HomeUncategorizedವಿಶೇಷ ಲೇಖನ: ಒಳಮೀಸಲಾತಿ-ಸರ್ಕಾರಕ್ಕೆ ನುಂಗಲಾರದ ತುತ್ತಾದ ಪರಿಶಿಷ್ಟರು.

ವಿಶೇಷ ಲೇಖನ: ಒಳಮೀಸಲಾತಿ-ಸರ್ಕಾರಕ್ಕೆ ನುಂಗಲಾರದ ತುತ್ತಾದ ಪರಿಶಿಷ್ಟರು.

- Advertisement -
- Advertisement -

ಕರ್ನಾಟಕ ಸರ್ಕಾರವು ಆಗಸ್ಟ್‌ 19ರಂದು ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡು ಆದೇಶ ಹೊರಡಿಸಿತ್ತು. ಆದರೆ ಜಸ್ಟೀಸ್‌ ನಾಗಮನೋಹನ್‌ ದಾಸ್‌ ಏಕಸದಸ್ಯ ಆಯೋಗ ನೀಡಿದ್ದ ವರದಿಯನ್ನು ಭಾಗಶಃ ಒಪ್ಪಿ ಸಚಿವ ಸಂಪುಟ ತನ್ನ ವಿವೇಚನೆಯನ್ನು ಬಳಸಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ  (ಮಾದಿಗ ಸಂಬಂಧಿತ ಜಾತಿಗಳು), ಪ್ರವರ್ಗ-ಬಿ (ಹೊಲೆಯ ಸಂಬಂಧಿತ ಜಾತಿಗಳು) ಹಾಗೂ ಪ್ರವರ್ಗ-ಸಿ (ಸ್ಪೃಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಹಾಗೂ 49+10 ಅಲೆಮಾರಿ ಮತ್ತು ಅತಿ ಹಿಂದುಳಿದ ಜಾತಿಗಳು) ಎಂದು ವರ್ಗೀಕರಿಸಿ ʼಪ್ರವರ್ಗ-ಎʼ ಗೆ ಶೇ. 6, ʼಪ್ರವರ್ಗ-ಬಿʼಗೆ ಶೇ.6 ಮತ್ತು ʼಪ್ರವರ್ಗ-ಸಿʼಗೆ ಶೇ.5 ಒಳಮೀಸಲಾತಿಯನ್ನು ಜಾರಿ ಮಾಡಿ ಆದೇಶ ಹೊರಡಿಸಿತ್ತು. ಕಳೆದ 35 ವರ್ಷಗಳ ಒಳಮೀಸಲಾತಿ ಹೋರಾಟವು ಕೇವಲ ಯಾವುದೇ ಒಂದು ಜಾತಿಗೆ ಒಳಮೀಸಲಾತಿಯನ್ನು ಒತ್ತಾಯಿಸುವ ಹೋರಾಟ ಮಾತ್ರವಾಗಿರದೆ ಪರಿಶಿಷ್ಟ ಜಾತಿಗಳ 101 ಜಾತಿಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟವಾಗಿತ್ತು. ಕರ್ನಾಟಕ ಸರ್ಕಾರದ ಒಳಮೀಸಲಾತಿ ವರ್ಗೀಕರಣವು 49 ಅಲೆಮಾರಿ ಸಮುದಾಯಗಳು ಹಾಗೂ 10 ಅತಿ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿಗಳಲ್ಲಿಯೇ ಬಲಿಷ್ಟರಾದ ಸ್ಪೃಶ್ಯ ಜಾತಿಗಳ ಪ್ರವರ್ಗ-ಸಿ ಗುಂಪಿಗೆ ಸೇರಿಸಿದ ತೀರ್ಮಾನವು ಸಮಾಜದಲ್ಲಿ ಸರ್ಕಾರದ ತೀರ್ಮಾನದ ವಿರುದ್ದ ಆಕ್ರೋಶ ವ್ಯಕ್ತವಾಯಿತು.

