Homeಮುಖಪುಟಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

ಜನಪರ ಹೋರಾಟಗಳ ಸಂಗಾತಿ ಮೈಸೂರಿನ ಮರಿದಂಡಯ್ಯ ಬುದ್ಧ ನಿಧನ

- Advertisement -
- Advertisement -

ಚಳವಳಿಗಳು ನದಿಯಂತೆ. ಕಾಲದ ಅಡೆತಡೆಗಳನ್ನು ಎದುರಿಸುತ್ತ ನಿಲ್ಲದೇ ಹರಿಯುತ್ತಿರಬೇಕು. ಚಳವಳಿ ಎಂದೂ ನಿಂತ ನೀರಲ್ಲ. ಧುಮ್ಮಿಕ್ಕಿ ಹರಿವ ವರ್ಷಧಾರೆ. ನಿರಂತರ ಹರಿವ ಹೋರಾಟದ ನದಿಯಲ್ಲಿ ಸಹಸ್ರ ಸಹಸ್ರ ಮಂದಿ ಈಜಿದ್ದಾರೆ. ಗುರಿ ಮುಟ್ಟುವ ಮುನ್ನವೇ ಅರ್ಧದಲ್ಲಿಯೇ ನಿರ್ಗಮಿಸಿದ ಚಳವಳಿಗಾರರೇ ಬಹುತೇಕರು. ಅಂತವರ ಸಾಲಿಗೆ ಮತ್ತೊಬ್ಬ ಹೋರಾಟಗಾರ ಸೇರಿದ್ದಾರೆ. ಮೂರುವರೆ ದಶಕಗಳು ಸಾಮಾಜಿಕ ಶುದ್ಧೀಕರಣ ಕ್ರಿಯೆಯಲ್ಲಿ ನಿರತರಾಗಿದ್ದ ಮೈಸೂರಿನ ಜನಪರ ಚಳವಳಿಗಳ ಸಂಗಾತಿ ಮರಿದಂಡಯ್ಯ ಬುದ್ಧ, ಮಧ್ಯದಲ್ಲಿಯೇ ನಿರ್ಗಮಿಸಿ ಸಂಗಾತಿಗಳಲ್ಲಿ ಶೂನ್ಯಭಾವ ತುಂಬಿದ್ದಾರೆ.

ಮೈಸೂರಿನ ಎಲ್ಲಾ ಮಾದರಿಯ ಚಳವಳಿಗಳಲ್ಲಿ, ಎಡಪಂಥೀಯ, ಪ್ರಗತಿಪರ ನಿಲುವಿನ ಸಮಾರಂಭಗಳಲ್ಲಿ ಕಾಣುತ್ತಿದ್ದವರು ಮರಿದಂಡಯ್ಯ ಬುದ್ಧ. ಪತ್ರಿಕಾ ಕಚೇರಿಗಳಿಗೆ ಒಂದಿಲ್ಲೊಂದು ಪತ್ರಿಕಾ ಹೇಳಿಕೆ ಹಿಡಿದು ಬರುತ್ತಿದ್ದ ಅವರು ಮಿತಭಾಷಿ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಿದ್ದು ಇಲ್ಲವೇ ಇಲ್ಲ. ಪ್ರಚಾರಕ್ಕೆಂದೂ ಹಪಾಹಪಿಸಿದವರಲ್ಲ. ಪ್ರತಿಭಟನೆಗಳಲ್ಲಿ ತಮ್ಮ ಹೆಸರು ಬರೆದುಕೊಳ್ಳುವಂತೆ ಒಮ್ಮೆಯೂ ಹೇಳಿದವರಲ್ಲ. ಆದರೆ ಮೈಸೂರಿನ ಎಲ್ಲಾ ಚಳವಳಿಗಳಲ್ಲಿ ಅವರ ದನಿ ಇದ್ದೇ ಇರುತ್ತಿತ್ತು.

