ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ-2 ಸಿನಿಮಾದ ಮೊದಲ ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ ನಂತರ, ಕೆಳ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಹಾಗಾಗಿ ಅವರು ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಕಾಲ್ತುಳಿತ ಪ್ರಕರಣ
ಇದಕ್ಕೂ ಮುನ್ನ ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್ ಪ್ರತಿಕ್ರಿಯಿಸಿ, ತಮ್ಮ ಪತ್ನಿಯ ಸಾವಿಗೆ ನಟನ ತಪ್ಪಿಲ್ಲ, ಅಗತ್ಯವಿದ್ದರೆ ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಬಂಧನದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ಬಿಡುಗಡೆಯಾದ ಮೇಲೆ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ನೀಡುವಂತೆ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ಜಾಮೀನಿಗಾಗಿ ಹೊಸ ಅರ್ಜಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಕೇಳಿದೆ.ಕಾಲ್ತುಳಿತ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಟನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) 3(5) ಜೊತೆಗಿನ ಸೆಕ್ಷನ್ 105(B) ಮತ್ತು 118(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಈ ಸೆಕ್ಷನ್‌ಗಳು ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ನಟ ಅಲ್ಲು ಅರ್ಜುನ್ ಅವರು ಘಟನೆಗೆ ಪ್ರಾಥಮಿಕವಾಗಿ ಹೊಣೆಗಾರರಾಗಲು ಸಾಧ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಜುವ್ವಾಡಿ ಶ್ರೀದೇವಿ ಹೇಳಿದ್ದಾರೆ. ಅಗತ್ಯ ಅನುಮತಿಯನ್ನು ಪಡೆದುಕೊಂಡ ನಂತರ ಅವರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂದು ತಿಳಿಸಿದ್ದಾರೆ.
ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಒತ್ತಿಹೇಳಿದ ನ್ಯಾಯಮೂರ್ತಿ, ನಟನಾಗಿರುವ ಕಾರಣಕ್ಕೆ ಅರ್ಜುನ್ ಅವರಿಂದ ಈ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸಿದರು. “ಈ ಭೂಮಿಯ ಪ್ರಜೆಯಾಗಿ, ಅವರಿಗೂ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ” ಎಂದು ನ್ಯಾಯಮೂರ್ತಿ ಶ್ರೀದೇವಿ ಹೇಳಿದ್ದು, ಈ ಪರಿಸ್ಥಿತಿಯಲ್ಲಿ ನ್ಯಾಯಾಂಗ ಬಂಧನವು ಅನಗತ್ಯವಾಗಿದೆ ಎಂದು ಹೇಳಿದ್ದಾರೆ. ಸಂತ್ರಸ್ತರ ಕುಟುಂಬದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯವು, ಉದ್ದೇಶ ಅಥವಾ ಸ್ಪಷ್ಟ ಪುರಾವೆಗಳಿಲ್ಲದೆ ಗಂಭೀರ ಆರೋಪಗಳನ್ನು ವಿಧಿಸುವುದು ಅನ್ಯಾಯವಾಗಿದೆ ಎಂದು ಒತ್ತಿಹೇಳಿದೆ.
ಈ ನಡುವೆ, ಅಲ್ಲು ಅರ್ಜುನ್ ಬಂಧನದ ವಿರುದ್ಧ ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಟೀಕಿಸಿದ್ದಾರೆ. ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಇದು ಆಡಳಿತಗಾರರ ಅಭದ್ರತೆಯ ಪರಾಕಾಷ್ಠೆ. ಅಲ್ಲು ಅರ್ಜುನ್ ಅವರನ್ನು ಸಾಮಾನ್ಯ ಕ್ರಿಮಿನಲ್ ಎಂದು ಪರಿಗಣಿಸಬೇಕು. ವಿಶೇಷವಾಗಿ, ಅವರು ನೇರವಾಗಿ ಜವಾಬ್ದಾರರಲ್ಲದ ಕಾರಣಕ್ಕಾಗಿ ಅವರನ್ನು ಆರೋಪಿ ಎಂದು ಕರೆಯುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಕೆಟಿಆರ್ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನಟನ ಬಂಧನದಲ್ಲಿ ತಮ್ಮ ಅಥವಾ ತಮ್ಮ ಸರ್ಕಾರದ ಯಾವುದೇ ಪಾತ್ರವಿಲ್ಲ. ಅವರ ಬಂಧನದಲ್ಲಿ ಯಾವುದೇ ರಾಜಕೀಯ ಕಾರಣವನ್ನು ಹುಡುಕಬೇಕಾಗಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಟ ಅಲ್ಲು ಅರ್ಜುನ್ ಅನ್ನು ಹೈದರಾಬಾದ್ ಥಿಯೇಟರ್‌ನ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ಅಲ್ಲಿ ಅವರ ‘ಪುಷ್ಪಾ 2: ದಿ ರೂಲ್’ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಘಟನೆಯಲ್ಲಿ ಕಳೆದ ವಾರ ಒಬ್ಬ ಮಹಿಳೆ ಸಾವನ್ನಪ್ಪಿ, ಆಕೆಯ ಪುತ್ರನಿಗೆ ಗಂಭೀರವಾಗಿ ಗಾಯಗಳಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಅಲ್ಲು ಅರ್ಜುನ್ ಅವರನ್ನು ಜುಬಿಲಿ ಹಿಲ್ಸ್‌ನಲ್ಲಿರುವ ಅವರ ಮನೆಯಿಂದ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ: ಅಜಿತ್ ಪವಾರ್‌ಗೆ ಹಣಕಾಸು ಖಾತೆ ಸಿಗಬೇಕು, ಇಲ್ಲವೆಂದರೆ ಮಹಾಯುತಿ ಸರ್ಕಾರಕ್ಕೆ ಅರ್ಥವಿಲ್ಲ: ಎನ್‌ಸಿಪಿ
ಅಜಿತ್ ಪವಾರ್‌ಗೆ ಹಣಕಾಸು ಖಾತೆ ಸಿಗಬೇಕು, ಇಲ್ಲವೆಂದರೆ ಮಹಾಯುತಿ ಸರ್ಕಾರಕ್ಕೆ ಅರ್ಥವಿಲ್ಲ: ಎನ್‌ಸಿಪಿ


