ಹಾಸ್ಟೆಲ್ ಫೀಸ್ ಮತ್ತು ದಾಖಲಾತಿ ಶುಲ್ಕ ಹೆಚ್ಚಳದ ವಿರುದ್ಧ ದೆಹಲಿಯ ಜವಾಹರ್‌ಲಾಲ್ ನೆಹರೂ ವಿವಿಯ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ರೀತಿಯ ಹೋರಾಟಗಳು ಹಿಂದೆ ನಡೆದಾಗ #IStandWithJNU ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿತ್ತು. ಆದರೆ ಈ ಬಾರಿ ಟ್ವಿಟ್ಟರ್‌ನಲ್ಲಿ #TaxPayersWithJNU ಎಂಬ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡ್ ಆಗುವ ಮೂಲಕ ಗಮನ ಸೆಳೆದಿದೆ.
ವಿದ್ಯಾರ್ಥಿಗಳು ನಿನ್ನೆ ಹಮ್ಮಿಕೊಂಡಿದ್ದ ಪಾರ್ಲಿಮೆಂಟ್ ಮಾರ್ಚ್ ಅನ್ನು ಕ್ರೂರವಾಗಿ ಪೊಲೀಸರು ದಮನ ಮಾಡಿದ್ದರು. ಅಲ್ಲದೇ ವಿದ್ಯಾಥಿ೯ಗಳ ಮೇಲೆ ಎಫ್‌ಐಆರ್ ಕೂಡ ದಾಖಲಿಸಿದ್ದರು. ಈ ರೀತಿಯ ದಬ್ಬಾಳಿಕೆ ಹೆಚ್ಚಾದಂತೆ ವಿದ್ಯಾರ್ಥಿಗಳ ಪರವಾಗಿನ ಬೆಂಬಲದ ಅಲೆಯೂ ಸಹ ಹೆಚ್ಚಾಗಿದೆ. ಸಾವಿರಾರು ಜನ ವಿದ್ಯಾರ್ಥಿಗಳ ಧೀರೋದಾತ್ತ ