Homeಮುಖಪುಟಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಸ್ಪಾನಿಶ್ ಸಿನಿಮಾ ರೋಮಾ : ನೆನಪುಗಳೆಂಬ ಲೋಕ

ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಲ್ಪಾಂಸೋ ಕ್ವಾರೋನ್

- Advertisement -
- Advertisement -

ಕೆಲವು ಚಿತ್ರಗಳನ್ನು ನೋಡಿದಾಗ ಒಂದಿಷ್ಟು ಪ್ರಶ್ನೆಗಳು ಮೂಡುತ್ತವೆ; ನನಗ್ಯಾಕೆ ಈ ಚಿತ್ರ ಇಷ್ಟವಾಯಿತು? ನನಗೆ ನಿಜವಾಗಿಯೂ ಇಷ್ಟವಾಗಿದೆಯಾ ಅಥವಾ ಸುಮ್ನೆ ಹಾಗೆ ಅಂತಿದೀನಾ? ಒಂದು ವೇಳೆ ಈ ಚಿತ್ರದ ಕಥೆಯನ್ನು ನನಗೆ ಯಾರೋ ಹೇಳಿದ್ದಲ್ಲಿ ನನಗೆ ಇಷ್ಟವಾಗುತ್ತಿತ್ತಾ? ಯಾಕೆ ಈ ಚಿತ್ರ ಮಾಡಿದ ನಿರ್ದೇಶಕ?

ರೋಮಾ ಎಂಬ ಚಿತ್ರ ನೋಡಿದ ನಂತರ ಮೂಡಿದ ಕೆಲವ ಪ್ರಶ್ನೆಗಳು ಹೀಗೆಯೆ ಇದ್ದವು. ಈ ಚಿತ್ರ, ಈ ಚಿತ್ರದ ಹಿಂದಿರುವ ದೀರ್ಘ ಪ್ರಯಾಣವನ್ನು ಅರ್ಥ ಮಾಡಿಕೊಳ್ಳುವುದು ಒಂದು ಸವಾಲೆನಿಸಿತು. ಚಿತ್ರದ ಬಗ್ಗೆ ಹೇಳುವುದಾದರೆ; ಮೆಕ್ಸಿಕೋದ ಒಂದು ನಗರದಲ್ಲಿ ಉಚ್ಚ ಮಧ್ಯಮ ವರ್ಗದ ಮನೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಯುವಕಿಯ ಕಥೆ. ಅದರೊಂದಿಗೆ ಅವಳನ್ನು ಕೆಲಸಕ್ಕಿಟ್ಟುಕೊಂಡಿರುವ ಕುಟುಂಬದ ಕಥೆಯೂ ಹೌದು. 70ರ ದಶಕದಲ್ಲಿಯ ಕಥೆಯಾದ ಇದನ್ನು ಆ ಕಾಲದಲ್ಲಿ ಮೆಕ್ಸಿಕೋದಲ್ಲಿ ಮನೆಗೆಲಸ ಮಾಡುವವರ ವ್ಯಥೆ ಅಥವಾ ಸಂಕಷ್ಟಗಳನ್ನು ತೋರಿಸಲು ಮಾಡಿದ ಚಿತ್ರವಲ್ಲ. ಈ ಚಿತ್ರ ಅಲ್ಪಾಂಸೋ ಕ್ವಾರೋನ್ ಎಂಬ ಖ್ಯಾತ ನಿರ್ದೇಶಕನ ನೆನಪುಗಳ ಚಿತ್ರಣ.

