Homeಮುಖಪುಟಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು...

ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು…

- Advertisement -
- Advertisement -

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನುಸರಿಸಲಾದ ಲಾಕ್‌ಡೌನ್ ಇಡೀ ಜಗತ್ತನ್ನು ಸ್ತಬ್ದಗೊಳಿಸಿದೆ. ಇಂಥ ಸಂದರ್ಭವನ್ನು ಆರ್ಥಿಕವಾಗಿ ಸುಸ್ಥಿರವಾಗಿರುವ ಕುಟುಂಬಗಳು ಸಣ್ಣ ಅನಿಸ್ಚಿತತೆಯಲ್ಲೇ ಕಳೆಯುತ್ತಿವೆ. ಆದರೆ ಅಂದೇ ದುಡಿದು ಬದುಕುವ ಜನರ ಜೀವನ ಅತಂತ್ರವಾಗಿದೆ! ಈ ಹೊತ್ತಿನಲ್ಲಿ ಅವರಿಗೆ ನೆರವಾಗುವ ಮೂಲಕ ಧೈರ್ಯ ತುಂಬಾ ಬೇಕಾಗಿತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಉಳ್ಳವರ ಸಂವೇದನಾರಹಿತ ವರ್ತನೆ ಈ ದೇಶದ ಶತಮಾನಗಳ ತಾರತಮ್ಯವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯಿತು.

ಜನಪ್ರಿಯ ಹಾಸ್ಯ ಕಲಾವಿದ ವರುಣ್ ಗ್ರೋವರ್ ಇತ್ತೀಚೆಗೆ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡರು. ಲಾಕ್‌ಡೌನ್ ಸಂದರ್ಭದಲ್ಲಿ ತರಕಾರಿಕೊಳ್ಳುವಾಗ ತಮ್ಮ ಮುಂದೆ ನಿಂತಿದ್ದ ಸ್ಥಿತಿವಂತ ದಂಪತಿಗಳು 315 ರೂ.ಗಳಿಗೆ ತರಕಾರಿ ಕೊಂಡು, ವ್ಯಾಪಾರಿಗೆ 300 ಕೊಟ್ಟು, ‘ಅಷ್ಟೇ ಅಷ್ಟೇ’ ಎಂದು ಕೈಯಾಡಿಸಿ ಹೊರಟರಂತೆ. ತರಕಾರಿ ರೇಟು ಹೆಚ್ಚಿರದೇ ಇದ್ದರೂ, ಅವರು ಚೌಕಾಸಿ ಮಾಡಿದ ರೀತಿ ಬೇಸರ ಹುಟ್ಟಿಸಿತೆಂದು ಗ್ರೋವರ್ ಬರೆದುಕೊಂಡಿದ್ದರು. ಕಡೆಗೂ ವ್ಯಾಪಾರಿ ಪಟ್ಟು ಬಿಡದೇ ಇದ್ದುದಕ್ಕೆ ಬೈದುಕೊಂಡೆ 10 ರೂ. ಕೊಟ್ಟು ಹೋದರಂತೆ! ಅಂದರೆ ಇನ್ನೂ 5 ರೂ.ಗಳನ್ನು ಕೊಡದೆ ಹೋದರು!

ಇದೇ ಖರೀದಿಯನ್ನು ಅಮೆಜಾನ್, ಬಿಗ್‌ಬ್ಯಾಸ್ಕೆಟ್ ಮೂಲಕ ಮಾಡಿದ್ದರೆ, ಹೀಗೆ ಚೌಕಾಸಿ ಮಾಡುತ್ತಿದ್ದರೆ ಎಂಬ ಪ್ರಶ್ನೆ ಟ್ವೀಟ್ ಓದಿವರೆಲ್ಲಾ ಕೇಳಿದ್ದರು.