ಆಗಸ್ಟ್‌ 11 ರಿಂದ ಒಳಮೀಸಲಾತಿ ಹೋರಾಟಗಾರರು ಒಳಮೀಸಲಾತಿಯ ಜಾರಿಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವದಿ ಹೋರಾಟ ಆರಂಭಿಸಿತ್ತು. ಸರ್ಕಾರದ ತೀರ್ಮಾನವು ಅಲೆಮಾರಿ ಸಮುದಾಯಗಳಿಗೆ ಆದ ಅನ್ಯಾಯವನ್ನು ಖಂಡಿಸಿ ಅನಿರ್ಧಿಷ್ಟಾವದಿ ಪ್ರತಿಭಟನೆ ಮುಂದುವರೆದಿತ್ತು.

ಅಲೆಮಾರಿಗಳ ಸಮುದಾಯಗಳ ಹೋರಾಟಗಳು.

ಅಲೆಮಾರಿ ಸಮುದಾಯಗಳು ತಮಗೆ ಆದ ಅನ್ಯಾಯಕ್ಕೆ ನ್ಯಾಯವನ್ನು ಆಗ್ರಹಿಸಿ ಹಲವು ರೀತಿಯ ಹೋರಾಟಗಳನ್ನು ಮಾಡಿದವು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೆಪ್ಟೆಂಬರ್‌ 3 ರಂದು 10 ಸಾವಿರಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಜನರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸಿದ್ದವು. ಈ ಹೋರಾಟಕ್ಕೆ ಕರ್ನಾಟಕ ಸರ್ಕಾರದ ಯಾವುದೇ ಪ್ರತಿನಿಧಿಗಳು ಬಂದು ಅಲೆಮಾರಿ ಸಮುದಾಯಗಳ ಅಹವಾಲನ್ನು ಆಲಿಸಲು ಮುಂದಾಗಲಿಲ್ಲ. ಅಲೆಮಾರಿ ಸಮುದಾಯಗಳ ಹೋರಾಟಕ್ಕೆ ವಿರೋಧ ಪಕ್ಷದ ರಾಜಕಾರಣಿಗಳು ಬಂದು ಬೆಂಬಲ ಸೂಚಿಸಿ ಆಗ ನಡೆಯುತ್ತಿದ್ದ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ ಅಧಿವೇಶನಲ್ಲಿ ದ್ವನಿಯೆತ್ತುವುದಾಗಿ ಆಶ್ವಾಸನೆಯಿಟ್ಟಿದ್ದವು. ಆದರೆ ಅಲೆಮಾರಿ ಸಮುದಾಯಗಳಿಗೆ ವಿರೋಧ ಪಕ್ಷಗಳಿಂದಲೂ ನ್ಯಾಯ ಒದಗಿಸಲು ಸಾದ್ಯವಾಗಲಿಲ್ಲ. ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಲೆಮಾರಿ ಸಮುದಾಯಗಳು, ದೇಶದಾದ್ಯಂತ ಸಾಮಾಜಿಕ ನ್ಯಾಯದ ಕುರಿತು ಗಂಭೀರವಾಗಿ ಪ್ರಶ್ನೆಗಳನ್ನೆತ್ತುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಶೋಷಿತ ಸಮುದಾಯಗಳ ವಿರೋದಿ ನಿಲುವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌ ಬಳಿ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಗೆ ತೆರಳಿ ಬೃಹತ್‌ ಪ್ರತಿಭಟನೆ ನಡೆಸಿ ಎಐಸಿಸಿ ಕಛೇರಿಗೆ ಮುತ್ತಿಗೆ ಹಾಕಿದ್ದವು.

ಅಲೆಮಾರಿ ಸಮುದಾಯಗಳ ಸಾಮಾಜಿಕ ನ್ಯಾಯದ ಕೂಗಿಗೆ ಸ್ಪಂಧಿಸಿದ ಕಾಂಗ್ರೆಸ್‌ನ ಹೈಕಮಾಂಡ್‌ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಬಳಿ ಅಲೆಮಾರಿ ಸಮುದಾಯಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದವು.

ಹೈಕಮಾಂಡ್‌ ನಿರ್ದೇಶನದಂತೆ ಹಾಗೂ ಕರ್ನಾಟಕದಲ್ಲಿ ಪ್ರಗತಿಪರರು ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಹೋರಾಟಗಾರರು, ಚಿಂತಕರು ಹಾಗೂ ಸಾಹಿತಿಗಳ ಒತ್ತಡಕ್ಕೆ ಮಣಿದ ಸರ್ಕಾರ ಅಲೆಮಾರಿ ಸಮುದಾಯಗಳ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಒಳಮೀಸಲಾತಿ ಜಾರಿ ಮಾಡಿದರೂ ದಕ್ಕದ ಪ್ರಶಂಸೆ ಹಾಗೂ ನಿಲ್ಲದ ಹೋರಾಟಗಳು.