ಯಾವುದೇ ಚಿತ್ರ ಇಷ್ಟವಾದಾಗ ಅದರ ಸ್ಟ್ರಕ್ಚರ್ ಗಟ್ಟಿಯಾಗಿತ್ತು, ಪಾತ್ರಗಳು ಜೀವಂತವಾಗಿದ್ದವು, ಚಿತ್ರ ಪ್ರತಿ ಫ್ರೇಮ್‌ನಲ್ಲೂ ಕಥೆಯನ್ನು ಮುಂದುವರೆಸುತ್ತಿತ್ತು, ಮುಂದೇನಾಗುವುದೋ ಎನ್ನುವ ಕಾತುರ ಹುಟ್ಟಿಸುತ್ತಿತ್ತು ಎಂದೆಲ್ಲಾ ನಾವು ತಿಳಿದಿದ್ದೆವು. ಇಲ್ಲಿ ಅವೆಲ್ಲ ಗೌಣ. ಆ ಆಯಾಮಗಳ ಪೋಸ್ಟ್ ಮಾರ್ಟಮ್ ಮಾಡುವ ಯಾವ ಅವಶ್ಯಕತೆ ಕಾಣುವುದಿಲ್ಲ. ಈ ಚಿತ್ರವನ್ನು ನೋಡುವುದೊಂದು ಅನುಭವ. ನಿರ್ದೇಶಕನ ನೆನಪುಗಳ, ಅವನ ಬಾಲ್ಯದ ಜಗತ್ತಿನ ಪಾತ್ರಗಳ, ಘಟನೆಗಳ ಅನುಭವ. ಅದೇ ನನ್ನ ಮುಂದಿನ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ.

ಕೇವಲ ನೆನಪುಗಳು ಒಂದು ಕಥೆಯಾಗಬಲ್ಲವೇ? ನೆನಪಿಡಿ, ಇಲ್ಲಿ ನೆನಪು ಅಂದರೆ ಒಂದು ಸ್ವಾರಸ್ಯಕರ ಅಥವಾ ಭೀಕರ ಘಟನೆಯ ನೆನಪಲ್ಲ. ನೆನಪೆಂದರೆ, ತಾನು ಬೆಳೆದ ಓಣಿಯಲ್ಲಿ ಬೀಳಿತ್ತಿದ್ದ ಬಿಸಿಲನ ನೆನಪು, ಪ್ರತಿಭಟನೆಯೊಂದು ನಡೆದಾಗ ಹಿಂಸೆಯಾಗಿ ಆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ಅಲ್ಲಿ ರಸ್ತೆಯ ಮೇಲೆ ನಡೆಯುತ್ತಿರುವ ಗಲಭೆಯ ಚಿತ್ರದ ಹಿನ್ನೆಲೆಯಲ್ಲಿ ಒಂದು ಫರ್ನಿಚರ್ ಅಂಗಡಿಯ ಕಿಟಕಿಯಿಂದ ಜನರು ಇಣುಕಿ ನೋಡುತ್ತಿದ್ದಾರೆ, ಅದರ ನೆನಪು, ಆ ಸದ್ದುಗಳು, ಬಣ್ಣಗಳ ನೆನಪು. ಬಣ್ಣಗಳು ಹುಟ್ಟಿಸುವ ಭಾವನೆಗಳ ನೆನಪು, ಗತಿಸಿ ಹೋದ ಕಾಲದ, ಸಂಬಂಧಗಳ ನೆನಪುಗಳು. ಅತ್ಯಂತ ಖಾಸಗಿಯಾದ ನೆನಪುಗಳನ್ನು ಕಥೆಯನ್ನಾಗಿಸುವುದು, ಅದನ್ನು ನಿಜವಾಗಿಯೂ ಪರದೆಯ ಮೇಲೆ ತರುವುದಾದರೂ ಹೇಗೆ?