ಲಾಕ್‌ಡೌನ್ ಎಷ್ಟೋ ಜನರ ಬದುಕನ್ನು ಸವಾಲಿಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅಂತಹ ಸವಾಲಿಗೆ ಮುಖಮಾಡಿ ವ್ಯಾಪಾರಿ ಮಾಡುತ್ತಿರುವ ಸಾಮಾನ್ಯ ತರಕಾರಿ ವ್ಯಾಪಾರಿಗೆ ಇಂತಹ ಸಂಕಷ್ಟದ ಕಾಲದಲ್ಲಿ ಐದು ರೂ ಕೊಡದೇ ಹೋದದ್ದು, ಕೇವಲ ಹಣದ ವಿಷಯವಷ್ಟೇ ಅಲ್ಲ, ನಮ್ಮೊಳಗೇ ಸತ್ತು ಹೋಗಿರುವ ಸಂವೇದನೆ, ವಿವೇಚನೆ ಎಂಬ ಗುಣಗಳ ಕೊರತೆಯ ಸೂಚಕ. ತರಕಾರಿ ಕೊಂಡವರಿಗೆ ಹಣದ ಕೊರತೆಯೇನು ಇರಲಿಲ್ಲ. ಚೌಕಾಸಿ ಮಾಡಿ ಉಳಿಸಿದ್ದೂ ದೊಡ್ಡ ಮೊತ್ತವೂ ಅಲ್ಲ. ಆದರೆ ಮಾರುವ ಸಾಮಾನ್ಯನ ಬಗ್ಗೆ ಇದ್ದ ಉಪೇಕ್ಷೆಯ, ಸಂವೇದನೆಗಳಿಲ್ಲದ ಮನಸ್ಥಿತಿ.

ವರುಣ್‌ಗೆ ಸಿಕ್ಕ ಸ್ಥಿತಿವಂತ ದಂಪತಿಯಂತೇ, ಸಾರ್ವಜನಿಕ ಜೀವನದಲ್ಲಿರುವ, ತಮ್ಮ ಪ್ರತಿಭೆಗಾಗಿ ಮೆಚ್ಚುಗೆಗೆ ಪಾತ್ರರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜನರ ಅಸೂಕ್ಷ್ಮ ವರ್ತನೆಯನ್ನೂ ಈ ಲಾಕ್‌ಡೌನ್ ಅನಾವರಣ ಮಾಡಿತು.

ಇವರೆಲ್ಲರೂ ದಿನವೂ ತಮ್ಮನ್ನು ಮೆಚ್ಚುವ ಜನರ ನಡುವೆ ಪ್ರತಿ ದಿನ ಒಡನಾಡುವವರು. ಯಾವುದೋ ಪಾರ್ಟಿ, ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಲ್ಲಿನ ಕ್ಷಣಗಳನ್ನು ವಿಡಿಯೋ, ಫೋಟೋ ರೂಪದಲ್ಲಿ ಹಂಚಿಕೊಳ್ಳುವುದು, ತಮ್ಮ ವೈಭವದ ಉಡುಗೆ ತೊಡುಗೆಗಳ ಬಗ್ಗೆ ಮಾತನಾಡುವುದು, ಚೆಂದದ, ವೈಭವದ ಬದುಕನ್ನೇ ಪ್ರದರ್ಶಿಸುತ್ತಾ ಇರುವುದು ಪ್ರತಿ ನಿತ್ಯದ ವಿಧಿ.

ಇವರ ಪಾಲಿಗೆ ಈ ಲಾಕ್‌ಡೌನ್ ಒಂದು ರೀತಿಯ ಬಂಧನವಾಗಿತ್ತು. ಆದರೆ ಸೋಷಿಯಲ್ ಮೀಡಿಯಾ ಇಂಥವರ ಪಾಲಿಗೆ ಅದೃಷ್ಟದ ಕಿಟಕಿಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ತಮ್ಮ ಖಾಸಗಿಯಾದ ಬದುಕಿನ, ತಾವು ಹಿಂದೆಂದೂ ಹಂಚಿಕೊಳ್ಳದ ಕ್ಷಣಗಳನ್ನು ಅಭಿಮಾನಿಗಳ ಮುಂದೆ ಅನಾವರಣ ಮಾಡಲಾರಂಭಿಸಿದರು. ಯಾವ ಕ್ಷಣಗಳು!? ಪಾತ್ರೆ ತೊಳೆಯುವುದು, ಕಸ ಹೊಡೆಯುವುದು, ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವರ್ಕ್ಔಟ್ ಮಾಡುವುದು ಇಂಥದ್ದೇ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕರೀನಾ ಕಪೂರ್ ಅಡುಗೆ ಮಾಡಿ ತಿಂದಿದ್ದು, ಮಲೈಕಾ ಅರೋರಾ ಬೇಸನ್ ಉಂಡೆ ಮಾಡಿದ್ದು, ವಿಕ್ಕಿ ಕೌಶಲ್ ಫ್ಯಾನ್ ಕ್ಲೀನ್ ಮಾಡಿದ್ದು, ಇವೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡವು!