ಸರ್ವೋಚ್ಚ ನ್ಯಾಯಾಲವು ಒಳಮೀಸಲಾತಿಯನ್ನು ಜಾರಿಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಆದೇಶ ಹೊರಡಿಸಿ ಒಂದು ವರ್ಷ ಕಳೆದ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಕುರಿತಂತೆ ನಿಲುವನ್ನು ತೆಗೆದುಕೊಳ್ಳಲಾಗಿತ್ತು. ಈ ನಿಲುವು ತೆಗೆದುಕೊಳ್ಳಲೂ ಒಳಮೀಸಲಾತಿ ಹೋರಾಟಗಾರರ ನಿರಂತರ ಹೋರಾಟ ಹಾಗೂ ಒತ್ತಡವೇ ಕಾರಣವಾಗಿತ್ತು.

ಕಳೆದ 35 ವರ್ಷಗಳ ಒಳಮೀಸಲಾತಿ ಬೇಡಿಕೆಯನ್ನು ಪರಿಗಣಿಸಿ ಒಳಮೀಸಲಾತಿ ಜಾರಿ ಮಾಡಿದ್ದರೂ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಶಂಸೆ ಸಿಗಲಿಲ್ಲ. ಇದಕ್ಕೆ ಕರ್ನಾಟಕ ಸರ್ಕಾರವೇ ಸೃಷ್ಠಿಸಿದ ಗೊಂದಲಗಳು ಹಾಗೂ ವಿಳಂಬ ಧೋರಣೆಯೇ ಕಾರಣ.

ಎಕೆ.ಎಡಿ.ಎಎ ಸಮಸ್ಯೆಯನ್ನು ಮುಂದುವರೆಸಿದ್ದ ಸರ್ಕಾರ.

ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ ಮಾಡಲು ಇದ್ದ ಬಹುದೊಡ್ಡ ತಡೆ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂಬ ಜಾತಿಗಳ ಗುಂಪುಗಳು. ಸುಮಾರು 44 ಲಕ್ಷ ಜನರು ಈ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದರಿಂದ ಒಳಮೀಸಲಾತಿ ಜಾರಿಮಾಡಲು ಸಮಸ್ಯೆಯಾಗಿತ್ತು. ಆದರೆ ಜಸ್ಟೀಸ್‌ ನಾಗಮೋಹನ್‌ ದಾಸ್‌ ಏಕಸದಸ್ಯ ಆಯೋಗವು ಎಕೆ. ಎಡಿ. ಎಎ ಜನಸಂಖ್ಯೆಯನ್ನು 4,74,954 ಕ್ಕೆ ಇಳಿಸಿತ್ತು. ಆದರೆ ಈಗಾಗಲೇ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುವ ಪರಿಶಿಷ್ಟ ಜಾತಿಗಳ ಸುಮಾರು 44 ಲಕ್ಷ. ಇವರಿಗೆ ತಮ್ಮ ಮೂಲ ಜಾತಿ ಪ್ರಮಾಣ ಪತ್ರವನ್ನು ನೀಡಲು ಕರ್ನಾಟಕ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳ ಮೇಲೆ ಶಂಕೆ ವ್ಯಕ್ತವಾಗಿತ್ತು. ಇದೇ ಸಮಯದಲ್ಲಿ ಕೆಲವು ಸಾಮಾಜಿಕ ನ್ಯಾಯದ ವಿರೋಧಿಗಳು “ಎಕೆ, ಎಡಿ, ಎಎ ಹೆಸರಿನಲ್ಲಿ ಪ್ರಮಾಣ ಪತ್ರ ಹೊಂದಿರುವವರು ಪ್ರವರ್ಗ-ಎ ಯಲ್ಲಿ ಮೀಸಲಾತಿಯನ್ನು ನುಗ್ಗಿ ಪಡೆದುಕೊಳ್ಳಿ” ಎಂಬ ಸಂಚಿನ ಮಾತುಗಳೂ ಒಳಮೀಸಲಾತಿ ಹೋರಾಟಗಾರರಲ್ಲಿನ ಸಂಶಯವನ್ನು ಇನ್ನಷ್ಟು ಹೆಚ್ಚಿಸಿತ್ತು.

