ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಶುಕ್ರವಾರ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ಅವರನ್ನು ಭೇಟಿ ಮಾಡಿದ್ದು, ಉಭಯ ದೇಶಗಳ ನಡುವೆ ನಡೆಯುತ್ತಿರುವ ಸಹಕಾರವನ್ನು ಗಾಢಗೊಳಿಸುವ ಮತ್ತು ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ, ಶ್ರೀಲಂಕಾದ ಆರ್ಥಿಕ ಪುನರ್ನಿರ್ಮಾಣಕ್ಕೆ ಭಾರತ ನಿರಂತರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.ಶ್ರೀಲಂಕಾ ನೂತನ ಅಧ್ಯಕ್ಷರನ್ನು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಧ್ಯಕ್ಷ ದಿಸ್ಸಾನಾಯಕ ಅವರು ಪ್ರಮಾಣ ವಚನ ಸ್ವೀಕರಿಸಿದ ಹದಿನೈದು ದಿನಗಳ ನಂತರ ಒಂದು ದಿನದ ಭೇಟಿಗಾಗಿ ಕೊಲಂಬೊ ತೆರಳಿದ್ದ ಜೈಶಂಕರ್ ಅವರು ಪ್ರಧಾನಿ ಹರಿಣಿ ಅಮರಸೂರ್ಯ ಮತ್ತು ಶ್ರೀಲಂಕಾದ ವಿದೇಶಾಂಗ ಮಂತ್ರಿ ವಿಜಿತಾ ಹೆರಾತ್ ಅವರನ್ನು ಭೇಟಿ ಮಾಡಿದರು.
ದಿಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಸರ್ಕಾರ ಸೆಪ್ಟೆಂಬರ್ 23 ರಂದು ಅಧಿಕಾರಕ್ಕೆ ಬಂದ ನಂತರ ಜೈಶಂಕರ್ ಶ್ರೀಲಂಕಾಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯರಾಗಿದ್ದಾರೆ.
ಇದನ್ನೂಓದಿ: ಓಲಾ ಕ್ಯಾಬ್‌ನಲ್ಲಿ ಲೈಂಗಿಕ ಕಿರುಕುಳ ಪ್ರಕರಣ : ಸಂತ್ರಸ್ತೆಗೆ ಪರಿಹಾರ ಪಾವತಿಸುವ ಆದೇಶಕ್ಕೆ ಹೈಕೋರ್ಟ್ ತಡೆ
“ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ಅವರನ್ನು ಇಂದು ಕೊಲಂಬೊದಲ್ಲಿ ಭೇಟಿ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದೇನೆ” ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಶ್ರೀಲಂಕಾ ನೂತನ ಅಧ್ಯಕ್ಷರನ್ನು
“ಭಾರತ-ಶ್ರೀಲಂಕಾ ಸಂಬಂಧಗಳಿಗೆ ಅವರ ಆತ್ಮೀಯ ಭಾವನೆಗಳು ಮತ್ತು ಮಾರ್ಗದರ್ಶನವನ್ನು ಶ್ಲಾಘಿಸಿದ್ದು, ಎರಡು ದೇಶಗಳು ಮತ್ತು ಪ್ರದೇಶದ ಜನರ ಅನುಕೂಲಕ್ಕಾಗಿ ನಡೆಯುತ್ತಿರುವ ಸಹಕಾರವನ್ನು ಗಾಢಗೊಳಿಸುವ ಮತ್ತು ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಡಿಸಾನಾಯಕೆ ಅವರು ಕೂಡಾ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಉಭಯ ದೇಶಗಳ ನಡುವಿನ ಚರ್ಚೆಗಳು ಪ್ರವಾಸೋದ್ಯಮ, ಇಂಧನ ಮತ್ತು ಹೂಡಿಕೆಯಲ್ಲಿ ಸಹಕಾರವನ್ನು ಹೆಚ್ಚಿಸುವುದರ ಮೇಲೆ ಮತ್ತು ಮೀನುಗಾರಿಕೆ, ಭದ್ರತೆ ಮತ್ತು ರಾಷ್ಟ್ರೀಯ ಏಕತೆಯ ನಿರಂತರ ಸಹಯೋಗದ ಮೇಲೆ ಕೇಂದ್ರೀಕೃತವಾಗಿವೆ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