ಕೇವಲ ಸಿನಿಮಾ ತಾರೆಗಳಷ್ಟೇ ಅಲ್ಲ, ಸ್ಥಿತಿವಂತ, ಸೌಲಭ್ಯವುಳ್ಳ ಬಹಳಷ್ಟು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿರುವ ಗಣ್ಯರು ತಮ್ಮ ಐಷಾರಾಮದ, ಆತಂಕ ರಹಿತ ಬದುಕಿನ ಕ್ಷಣಗಳನ್ನು ಹಂಚಿಕೊಂಡರು. ಸಂವೇದನೆ ಇರುವ ಯಾವುದೇ ವ್ಯಕ್ತಿ ಇಂಥ ಹೊತ್ತಲ್ಲಿ ಸಂಭ್ರಮವನ್ನು ಹಂಚಿಕೊಳ್ಳುವುದಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು.

ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರ ಬದುಕು ಅಂತ್ರವಾಗಿದೆ. ತಿನ್ನುವುದಕ್ಕೆ ಅನ್ನ ಇಲ್ಲದೆ, ಇರುವುದಕ್ಕೆ ನೆಲೆಯೂ ಇಲ್ಲದೆ ಕಂಗಾಲಾಗಿರುವಾಗ ಈ ವಿಡಿಯೋಗಳನ್ನು, ಫೋಟೋಗಳನ್ನು ವೈರಲ್ ಮಾಡುತ್ತಿದ್ದರು.

ತಾರೆಗಳ ಈ ವರ್ತನೆಯನ್ನು ಕಂಡ ನಿರ್ದೇಶಕ ಕರಣ್ ಜೊಹರ್ ಟ್ವೀಟ್‌ವೊಂದನ್ನು ಹಂಚಿಕೊಳ್ಳುತ್ತಾ, ನಾನೂ ಅಸೂಕ್ಷ್ಮವಾಗಿ ನಡೆದುಕೊಂಡಿರಬಹುದು ಎಂದು ಕ್ಷಮೆಯಾಚಿಸಿದರು. ಬೆನ್ನಲ್ಲೇ ನಿರ್ದೇಶಕಿ ಫಹಾ ಖಾನ್ ಕೂಡ ಖಾರವಾಗಿ ನಟ-ನಟಿಯರಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಸಾರ್ವಜನಿಕ ಆರೋಗ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ವರ್ಕ್ಔಟ್‌ಗಳ ವಿಡಿಯೋಗಳನ್ನುಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ. ನೀವೆಲ್ಲರೂ ಸೌಲಭ್ಯವುಳ್ಳವರು, ನಿಮಗೆ ಈ ಜಾಗತಿಕ ಸೋಂಕಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದು ನಾನು ಬಲ್ಲೆ. ಆದರೆ ಈ ಹೊತ್ತಿನಲ್ಲಿ ಬಹಳಷ್ಟು ಜನರಿಗೆ ಸಂಕಷ್ಟಕಾಲವಾಗಿದೆ. ಹಾಗಾಗಿ ದಯವಿಟ್ಟು ವಿಡಿಯೋಗಳನ್ನು ಹಂಚಿಕೊಳ್ಳುವುದು ನಿಲ್ಲಿಸಿ. ಇಲ್ಲವಾದರೆ ನಾನು ನಿಮ್ಮನ್ನು ಅನ್‌ಫಾಲೋ ಮಾಡಿದರೆ ಬೇಸರ ಮಾಡಿಕೊಳ್ಳಬೇಡಿ’ ಎಂದು ವಿಡಿಯೋ ಹಂಚಿಕೊಂಡಿದ್ದರು.

ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್‌ಡೌನ್ ಅಗತ್ಯವಾಗಿತ್ತು. ಆದರೆ ಸೌಲಭ್ಯವುಳ್ಳವರಿಗೆ ಇದು ಆತಂಕದ ವಿಷಯವಾಗಿರಲಿಲ್ಲ. ಇದನ್ನು ಒಂದು ರಜೆಯಂತೆ ಸಂಭ್ರಮಿಸುವುದಕ್ಕೆ ಅವಕಾಶವಾಗಿ ಒದಗಿಬಂತು. ಮನೆಯಲ್ಲಿ ರುಚಿ ರುಚಿಯಾಗಿ ಮಾಡಿಕೊಂಡು ತಿನ್ನುವುದು, ಕುಟುಂಬದೊಂದಿಗೆ ಆಡುವುದು ತರಹೇವಾರಿಯಾಗಿ ಕಾಲ ಕಳೆಯುವುದಕ್ಕೆ ಅವಕಾಶವೂ ಆಯಿತು. ವೈಯಕ್ತಿಕವಾದ ಈ ಬದುಕನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಅಸೂಕ್ಷ್ಮತೆಯೇ ಅನೇಕರಲ್ಲಿ ಆಕ್ರೋಶಕ್ಕೂ ಕಾರಣವಾಯಿತು. ಬೀದಿಯಲ್ಲಿ ಮನೆಯೂ ಇಲ್ಲದೆ, ತಿನ್ನುವುದಕ್ಕೆ ಅನ್ನವೂ ಇಲ್ಲದೆ ಅನಿಶ್ಚಿತತೆಯಲ್ಲಿರುವ ಲಕ್ಷಾಂತರ ಜನರ ಇರುವಾಗ, ಸಿರಿತನದ ಅಮಲಿನಲ್ಲಿರುವ ಜನ ಮೃಷ್ಟಾನ್ನದ ಕತೆಗಳನ್ನು ಹಂಚಿಕೊಳ್ಳುವುದು ಯಾವ ರೀತಿಯ ಮನುಷ್ಯತ್ವವಾಗಬಹುದು?

ಎಲ್ಟನ್ ಜಾನ್‌ನಂತಹ ಅನೇಕ ಕಲಾವಿದರು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಕಾನ್ಸರ್ಟ್ಗಳನ್ನು ನಡೆಸಿ, ಹಣ ಸಂಗ್ರಹಿಸಿ ಅಗತ್ಯವಿರುವವರಿಗೆ ನೆರವಾದ ಉದಾಹರಣೆಗಳು ಇವರಾರಿಗೂ ಕಾಣದೇ ಹೋಗಿದ್ದು ಅಚ್ಚರಿ!

ಲಾಕ್‌ಡೌನ್‌ಅನ್ನು ಮುಕ್ತವಾಗಿ ಸ್ವಾಗತಿಸಿದ ಈ ಮಂದಿ ಇದರಿಂದ ಯಾರಿಗೆ ಅನಾನುಕೂಲವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಲ್ಲವೇನೊ! ಸೋಂಕು ನಿಯಂತ್ರಿಸುವುದಕ್ಕೆ ತಮ್ಮ ಉದ್ಯೋಗ, ಉಳಿಸಿಕೊಂಡಿದ್ದ ಹಣ, ತಮ್ಮ ಘನತೆ, ಆರೋಗ್ಯ, ಸಾಮಾಜಿಕ ಭದ್ರತೆ ಎಲ್ಲವನ್ನೂ ತ್ಯಾಗ ಮಾಡಬೇಕಾಗಿ ಬಂದದ್ದು ಬಡ ಜನರಿಗೆ. ಬದುಕು ಅಸಹನೀಯವಾಗಿದ್ದ ಕಾಲದಲ್ಲಿ ಪೊಲೀಸರಿಂದ ಒದೆ ತಿಂದಿದ್ದು, ಇದೇ ದನಿ ಎತ್ತಲಾಗದ ಜನ. ಇವರ ನೆರವಿಗೆ ನಿಲ್ಲಲಾಗದಿದ್ದರೂ, ಇವರ ಕಷ್ಟಕ್ಕೆ ನೆರವಾಗದಿದ್ದರೂ, ಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸದೇ ಹೋಗಿದ್ದು, ಈ ಕಾಲದ ದುರಂತ!


ಇದನ್ನೂ ಓದಿ: ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....