ನರೇಂದ್ರ ಮೋದಿಯವರು ಏರ್ ಇಂಡಿಯಾ ವಿಮಾನದಲ್ಲಿ ಕುಳಿತು ಅಮೆರಿಕಗೆ ತೆರಳುತ್ತಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ ನಂತರ ಅದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಕೆಲವು ಫೋಟೊಗಳನ್ನು ಕಾಪಿ ಮಾಡೋದು ಕಷ್ಟ” ಎಂಬ ಶೀರ್ಷಿಕೆಯಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರು ವಿಮಾನದೊಳಗೆ ಪತ್ರಿಕಾಗೋಷ್ಠಿ ನಡೆಸುತ್ತಿರುವ ಹಲವು ಫೋಟೊಗಳನ್ನು ಅದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
Some photographs are harder to copy.
Former PM, Dr. Manmohan Singh addressing Press Conferences on board Air India One. pic.twitter.com/JiYlQcX0HE
— Congress (@INCIndia) September 23, 2021
ಪ್ರಧಾನಿ ಮೋದಿಯವರ ಮೂರು ದಿನಗಳ ಅಮೆರಿಕ ಪ್ರವಾಸ ಆರಂಭವಾಗಿದ್ದು ಅವರು ವಾಷಿಂಗ್ಟನ್ ಭೇಟಿ, ಕ್ವಾಡ್ ಸಭೆ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ವಿಮಾನದಲ್ಲಿ ಹೊರಟಿರುವ ಫೋಟೊ ಹಂಚಿಕೊಂಡಿರುವ ಮೋದಿ “ಸುದೀರ್ಘ ವಿಮಾನ ಪ್ರಯಾಣ ಎಂದರೆ ಕೆಲವು ಪೇಪರ್ ಮತ್ತು ಫೈಲ್‌ಗಳನ್ನು ಕೆಲಸ ಮುಗಿಸುವ ಅವಕಾಶವೂ ಹೌದು” ಎಂದು ಬರೆದುಕೊಂಡಿದ್ದರು.
A long flight also means opportunities to go through papers and some file work. pic.twitter.com/nYoSjO6gIB
— Narendra Modi (@narendramodi) September 22, 2021
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಬಿಜೆಪಿ ಮುಖಂಡರು ಈ ಫೋಟೊವನ್ನು ಷೇರ್ ಮಾಡಿ “ಕರ್ಮಯೋಗಿ ಮೋದಿಯವರೂ ಎಂದಿಗೂ ನಿದ್ರಿಸುವುದಿಲ್ಲ”, “ಶ್ರಮಜೀವಿ ಮೋದಿ” ಎಂದೆಲ್ಲಾ ಶೀರ್ಷಿಕೆಗಳನ್ನು ನೀಡಿದ್ದರು.
The KarmaYogi never sleeps ? https://t.co/Qyz6RL9P4y
— C T Ravi ?? ಸಿ ಟಿ ರವಿ (@CTRavi_BJP) September 22, 2021
ಇನ್ನು ಕೆಲವು ಸಾಮಾಜಿಕ ಜಾಲತಾಣಿಗರು ಮೋದಿ ಏನನ್ನು ಮರೆತರೂ ಫೋಟೊಶೂಟ್ ಮಾತ್ರ ಮರೆಯುವುದಿಲ್ಲ, ಇದೊಂದು ಅದ್ಬುತ ಫೋಟೊ ಶೂಟ್ ಎಂದು ಕಾಲೆಳೆದಿದ್ದರು. ಮೋದಿಯವರ ಪೇಪರ್ ಎದ್ದು ಕಾಣುವಂತೆ ಅದರ ಕೆಳಗೆ ಸಹ ಲೈಟ್ ಅಳವಡಿಸಲಾಗಿದೆ ಎಂದೆಲ್ಲಾ ಟ್ರೋಲ್ ಮಾಡಿದ್ದರು. ಇನ್ನು ಕೆಲವರು ಝೂಮ್ ಮಾಡಿ ಮೋದಿಯವರ ಕಣ್ಣುಗಳನ್ನು ನೋಡಿ, ಅವರು ಪೇಪರ್‌ಗಳನ್ನು ನೋಡುತ್ತಿಲ್ಲ. ಇದು ಪಕ್ಕಾ ಫೋಟೊ ಶೂಟ್ ಎಂದು ಟೀಕಿಸಿದ್ದಾರೆ.
