಾ? ಡಾ. ಗೀತಾ ವಸಂತ