ಬಡ್ತಿ, ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಒಳಮೀಸಲಾತಿ ಅನ್ವಯಿಸಿ ಆದೇಶ ಹೊರಡಿಸಲು ವಿಳಂಬ.

ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ನಿರ್ಣಯ ಮಾಡಿದ 2 ತಿಂಗಳು ಕಳೆದರೂ ಒಳಮೀಸಲಾತಿಯನ್ನು ಬಡ್ತಿ ಮತ್ತು ಬ್ಯಾಕ್‌ ಲಾಗ್‌ ಹುದ್ದೆಗಳ ನೇಮಕಾತಿಗೂ ಅನ್ವಯಿಸಿ ಅದೇಶ ಹೊರಡಿಸಲು ಸಮಾಜ ಕಲ್ಯಾಣ ಇಲಾಖೆಯು ಮೀನಾಮೇಶ ಕ್ರಮ ಅನುಸರಿಸುತ್ತಿದೆ ಎಂದು ಒಳಮೀಸಲಾತಿ ಹೋರಾಟಗಾರರು ಸರ್ಕಾರದ ವಿರುದ್ದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಮೇಲೆ ಆಕ್ರೋಶ ಹೊರಹಾಕಿದ್ದರು.

ಸ್ಥಳೀಯ ಸಂಸ್ಥೆಗಳಿಗೂ ಒಳಮೀಸಲಾತಿ ಅನ್ವಯಿಸಿ ಆದೇಶ ಹೊರಡಿಸದ ಸರ್ಕಾರ.

ಮೀಸಲಾತಿ ಅನ್ವಯಿಸುವ ಎಲ್ಲಾ ಕ್ಷೇತ್ರಗಳಿಗೂ ಒಳಮೀಸಲಾತಿಯನ್ನು ಅನ್ವಯ ಮಾಡಬೇಕೆಂದು ಒಳಮೀಸಲಾತಿ ಹೋರಾಟಗಾರರು ನಿರಂತರವಾಗಿ ಆಗ್ರಹಿಸುತ್ತಿವೆ. ಪಕ್ಕದ ತೆಲಂಗಾಣ ರಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಒಳಮೀಸಲಾತಿಯನ್ನು ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ತೆಲಂಗಾಣದಲ್ಲಿ ಸ್ಥಳೀಯ ಸಂಸ್ಥೆಗಳಿಗೂ ಒಳಮೀಸಲಾತಿಯನ್ನು ಅನ್ವಯ ಮಾಡಿ ಆದೇಶ ಹೊರಡಿಸಿದ್ದರೂ ಕರ್ನಾಟಕದಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಒಳಮೀಸಲಾತಿ ಹೋರಾಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

 

ಪರಿಶಿಷ್ಟ ಜಾತಿಗಳಿಗೆ ಪ್ರತ್ಯೇಕ ಶಾಶ್ವತ ಆಯೋಗ ರಚನೆಗೆ ವಿಳಂಬ

ಒಳಮೀಸಲಾತಿಯನ್ನು ಅನುಷ್ಟಾನಗೊಳಿಸುವುದು, ಕಾಲಕಾಲಕ್ಕೆ ಒಳಮೀಸಲಾತಿ ಕುರಿತು ಕುಂದುಕೊರತೆಗಳನ್ನು ಸರಿಪಡಿಸಲು ಪ್ರತೀ ಬಾರಿಯೂ ಸರ್ಕಾರ ನಾಗಮೋಹನ್‌ ದಾಸ್‌ ಆಯೋಗದ ರೀತಿಯಲ್ಲಿ ಆಯೋಗ ರಚಿಸಲು ಸಾಧ್ಯವಿಲ್ಲ. ಹಾಗಾಗಿ ಶಾಶ್ವತ ಹಿಂದುಳಿತ ವರ್ಗಗಳ ಆಯೋಗದಂತೆ ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸಲಾಗುವುದು ಎಂದು ಆಗಸ್ಟ್‌ 19ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನೇನೋ ಕೈಕೊಂಡಿತ್ತು ಆದರೆ ಇಲ್ಲಿಯವರೆಗೆ ಇದರ ಕುರಿತು ಸರ್ಕಾರವು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಶಾಶ್ವತ ಆಯೋಗ ರಚಿಸುವ ಕೆಲಸ ಆರಂಭವಾಗಲೇಯಿಲ್ಲ.