ನಿರ್ದೇಶಕ ಅಲ್ಫಾಂಸೋ ಕ್ವಾರೋನ್ ಕೂಡ ಚಿತ್ರದಲ್ಲಿ ತೋರಿಸಿದತಹ ಉಚ್ಚ ಮಧ್ಯಮ ವರ್ಗದಲ್ಲಿ ಬೆಳದವನು. ತಾನು ಬೆಳೆಯುತ್ತಿರುವಾಗ ಚಿತ್ರದಲ್ಲಿ ಇರುವ ಕ್ಲಿಯೋ ಹಾಗೆ ಅವನನ್ನೂ ಒಬ್ಬ ಸಹಾಯಕಿ ಲಿಬೋ ನೋಡಿಕೊಂಡಿದ್ದಳು. ಎಪ್ಪತ್ತರ ಮೊದಲರ್ಧದಲ್ಲಿ ಮೆಕ್ಸಿಕೋ ಕಷ್ಟದ ಕಾಲದಿಂದ ಹೋಗುತ್ತಿತ್ತು. ಆ ಸಹಾಯಕಿ, ಮೆಕ್ಸಿಕೋ ದೇಶದ ಆ ಕಾಲದ ನೆನಪುಗಳನ್ನು ದಶಕಗಟ್ಟಲೇ ಚಿಂತಿಸಿ, ಮನದಲ್ಲಿ ಒಂದು ಅಸ್ಪಷ್ಟ ರೂಪ ಮೂಡಿದಾಗ ಈ ಚಿತ್ರವನ್ನು ಪ್ರಾರಂಭಿಸಿದ. ಈ ಚಿತ್ರದ ಬಗ್ಗೆ ಯೋಚಿಸಿದಾಗೆಲ್ಲ, ತನ್ನ ನೆನಪುಗಳನ್ನೆಲ್ಲ ಕೆದಕಿದಾಗ ಅವೆಲ್ಲವುಗಳನ್ನು ಕಪ್ಪುಬಿಳುಪಿನಲ್ಲೇ ಕಂಡಿದ್ದರಿಂದ ಇದು ಕಲರ್ ಚಿತ್ರವಲ್ಲ. ತನ್ನ ಮುಂಚಿನ ಚಿತ್ರಗಳಲ್ಲಿ ಛಾಯಾಗ್ರಾಹಕನಾಗಿದ್ದ ಇಮ್ಯಾನುಯೆಲ್ ಲುಬೆಜ್ಕಿ ಅನ್ನು ಬಿಟ್ಟು ತಾನೇ ಕ್ಯಾಮರ ಹಿಡಿದ. ಪ್ರತಿಯೊಂದು ದೃಶ್ಯಗಳನ್ನು ತನ್ನ ನೆನಪಿನಾಳದಲ್ಲಿ ಮೂಡಿದ ಚಿತ್ರಗಳಂತೆ ಪರೆದಯ ಮೇಲೆ ಮೂಡಿಸಲು ಪ್ರಯತ್ನಿಸಿದ.

ತನ್ನ ನೆನಪುಗಳ ಪ್ರಾಮಾಣಿಕತೆಯನ್ನು ಮೂಡಿಸಲು ಕಠಿಣ ಶ್ರಮದೊಂದಿಗೆ ಸಿನೆಮಾ ಎಂಬ ಕಲೆಯ ಟೆಕ್ನಿಕ್‌ಗಳ ಸಹಾಯವೂ ಬೇಕು. ತನ್ನ ಆ ನೆನಪುಗಳು ಬಿಡಿ ಬಿಡಿ ಶಾಟ್‌ಗಳಲ್ಲಿ ಕಾಣಲಿಲ್ಲವಾದುದರಿಂದ ಚಿತ್ರದಲ್ಲಿ ಲಾಂಗ್‌ಶಾಟ್‌ಗಳು ಹೆಚ್ಚು ಕಾಣುತ್ತವೆ. ಆಗ ಇನ್ನಷ್ಟು ಶ್ರಮ ಬೇಕು. ಆಯಾ ದೀರ್ಘ ಶಾಟ್‌ಗಳಲ್ಲಿ ಕಂಡುವರುವ ಎಲ್ಲಾ ವಸ್ತುಗಳು ಆ ಸಮಯಕ್ಕೆ ತಕ್ಕಂತೆ ಇರಬೇಕು, ಪ್ರತಿಯೊಂದು ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾಮರಾದ ಚಲನೆ ಮಾಡಬೇಕು, ಹೀಗೆ ಹತ್ತಾರು ವಿಷಯಗಳನ್ನು ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಂದು ಶಾಟ್ ಅನ್ನು ತೆಗೆಯಬೇಕಾಗುತ್ತದೆ.