I have zoomed the photo !
The eyeballs look somewhere else !This is purely a photoshoot ! pic.twitter.com/p4DlbsoZZ0
— Abhijit Mukherjee (@ABHIJIT_LS) September 22, 2021
ಸೆಪ್ಟಂಬರ್ 16 ರಂದು ಇಂಡಿಯನ್ ಹಿಸ್ಟರಿ ಪಿಕ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಪತ್ನಿಯೊಂದಿಗೆ ವಿಮಾನದಲ್ಲಿ ಕುಳಿತು ಪೇಪರ್ ಓದುತ್ತಿರುವ ಹಳೆಯ ಫೋಟೊವೊಂದನ್ನು ಷೇರ್ ಮಾಡಿತ್ತು. ಸೆಪ್ಟಂಬರ್ 17 ರಂದು ಅದೇ ಫೋಟೊವನ್ನು ಹಂಚಿಕೊಂಡಿರುವ ಸಂಜೀವ್ ಪಿ ಎಂಬುವವರು “ಶೀಘ್ರದಲ್ಲೇ ಈ ಫೋಟೋದ ಹೊಸ ನೋಟ ಬರಲಿದೆ ಸ್ನೇಹಿತರೆ.. ಐಡಿಯಾ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ವ್ಯಂಗ್ಯವಾಡಿದ್ದರು. ಅದಾದ ಒಂದೇ ವಾರದಲ್ಲಿ ಮೋದಿಯವರು ಸಹ ಅದೇ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗಾಗಿ ಹಲವರು ಜನ ನಿಮ್ಮ ಊಹೆ ನಿಜವಾಯಿತು ಎಂದು ಪೋಸ್ಟ್ ಹಾಕಿದ್ದಾರೆ.
जल्द ही इस फोटो का नया रूप आने वाला है मित्रों.. आईडिया देने के लिए धन्यवाद। https://t.co/qIj3hmUVAo
— Sanjeev P Saikia (@Ni4u) September 16, 2021
ಇದಕ್ಕೆ ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದೆ ನಿಂತು ವ್ಯಂಗ್ಯವಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು ವಿದೇಶಿ ಪ್ರಯಾಣದ ವೇಳೆ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸುತ್ತಿರುವ ಫೋಟೊಗಳನ್ನು ಹಂಚಿಕೊಂಡು ಇದನ್ನು ಮೋದಿಯವರು ಕಾಪಿ ಮಾಡುವುದು ಕಷ್ಟ ಎಂದು ವ್ಯಂಗ್ಯವಾಡಿದೆ.
ಮೋದಿ ಫೋಟೊಗೆ ಬಿಜೆಪಿ ಮತ್ತು ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆಯ ಕೆಲವು ಟ್ವೀಟ್‌ಗಳು ಇಲ್ಲಿವೆ.
सदैव बिना रुके बिना थके, देश की सेवा में।#SevaSamarpan https://t.co/lRqCFdOdKJ
— Ashwini Vaishnaw (@AshwiniVaishnaw) September 22, 2021
1. Papers on the Left
2. EyeSight on the Right
3. Mobile is lighting up behind the papers.BTW What is going on? pic.twitter.com/u5IhmnKHsP
— Srinivas BV (@srinivasiyc) September 22, 2021
ಇದನ್ನೂ ಓದಿ; ಭಾರತ್ ಬಂದ್: ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ರೈತರ ಬಂದ್‌ಗೆ ʼನೈತಿಕʼ ಬೆಂಬಲ


