ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸಲು ಪ್ರಾರಂಭಿಸಲು 16 ವರ್ಷಗಳ ವಯಸ್ಸಿನ ಮಿತಿಯನ್ನು ಹೇರುವ ಕಾನೂನು ಪರಿಚಯಿಸಲು ಆಸ್ಟ್ರೇಲಿಯ ಸರ್ಕಾರ ಮುಂದಾಗಿದೆ. ಈ ಕಾನೂನು ಅನುಸರಣೆಯಾಗುತ್ತಿದೆ ಎಂದು ಖಾತ್ರಿಪಡಿಸುವ ಜವಾಬ್ದಾರಿ ಸಾಮಾಜಿಕ ಮಾಧ್ಯಮಗಳಿಗೆ ಹೊರಿಸುತ್ತಿರುವುದಾಗಿ ಆಸ್ಟ್ರೇಲಿಯಾ ಸರ್ಕಾರ ಗುರುವಾರ ಘೋಷಿಸಿತು. ಸಾಮಾಜಿಕ ಮಾಧ್ಯಮ ಬಳಸಲು
“ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇಂತಹ ಕಾನೂನು ಪರಿಚಯಿಸಲು ಇದು ಸಕಾಲ ಎಂದು ನಾನು ಭಾವಿಸುತ್ತಿದ್ದೇನೆ” ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ನವೆಂಬರ್ 18 ರಂದು ಪ್ರಾರಂಭವಾಗುವ ಈ ವರ್ಷದ ಅಧಿವೇಶನದ ಕೊನೆಯ ಎರಡು ವಾರಗಳಲ್ಲಿ ಶಾಸನವನ್ನು ಸಂಸತ್ತಿನಲ್ಲಿ ಪರಿಚಯಿಸಲಾಗುವುದು ಎಂದು ಹೇಳಿರುವ ಅವರು, ಕಾನೂನು ಅಂಗೀಕರಿಸಿದ 12 ತಿಂಗಳ ನಂತರ ಸಾಮಾಜಿಕ ಮಾಧ್ಯಮ ಬಳಸಲು ಪ್ರಾರಂಭಿಸುವ ವಯಸ್ಸಿನ ಮಿತಿಯು ಜಾರಿಗೆ ಬರಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎಕ್ಸ್, ಟಿಕ್‌ಟಾಕ್, ಇನ್ಸ್‌ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪೆನಿಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಸ್ಟ್ರೇಲಿಯನ್ ಮಕ್ಕಳನ್ನು ಅದರಿಂದ ಹೇಗೆ ಹೊರಗಿಡಬಹುದು ಎಂಬ ಬಗ್ಗೆ ಈ ಒಂದು ವರ್ಷದಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
“ನಾನು ಸಾವಿರಾರು ಪೋಷಕರು, ಅಜ್ಜಿಯರು, ಅಂಕಲ್ ಮತ್ತು ಆಂಟಿಯರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಅವರು, ನನ್ನಂತೆಯೆ ಆನ್‌ಲೈನ್‌ನಲ್ಲಿ ನಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ” ಎಂದು ಪ್ರಧಾನಿ ಅಲ್ಬನೀಸ್ ಹೇಳಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ತಂತ್ರಜ್ಞಾನಗಳನ್ನು ಬಳಸುತ್ತಿರುವ ಯುವಜನರನ್ನು ಮೇಲ್ವಿಚಾರಣೆ ಮಾಡುವುದು ಹೇಗೆ ಎಂಬುದರ ಕುರಿತು ಪ್ರಪಂಚದಾದ್ಯಂತದ ಸರ್ಕಾರಗಳು ಚಿಂತಿಸುತ್ತಿರುವಾಗ ಆಸ್ಟ್ರೇಲಿಯಾ ಸರ್ಕಾರ ಈ ಪ್ರಸ್ತಾಪ ಮಾಡಿದೆ.
ಆಸ್ಟ್ರೇಲಿಯಾ ಸರ್ಕಾರ ಪ್ರಸ್ತಾಪ ಮಾಡಿರುವ ಕಾನೂನಿನಲ್ಲಿ, ವಯೋಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ದಂಡ ವಿಧಿಸಲಾಗುತ್ತದೆ. ಆದರೆ ಅದರನ್ನು ಬಳಸಿದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಅವರ ಪೋಷಕರಿಗೆ ಯಾವುದೆ ದಂಡವನ್ನು ಕಾನೂನು ಪ್ರಸ್ತಾಪಿಸಿಲ್ಲ. “ಸಾಮಾಜಿಕ ಮಾಧ್ಯಮಗಳಿಗೆ ಪ್ರವೇಶವನ್ನು ತಡೆಗಟ್ಟಲು ಫ್ಲಾಟ್‌ಫಾರ್ಮ್ ಅವರೆ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದು ಅವರ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿಯು ಪೋಷಕರು ಅಥವಾ ಮಕ್ಕಳ ಮೇಲೆ ಇರುವುದಿಲ್ಲ” ಎಂದು ಪ್ರಧಾನಿ ಅಲ್ಬನೀಸ್ ಹೇಳಿದ್ದಾರೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಸುರಕ್ಷತಾ ಮುಖ್ಯಸ್ಥ ಆಂಟಿಗೋನ್ ಡೇವಿಸ್, ಸರ್ಕಾರವು ಪರಿಚಯಿಸಲು ಬಯಸುವ ಯಾವುದೇ ವಯಸ್ಸಿನ ಮಿತಿಗಳನ್ನು ಕಂಪನಿಯು ಗೌರವಿಸುತ್ತದೆ ಎಂದು ಹೇಳಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ಡಿಜಿಟಲ್ ಉದ್ಯಮದ ಪರ ವಾದಿಸುವ ಡಿಜಿಟಲ್ ಇಂಡಸ್ಟ್ರಿ ಗ್ರೂಪ್ Inc, ಸರ್ಕಾರ ನೀತಿಯನ್ನು ಟೀಕಿಸಿದ್ದು, “21 ನೇ ಶತಮಾನದ ಸವಾಲುಗಳಿಗೆ 20 ನೇ ಶತಮಾನದ ಪ್ರತಿಕ್ರಿಯೆ” ಎಂದು ಹೇಳಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಜಿರಿಬಾಮ್‌ನಲ್ಲಿ ಆರು ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ಹಲ್ಲೆ
ಮಣಿಪುರ ಹಿಂಸಾಚಾರ: ಜಿರಿಬಾಮ್‌ನಲ್ಲಿ ಆರು ಮನೆಗಳಿಗೆ ಬೆಂಕಿ, ಗ್ರಾಮಸ್ಥರ ಮೇಲೆ ಹಲ್ಲೆ


