ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಒತ್ತಾಯದ ಮೇರೆಗೆ ಸಮಾಜವಾದಿ ಪಕ್ಷ (ಎಸ್‌ಪಿ)ದ ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಾಲ್ಜಿ ವರ್ಮಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಶನಿವಾರ ಆರೋಪಿಸಿದೆ. ಶನಿವಾರ ಆರನೇ ಹಂತದಲ್ಲಿ ಅಂಬೇಡ್ಕರ್ ನಗರದಲ್ಲಿ ಮತದಾನ ನಡೆದಿದೆ.
ಅಂಬೇಡ್ಕರ್ ನಗರ ಆಡಳಿತವು ಎಸ್‌ಪಿ ಅಭ್ಯರ್ಥಿಯನ್ನು ಗೃಹಬಂಧನದಲ್ಲಿಟ್ಟುಕೊಂಡು ಚುನಾವಣೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿ ಎಸ್‌ಪಿ ನಾಯಕ ಅರವಿಂದ್ ಕುಮಾರ್ ಸಿಂಗ್ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ. ನ್ಯಾಯಯುತ ಮತದಾನವಾಗುವಂತೆ ಚುನಾವಣಾ ಆಯೋಗವು ಗಮನಹರಿಸಬೇಕು ಎಂದಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ವರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಅಲ್ಲಿ ಏನನ್ನೂ ಪತ್ತೆ ಮಾಡುವುದು ಪೊಲೀಸರಿಗೆ ಬೇಕಿರಲಿಲ್ಲ ಅಥವಾ ಅಲ್ಲಿ ಪೊಲೀಸರಿಗೆ ಏನೂ ದೊರೆಯಲೂ ಇಲ್ಲ. ಇದು ಲಾಲ್ಜಿ ವರ್ಮಾರ ಪ್ರಾಮಾಣಿಕ ವರ್ಚಸ್ಸಿಗೆ ಕುಂದು ತರುವ ಕೇಡಿತನದ ಕೃತ್ಯವಾಗಿದೆ. ತೀವ್ರ ಖಂಡನೀಯ ಕೃತ್ಯವಿದು! ಸೋಲುತ್ತಿರುವ ಬಿಜೆಪಿಯ ಹತಾಶೆಯಿದು” ಎಂದಿದ್ದಾರೆ.
सपा के जीत रहे अंबेडकरनगर प्रत्याशी श्री लालजी वर्मा के घर पर पुलिस भेजकर छापा मारा गया लेकिन पुलिस को न कुछ मिलना था, न कुछ मिला। ये श्री लालजी वर्मा जी की ईमानदार छवि को धूमिल करने का कुकृत्य है। घोर निंदनीय!
ये हारती हुई भाजपा की हताशा है।#कभी_नहीं_चाहिए_भाजपा pic.twitter.com/Dp3zBdPWDf
— Akhilesh Yadav (@yadavakhilesh) May 25, 2024
“ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸರ್ಕಾರ ಸೋಲಿನ ಭೀತಿಯಿಂದ ಬಹಿರಂಗವಾಗಿ ಸರ್ವಾಧಿಕಾರ ನಡೆಸುತ್ತಿದ್ದಾರೆ” ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ಹೇಳಿದೆ.
“ಅಂಬೇಡ್ಕರ್ ನಗರದಿಂದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಲಾಲ್ಜಿ ವರ್ಮಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳನ್ನು ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ. ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ. ಸರ್, ತಾವು ಎಚ್ಚೆತ್ತುಕೊಂಡಿದ್ದರೆ ಕ್ರಮ ಕೈಗೊಳ್ಳಿ'” ಕಾಂಗ್ರೆಸ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದು, ಚುನಾವಣಾ ಆಯೋಗ ಗಮನ ಸೆಳೆಯುವ ಪ್ರಯತ್ನ ಮಾಡಿದೆ.
ಇದನ್ನೂ ಓದಿ : ದ್ವೇಷ ಭಾಷಣ: ಪ್ರಧಾನಿ ಮೋದಿ ವಿರುದ್ದ ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು


