ಬಾಲಿವುಡ್ ನಟ ಸೋನು ಸೂದ್ ಚಿತ್ತೂರು ಜಿಲ್ಲೆಯ ರೈತನೊಬ್ಬರಿಗೆ ಸಹಾಯ ಮಾಡಲು ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ ನಂತರ, ಕುಟುಂಬವು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದು, ಸೋನು ಸೂದ್ ನಮಗೆ “ದೇವರಿಗಿಂತ ಕಡಿಮೆಯಿಲ್ಲ” ಎಂದಿದ್ದಾರೆ.
“ಅವರು ಚಲನಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಬಹುದು ಆದರೆ ನಿಜ ಜೀವನದಲ್ಲಿ ಅವರು ನಾಯಕ. ಅವರು ಸಾವಿರಾರು ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತಲುಪಲು ಸಹಾಯ ಮಾಡುತ್ತಿರುವ ವೀರ ಎಂಬ ವರದಿಗಳನ್ನು ಕೇಳಿದ್ದೆವು. ಆದರೆ ಇಂದು ನಾವು ಕೂಡ ಅವರ ಫಲಾನುಭವಿಯಾಗಿದ್ದೇವೆ. ಅವರು ನಮಗೆ ದೇವರಿಗಿಂತ ಕಡಿಮೆಯಿಲ್ಲ” ಎಂದು ನಟನಿಂದ ಟ್ರ್ಯಾಕ್ಟರ್ ಪಡೆದ ರೈತ ನಾಗೇಶ್ವರ ರಾವ್ ಹೇಳಿದ್ದಾರೆ.
This family doesn’t deserve a pair of ox ?..
They deserve a Tractor.
So sending you one.
By evening a tractor will be ploughing your fields ?
Stay blessed ❣️?? @Karan_Gilhotra #sonalikatractors https://t.co/oWAbJIB1jD— sonu sood (@SonuSood) July 26, 2020
ಸೋನು ಸೂದ್ ನಮ್ಮ ಬಡತನವನ್ನು ಗುರುತಿಸಿ ತಕ್ಷಣ ನಮಗೆ ಸಹಾಯ ಮಾಡಿದರು ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ನಾಗೇಶ್ವರ ರಾವ್ ಅವರ ಮಗಳು ವೆನ್ನೆಲಾ ಮಾತನಾಡಿ “ನಾವು ಕೃಷಿ ಮಾಡಲು ಬಯಸಿದ್ದೆವು. ಆದರೆ ನಮ್ಮ ಬಳಿ ಹಣವಿರಲಿಲ್ಲ. ಆದ್ದರಿಂದ ನಮ್ಮ ಕುಟುಂಬ ಸದಸ್ಯರು ಎಲ್ಲರೂ ಸೇರಿ ದೈಹಿಕ ಕೆಲಸ ಮಾಡಲು ಆರಂಭಿಸಿದೆವು. ಈ ವಿಷಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವೈರಲ್ ಆಗಿದೆ. ಸೋನು ಸೂದ್ ಜಿ ನಮ್ಮ ಅವಸ್ಥೆಯ ಬಗ್ಗೆ ತಿಳಿದು ಸಹಾಯ ಮಾಡಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳು” ಎಂದಿದ್ದಾರೆ.
Actor @SonuSood came to the rescue of a farmer's family in Andhra Pradesh after a video of two girls plowing a field in Chittoor went viral
Nageswara Rao was forced to take his daughters' help as he couldn't afford oxen. Moved by their plight, Sonu sent a tractor to the family pic.twitter.com/PUh7uMCZgq
— Hindustan Times (@htTweets) July 27, 2020
ಚಿತ್ತೂರು ಜಿಲ್ಲೆಯ ಇಬ್ಬರು ಹೆಣ್ಣುಮಕ್ಕಳು ವೆನ್ನೆಲಾ ಮತ್ತು ಚಂದನಾ ತಮ್ಮ ಭೂಮಿಯನ್ನು ಉಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭೂಮಿಯನ್ನು ಉಳುಮೆ ಮಾಡಲು ಕುಟುಂಬವು ಟ್ರಾಕ್ಟರ್ ಅಥವಾ ಎತ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ತಮ್ಮ ಭುಜದ ಮೇಲೆ ನೊಗ ಹೊತ್ತು ಉತ್ತಿದ್ದರು. ಈ ವಿಡಿಯೋ ನೋಡಿದ ಸೋನು ಸೂದ್ ಅವರ ಮನೆಗೆ ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಕಳೆದ 20 ವರ್ಷಗಳಿಂದ ಮದನಪಲ್ಲೆ ಮಂಡಲದಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದ ಆ ಹೆಣ್ಣು ಮಕ್ಕಳ ತಂದೆ ನಾಗೇಶ್ವರ ರಾವ್ ಲಾಕ್‌ಡೌನ್ ನಂತರ ಯಾವುದೇ ಕೆಲಸವಿಲ್ಲದೇ ತಮ್ಮ ಸ್ಥಳೀಯ ಗ್ರಾಮ ರಾಜುವರಿಪಲ್ಲಿಗೆ ಕೃಷಿ ಮಾಡಲು ಮರಳಿದ್ದರು.
ಆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು. ಅದಕ್ಕಾಗಿ ಆ ಕುಟುಂಬಕ್ಕೆ ಟ್ರಾಕ್ಟರ್ ನೀಡುತ್ತಿದ್ದೇನೆ ಎಂದು ಸೋನು ಸೂದ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
Spoke with @SonuSood ji & applauded him for his inspiring effort to send a tractor to Nageswara Rao’s family in Chittoor District. Moved by the plight of the family, I have decided to take care of the education of the two daughters and help them pursue their dreams pic.twitter.com/g2z7Ot9dl3
— N Chandrababu Naidu #StayHomeSaveLives (@ncbn) July 26, 2020
ತದನಂತರ ತೆಲುಗು ದೇಶಂ ಪಕ್ಷದ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿ, ಸೋನು ಸೂದ್‌ರವರ ಸಹಾಯಕ್ಕಾಗಿ ಧನ್ಯವಾದಗಳು. ನಾನು ಆ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ಮಾರ್ಗದರ್ಶಿ: ಪಿಯುಸಿ ನಂತರ ಮುಂದೇನು?: ಆಯ್ಕೆಗಳ ಬಗ್ಗೆ ಸ್ಪಷ್ಟತೆ ಇರಲಿ; ಗೊಂದಲ ಬೇಡ