ಇದೊಂದು ಖಾಸಗಿ ಚಿತ್ರವಾದುದರಿಂದ ಚಿತ್ರದ ಸ್ಕ್ರಿಪ್ಟ್ ನಿರ್ದೇಶಕನಿಗೆ ಮಾತ್ರ ತಿಳಿದಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡ ಜಲಿಟ್ಸಾ ಅಪಾರೆಸಿಒ ಸೇರಿ ಬಹುತೇಕ ನಟರು ವೃತ್ತಿಪರ ನಟರಲ್ಲ. ಚಿತ್ರದಲ್ಲಿ ನೈಜತೆಯನ್ನು ತರಲು ಸಾಮಾನ್ಯ ಜನರನ್ನೇ ಬಳಸಿಕೊಳ್ಳಲಾಯಿತು. ಪ್ರತಿದಿನ ಚಿತ್ರೀಕರಣ ಶುರುವಾಗುವ ಮುನ್ನ ಎಲ್ಲಾ ನಟರಿಗೂ ಪ್ರತ್ಯೇಕವಾಗಿ ದೃಶ್ಯಗಳನ್ನು ವಿವರಿಸಿ (ಕೆಲವೊಮ್ಮೆ ಬೇರೆ ಬೇರೆ ನಟರಿಗೆ ಒಂದೇ ದೃಶ್ಯದ ಬೇರೆ ಬೇರೆ ವಿವರಣ ನೀಡಿ) ಕ್ಯಾಮೆರ ಚಾಲನೆ ನೀಡುತ್ತಿದ್ದರು; ದೃಶ್ಯ ತನ್ನಿಂತಾನೆ ರೂಪಗೊಳ್ಳಲಿ ಎಂದು.

ಚಿತ್ರದಲ್ಲಿ ಇದ್ದ ಕೆಲವು ವೃತ್ತಿಪರ ನಟರಿಗೆ ಇದು ಗಲಿಬಿಲಿ (ಪ್ರಾರಂಭದಲ್ಲಿ) ಮಾಡಿಸಿದರೆ, ಮೊದಲನೇ ಬಾರಿ ನಟಿಸುವವರು ಲೀಲಾಜಾಲವಾಗಿ ನಟಿಸುವಂತೆ ಮಾಡಿತು. ಆಸ್ಪತ್ರೆಯ ದೃಶ್ಯದಲ್ಲಿ ನಿಜವಾದ ವೈದ್ಯರು ಮತ್ತು ಆರೋಗ್ಯಕರ್ಮಿಗಳನ್ನೇ ಬಳಸಿ ಚಿತ್ರೀಕರಣ ಮಾಡಿದರು.

ಕ್ಯಾಮೆರ ಮೂವಮೆಂಟ್ ಅಥವಾ ಛಾಯಾಗ್ರಹಣದ ಪ್ರಶ್ನೆ ಬಂದಾಗ ಎಷ್ಟೇ ಸುಂದರವಾದ ಶಾಟ್ ಬರುತ್ತಿದ್ದರೂ ಈ ಮುಂಚೆ ಬಳಸಲಾಗುವ ರೆಫರನ್ಸ್ ಶಾಟ್‌ಗಳನ್ನು ಬಳಸಬಾರದು ಎನ್ನುವ ಹಟಕ್ಕೆ ಬಿದ್ದಿದ್ದರು ನಿರ್ದೇಶಕ ಅಲ್ಫಾಂಸೋ. ಪ್ರತಿಯೊಂದು ಶಾಟ್ ಕೂಡ ಹೊಸದಾಗಿ, ತನ್ನ ನೆನಪಿನ ಚಿತ್ರಕ್ಕೆ ಪೂರಕವಾಗಿರುವಂತೆ ನೋಡಿಕೊಂಡರು. ಅದರಿಂದ ಈ ಚಿತ್ರಕ್ಕೆ ತನ್ನದೇ ಆದ ಒಂದು ವ್ಯಾಕರಣವಿದೆ; ತನ್ನದೇ ಆದ ಒಂದು ಜೀವವಿದೆ. ಅದನ್ನು ಒಂದು ಜೀವಮಾನದಲ್ಲಿ ಒಂದು ಸಲ ಮಾತ್ರ ಮಾಡಲು ಸಾಧ್ಯ. ಗ್ಯ್ರಾವಿಟಿ, ಯಿ ತು ಮಾಮಾ ತಾಂಬಿಯನ್, ಚಿಲ್ಡ್ರನ್ ಆಫ್ ಮೆನ್ ಮುಂತಾದ ವಿಶ್ವವಿಖ್ಯಾತ ಚಿತ್ರಗಳನ್ನು ನೀಡಿದ್ದರೂ, ರೋಮಾ ಎಂಬ ಈ ಚಿತ್ರ ತನ್ನ ಮೊದಲ ಚಿತ್ರ ಎಂದೇ ಅಂದುಕೊಳ್ಳುತ್ತಾನೆ ಅಲ್ಫಾಂಸೋ ಕ್ವಾರೋನ್.


ಇದನ್ನೂ ಓದಿ: ’’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...