ಎತ್ತರ ನಿಲುವು, ಪೈಲ್ವಾನನ ದೇಹಾಕೃತಿ, ಸದಾ ಬಿಳಿಯ ಜುಬ್ಬಾ ಧರಿಸುತ್ತಿದ್ದ ಅವರ ಹೆಸರೇ ವಿಚಿತ್ರ ಅನಿಸಿತ್ತು. ಮರಿದಂಡಯ್ಯ ಬುದ್ಧ ಅವರ ಹೆಸರು. ಮಾನವತಾವಾದಿ ಬುದ್ಧನ ಹೆಸರನ್ನು ತಮ್ಮ ಹೆಸರ ಜೊತೆ ಇಟ್ಟುಕೊಂಡಿದ್ದ ಅವರು ಸಮಾಜದ ತರತಮಗಳ ಬಗೆಗೆ ನೋಯುತ್ತ ಮೌನಿಯಾಗಿರುವಂತೆ ಕಾಣುತ್ತಿದ್ದರು. ಅನ್ಯಾಯದ ವಿರುದ್ಧದ ಹೆಜ್ಜೆ ಹಾಕುತ್ತಿದ್ದ ಎಲ್ಲರೊಂದಿಗೂ ನಡೆದರು. ನಡೆಯುತ್ತ ನಡೆಯುತ್ತ ದಣಿದು ಅನಾರೋಗ್ಯ ಪೀಡಿತರಾಗಿ ತಮ್ಮ ನಡಿಗೆ ನಿಲ್ಲಿಸಿಬಿಟ್ಟರು.

ಇತ್ತೀಚೆಗೆ ಗುರುಗಳಾದ ನಾ.ದಿವಾಕರ ಅವರು ‘ಮರಿದಂಡಯ್ಯ ಬುದ್ಧ ತೀವ್ರ ಅನಾರೋಗ್ಯದಲ್ಲಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡು ದಿನಗಳಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಸಮಾಜದ ತರಮತಗಳ ವಿರುದ್ಧ ಹೋರಾಡುತ್ತಿದ್ದ ಅವರು ತಮ್ಮ ದೇಹದ ವಿರುದ್ಧ ಹೋರಾಡಿ ಗೆಲ್ಲಲಾಗದಿದ್ದು ನೋವಿನ ಸಂಗತಿ.

“ದಲಿತ ಚಳುವಳಿಯಲ್ಲಿ, ಕಮ್ಯುನಿಸ್ಟ್ ಚಳುವಳಿಯಲ್ಲಿ, ಮಾನವ ಹಕ್ಕು ಹೋರಾಟಗಳಲ್ಲಿ, ಎಲ್ಲ ರೀತಿಯ ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿದ್ದ ಮರಿದಂಡಯ್ಯ ಬುದ್ಧ ತಮ್ಮ ಸರಳ ಜೀವನದಿಂದಲೇ ಜನಾನುರಾಗಿಯಾಗಿದ್ದರು. ಕೂಲಿಕಾರ್ಮಿಕ ಸಂಘದ ಮೂಲಕ ಮೈಸೂರಿನ ಸಾವಿರಾರು ಕೂಲಿ ಕಾರ್ಮಿಕರಿಗೆ, ಪೌರ ಕಾರ್ಮಿಕರಿಗೆ ಆಸರೆಯಾಗಿದ್ದ ಮರಿದಂಡಯ್ಯ ಬುದ್ಧ ಕಾಯಕ ಜೀವಿ. ನಡೆದಾಡುವ ಚೇತನ. ಸ್ವಂತ ವಾಹನ ಇಲ್ಲದೆಯೇ ಅಗತ್ಯವಿದ್ದೆಡೆ, ಅವಶ್ಯಕತೆ ಇದ್ದವರಿಗೆ ಸಹಾಯ ಹಸ್ತ ನೀಡುತ್ತಲೇ ತಮ್ಮ ಬದುಕು ಸವೆಸಿದ ಬುದ್ಧ ಸಾಂಸಾರಿಕ ಜೀವನಕ್ಕಿಂತಲೂ ಸಮಾಜಮುಖಿಯಾಗಿಯೇ ಬದುಕಲು ಇಚ್ಚಿಸಿದವರು” ಎಂದು ಚಿಂತಕರಾದ ನಾ ದಿವಾಕರ್‌ರವರು ನುಡಿನಮನ ಸಲ್ಲಿಸಿದ್ದಾರೆ.

‘ಓಹೊ… ದಿನಾ ನೋಡ್ತಾ ಇದ್ದೆ ಇವರನ್ನ ಒಂದು ಜುಬ್ಬ ಹಾಕೊಂಡು ಓಡಾಡೋರು, ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುವವರು’ ಎಂದು ಗೆಳೆಯ ರಂಗಕರ್ಮಿ ಶಿರಾ ಸೋಮಶೇಖರ್ ನೆನಪಿಸಿಕೊಳ್ಳುತ್ತಾನೆ. ಅವರನ್ನು ಮೈಸೂರಿನ ರಸ್ತೆಗಳಲ್ಲಿ ಮುಂದೆ ಎಂದೆಂದೂ ಕಾಣಲಾಗುವುದಿಲ್ಲ. ಹೋರಾಟಗಾರರ ಎದೆಯಲ್ಲಿ ಅವರು ಸದಾ ಜೀವಂತ.

ವಿನೋದ್ ಮಹದೇವಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...