 

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿಹಾರ ಚುನಾವಣೆಗೆ

ಒಳಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ನೋಡಲ್‌ ಇಲಾಖೆಯಾಗಿ ಸಮಾಜ ಕಲ್ಯಾಣ ಇಲಾಖೆಯಾಗಿರುವುದರಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪಾತ್ರ ಮಹತ್ವದ್ದಾಗಿದೆ. ಈ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮೇಜರ್‌ ಎಸ್‌. ಮಣಿವಣ್ಣನ್‌ ರನ್ನು ಹೋರಾಟಗಾರರ ಒತ್ತಡದಿಂದಾಗಿ ಬದಲಿಸಿದ್ದ ಸರ್ಕಾರ ಆ ಜಾಗಕ್ಕೆ ರಂದೀಪ್‌ ಕುಮಾರ್‌ ರನ್ನು ತಂದು ಕೂರಿಸಿತ್ತು. ಆದರೆ ಅವರನ್ನು ಬಿಹಾರ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿರುವುದು ನೋಡಿದರೆ ಒಳಮೀಸಲಾತಿ ಸಮರ್ಪಕವಾಗಿ ಅನುಷ್ಟಾನ ಮಾಡುವ ಮನಸ್ಸಿಲ್ಲ ಎಂಬುದು ಸರ್ಕಾರದ ಈ ನಡೆಯಿಂದ ತಿಳಿದುಬರುತ್ತದೆ ಎಂದು ಹೇಳಲಾಗುತ್ತಿದೆ.

 

ಸ್ಪೃಶ್ಯ ಜಾತಿಗಳ ಒತ್ತಡಕ್ಕೆ ಮಣಿದ ಸರ್ಕಾರ.

