Homeಅಂತರಾಷ್ಟ್ರೀಯ'ನೋಡಲು ತುಂಬಾ ಚೆನ್ನಾಗಿದೆ': ಮತ್ತೆ ಟ್ರಂಪ್ ಕಾಲೆಳೆದ ಗ್ರೇಟಾ ಥನ್ಬರ್ಗ್!

‘ನೋಡಲು ತುಂಬಾ ಚೆನ್ನಾಗಿದೆ’: ಮತ್ತೆ ಟ್ರಂಪ್ ಕಾಲೆಳೆದ ಗ್ರೇಟಾ ಥನ್ಬರ್ಗ್!

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆ ನಂತರ ಗ್ರೇಟಾ ಥನ್ಬರ್ಗ್ ಡೋನಾಲ್ಡ್ ಟ್ರಂಪ್‌ರವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ.

- Advertisement -
- Advertisement -

ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಡಳಿತಾವಧಿ ನಿನ್ನೆಗೆ ಕೊನೆಗೊಂಡಿದೆ. ಮತ ಎಣಿಕೆಯಲ್ಲಿ ಮೋಸ ನಡೆದಿದೆಯೆಂದು ಆರೋಪಿಸಿದ್ದ ಟ್ರಂಪ್, ತನ್ನ ಬೆಂಬಲಿಗರು ಕ್ಯಾಪಿಟಲ್ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದಾರೆ ಎಂಬ ವಿಚಾರಣೆಯನ್ನೂ ಸಹ ಎದುರಿಸುತ್ತಿದ್ದಾರೆ. ಟ್ರಂಪ್ ನಿರ್ಗಮನದ ನಂತರ ವಿಶ್ವದ ಬಹುತೇಕ ನಾಯಕರು ಟ್ರಂಪ್ ಆಡಳಿತದ ವಿರುದ್ಧ ಕಿಡಿಕಾರುತ್ತಿದ್ದಾರೆ. ಆ ಟೀಕಾಕಾರರ ಸಾಲಿಗೆ 17 ವರ್ಷದ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಕೂಡ ಸೇರಿಕೊಂಡಿದ್ದಾರೆ.

ಟ್ರಂಪ್ ಹೆಲಿಕ್ಯಾಪ್ಟರ್ ಹತ್ತಿ ನಿರ್ಗಮಿಸುತ್ತಿರುವ ಫೋಟೊವನ್ನು ಟ್ವೀಟ್ ಮಾಡಿದರು ಗ್ರೇಟಾ, “ಅವರು ಉಜ್ವಲ ಮತ್ತು ಅದ್ಭುತ ಭವಿಷ್ಯವನ್ನು ಎದುರು ನೋಡುತ್ತಿರುವ ಬಹಳ ಸಂತೋಷದ ಮುದುಕನಂತೆ ಕಾಣುತ್ತಾರೆ. ನೋಡಲು ತುಂಬಾ ಚೆನ್ನಾಗಿದೆ!” ಎಂದು ಬರೆದಿದ್ದಾರೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆ ನಂತರ ಗ್ರೇಟಾ ಥನ್ಬರ್ಗ್ ಡೋನಾಲ್ಡ್ ಟ್ರಂಪ್‌ರವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಎರಡು ತಿಂಗಳ ಹಿಂದೆ ಮತ ಎಣಿಕೆಯ ವೇಳೆ ಟ್ರಂಪ್ ಸೋಲಿನ ಸನಿಹದಲ್ಲಿದ್ದಾಗ ವರ್ಷದ ಹಿಂದೆ ಟ್ರಂಪ್‌ ಬಳಸಿದ ಪದಗಳನ್ನೇ ಬಳಸಿ ಟ್ವೀಟ್ ಮಾಡುವ ಮೂಲಕ ಭರ್ಜರಿ ಟ್ರೋಲ್ ಮಾಡಿದ್ದರು.

“ಎಷ್ಟೊಂದು ಹಾಸ್ಯಾಸ್ಪದ. ಡೊನಾಲ್ಡ್ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಡೊನಾಲ್ಡ್, ಚಿಲ್!” ಎಂದು ಗ್ರೇಟಾ ಅಂದು ಟ್ವೀಟ್ ಮಾಡಿದ್ದಳು.

2019ರಲ್ಲಿ ಟೈಮ್ ಮ್ಯಾಗಜಿನ್‌ನ ವರ್ಷದ ವ್ಯಕ್ತಿಯಾಗಿ ಗ್ರೇಟಾ ಥನ್ಬರ್ಗ್ ಆಯ್ಕೆಯಾಗಿದ್ದರು. ಆಗ ಬಹಳಷ್ಟು ಜನ ಅವರಿಗೆ ಶುಭಾಶಯ ತಿಳಿಸಿದ್ದರು. ಆದರೆ ಟ್ರಂಪ್ ಮಾತ್ರ ಚಿಕ್ಕ ಹುಡುಗಿಯ ವಿರುದ್ಧ ‘ನಿನ್ನ ಅಹಂಕಾರ ಬಿಡು’ ಎಂದು ಟ್ವೀಟ್ ಮಾಡಿ ಅವಮಾನ ಮಾಡಿದ್ದರು. “ಎಷ್ಟೊಂದು ಹಾಸ್ಯಾಸ್ಪದ. ಗ್ರೇಟಾ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಗ್ರೇಟಾ, ಚಿಲ್!” ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಗ್ರೇಟಾ ಥನ್ಬರ್ಗ್ ಅಂದು ಟ್ರಂಪ್ ಬಳಸಿದ್ದ ಪದಗಳನ್ನೇ ಬಳಸಿ ಟ್ರೋಲ್ ಮಾಡಿದ್ದರೆ ಇಂದು ಅವರು ಹೆಲಿಕ್ಯಾಪ್ಟರ್‌ನಲ್ಲಿ ತೆರಳುವ ನಿರ್ಗಮನದ ಫೋಟೊ ಹಾಕಿ ನೋಡಲು ಎಷ್ಟು ಚೆನ್ನಾಗಿದೆ ಎನ್ನುವ ಮೂಲಕ ಟೀಕಿಸಿದ್ದರು.


ಇದನ್ನೂ ಓದಿ: ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...