ಕರ್ನಾಟಕದ ಪರಿಶಿಷ್ಟ ಜಾತಿಗಳ 101 ಜಾತಿಗಳಲ್ಲಿ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಸಂಬಂಧಿತ ಜಾತಿಗಳು ಶೈಕ್ಷಣಿಕ ಸೇರಿದಂತೆ ಮೀಸಲಾತಿಯ ಸೌಲಭ್ಯಗಳನ್ನು ಪಡೆಯಲು ಸ್ಪೃಶ್ಯ ಜಾತಿಗಳೊಂದಿಗೆ ಪೈಪೋಟಿ ನಡೆಸಲಾರದಂತಹ ಸ್ಥಿತಿಯನ್ನು ನಿಖರವಾಗಿ ಜಸ್ಟೀಸ್‌ ನಾಗಮೋಹನ್‌ ದಾಸ್‌ ಏಕ ಸದಸ್ಯ ಆಯೋಗದ ವರದಿಯು ತೆರೆದಿಟ್ಟಿದೆ. ಇಂತಹ ಸನ್ನಿವೇಶದಲ್ಲಿ ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿರುವುದರಿಂದ ಅಲೆಮಾರಿ ಸಮುದಾಯಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವ ಸಂಪುಟದ ಈ ನಿರ್ಣಯದ ಹಿಂದೆ ಸ್ಪೃಶ್ಯ ಜಾತಿಗಳ ಪ್ರಬಲ ಒತ್ತಡವೇ ಕಾರಣ ಎಂದು ಹೇಳಲಾಗುತ್ತಿದೆ. ಕರ್ನಾಟಕ ಸರ್ಕಾರದ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಆಪ್ತರಲ್ಲಿ ಗುರುತಿಸಿಕೊಂಡಿರುವ ಸ್ಪೃಶ್ಯ ಜಾತಿಗಳ ಪ್ರಮುಖರು ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗದ ವರದಿಯಂತೆ ಅಲೆಮಾರಿ ಸಮಯದಾಯಗಳಿಗೆ ನೀಡಿದ್ದ ಶೇ. 1 ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿಗೆ ನೀಡಬೇಕೆಂದು ಒತ್ತಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಸರ್ಕಾರದ ಪ್ರಭಾವಿ ಸಚಿವರು, ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗದ ವರದಿಯಲ್ಲಿ ಶಿಫಾರಸ್ಸು ಮಾಡಿದ್ದ ಪ್ರವರ್ಗ-ಡಿ ಶೇ.4 ಮೀಸಲಾತಿಯ ಬದಲಿಗೆ  ಪ್ರವರ್ಗ-ಸಿ ಎಂದು ವರ್ಗೀಕರಿಸಿ ಈ ಗುಂಪಿಗೆ ಶೇ.5 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ನೀಡಬೇಕೆಂದು, ಇಲ್ಲವಾದಲ್ಲಿ ತಾವು ರಾಜೀನಾಮೆ ಕೊಡುವುದಾಗಿ ಒತ್ತಡ ತಂದಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಲೆಮಾರಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳಲ್ಲಿಯೇ ಬಲಿಷ್ಟರಾಗಿರುವ ಸ್ಪೃಶ್ಯ ಜಾತಿಗಳ ಗುಂಪಿಗೆ ಅಲೆಮಾರಿ ಸಮುದಾಯಗಳನ್ನು ಸೇರಿಸಿ ಮೀಸಲಾತಿಯನ್ನು ಶೇ. 5ಕ್ಕೆ ಏರಿಸಿತ್ತು. ಇದರ ನಂತರ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿ ನೀಡಿದರೆ ಏನೂ ಸಿಗುವುದಿಲ್ಲ ಬದಲಿಗೆ ಪ್ರವರ್ಗ-ಸಿ ಗುಂಪಿಗೆ ಸೇರಿಸಿರುವುದರಿಂದ ಶೇ.5 ಮೀಸಲಾತಿಯಲ್ಲಿ ಸೌಲಭ್ಯಗಳನ್ನು ಪಡೆಯಬಹುದು ಎಂದು ಅವೈಜ್ಞಾಜಿಕ ವಾದವನ್ನು ಮುಂದಿಡಲಾಗುತ್ತಿದೆ.

ಜಸ್ಟೀಸ್‌ ನಾಗಮೋಹನ್‌ ದಾಸ್‌ ವರದಿಯ ಅಂಕಿ ಅಂಶಗಳನ್ನು ನೋಡಿದರೆ ಅಸ್ಪೃಶ್ಯ ಸಮುದಾಯಗಳಾದ ಹೊಲೆಯ ಸಂಬಂಧಿತ ಜಾತಿಗಳು ಹಾಗೂ ಮಾದಿಗ ಸಂಬಂಧಿತ ಜಾತಿಗಳು ಸ್ಪೃಶ್ಯ ಜಾತಿಗಳ ಎದುರು ಪೈಪೋಟಿ ನಡೆಸಿ ಮೀಸಲಾತಿಯನ್ನು ಪಡೆಯಲು ವಿಫಲಾಗಿರುವುದು ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳು ಸ್ಪೃಶ್ಯ ಜಾತಿಗಳ ಜೊತೆಯಲ್ಲಿ ಪೈಪೋಟಿ ನಡೆಸಲು ಸಾಧ್ಯವೇ ಆಗುದಿಲ್ಲ ಎಂದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.

ಸರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿ ಅಲೆಮಾರಿ ಸಮುದಾಯಗಳು ಕರ್ನಾಟಕ ಹೈಕೋರ್ಟ್‌ ಗೆ ರಿಟ್‌ ಅರ್ಜಿಯನ್ನು ದಾಖಲಿಸಿದೆ. ವಾದ ಆಲಿಸಿದ ಕೋರ್ಟ್‌ ನೇಮಕಾತಿಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ಕೋರ್ಟಿನಲ್ಲಿ ಸಮರ್ಪಕವಾಗಿ ವಾದ ಮಂಡಿಸಲು ಸರ್ಕಾರಿ ವಕೀಲರನ್ನು ನೇಮಕ ಮಾಡಿದ್ದರಲ್ಲೂ ಅನುಮಾನಗಳು ಹಾಗೂ ಗೊಂದಲಗಳು ಮೂಡುತ್ತಿವೆ.

ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿ ಮಾಡಿದ್ದರಿಂದ ತಮ್ಮ ಸರ್ಕಾರದ ನಿರ್ಧಾರಕ್ಕೆ ಒಳಮೀಸಲಾತಿ ಹೋರಾಟಗಾರರು ಪ್ರಶಂಸೆಗಳನ್ನು ವ್ಯಕ್ತಪಡಿಸುವರೆಂದು ಭಾವಿಸಿತ್ತು ಆದರೆ ಈ ಎಲ್ಲಾ ಮೇಲಿನ ಕಾರಣಗಳಿಂದ ಪರಿಶಿಷ್ಟ ಜಾತಿಗಳ ಯಾವ ಸಮುದಾಯಗಳೂ ಸರ್ಕಾರದ ನಿರ್ಧಾರನ್ನು ಪ್ರಶಂಸಿಸಿಲ್ಲ. ಹಾಗಾಗಿ ಸರ್ಕಾರವು ತಾನೇ ಮಾಡಿಕೊಂಡು ಪ್ರಮಾದಗಳಿಂದಾಗಿ ಐತಿಹಾಸಿಕ ಒಳಮೀಸಲಾತಿಯ ಕುರಿತ ನಿರ್ಣಯಕ್ಕೆ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಸಿಗಬೇಕಾದಷ್ಟು ಪ್ರಶಂಸೆ ಸಿಗಲಿಲ್ಲ ಎನ್ನಲಾಗುತ್ತಿದೆ.

 

ಸರ್ಕಾರದ ಮುಂದಿರುವ ಆಯ್ಕೆಗಳು.

  1. ಒಳಮೀಸಲಾತಿ ಅನುಷ್ಟಾನ ಮಾಡುವ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ವಿಷಯದಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ನಿಜವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಸಮಾಜ ಕಲ್ಯಾಣ ಇಲಾಖೆಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಒಳಮೀಸಲಾತಿಯನ್ನು ಸಮಗ್ರವಾಗಿ ಅನುಷ್ಟಾನ ಮಾಡಬೇಕಿದೆ.
  2. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಪ್ರವರ್ಗ-ಎ ಶೇ.1 ಮೀಸಲಾತಿಯನ್ನು ನೀಡಿ ತಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ರುಜುವಾತು ಮಾಡಿಕೊಳ್ಳಬೇಕು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

ಚಂದ್ರು ತರಹುಣಿಸೆ
ಚಂದ್ರು ತರಹುಣಿಸೆhttps://naanugauri.com/
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್
- Advertisment -

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...

ನ್ಯಾಷನಲ್ ಹೆರಾಲ್ಡ್ ಪ್ರಕರಣ : ಮೋದಿ, ಅಮಿತ್ ಶಾ ರಾಜೀನಾಮೆಗೆ ಖರ್ಗೆ ಒತ್ತಾಯ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇನಾಲಯ (ಇಡಿ) ದಾಖಲಿಸಿದ್ದ ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ದೂರು ಸ್ವೀಕರಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿರುವುದನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಬಿಜೆಪಿ...

ಹಿಜಾಬ್ ಎಳೆದ ನಿತೀಶ್ ಕುಮಾರ್: ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ ವೈದ್ಯೆ?

ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಇತ್ತೀಚೆಗೆ ತಮ್ಮ ನೇಮಕಾತಿ ಪತ್ರವನ್ನು ಪಡೆದಿದ್ದರೂ ಬಿಹಾರ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪಾಟ್ನಾದಲ್ಲಿ ನಡೆದ ಸಕಾfರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ...

ಮಹಿಳೆಯ ಹಿಜಾಬ್ ಎಳೆದ ಆರೋಪ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಬೆಂಗಳೂರಿನ ವಕೀಲರಿಂದ ದೂರು

ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಅನ್ನು ಹಿಡಿದ ಎಳೆದ ವಿಚಾರಕ್ಕೆ ಸಂಬಂಧ ಪಟ್ಟಂತೆ ಅವರ ವಿರುದ್ಧ ಬೆಂಗಳೂರು ಮೂಲದ ವಕೀಲರೊಬ್ಬರು ಮಂಗಳವಾರ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್...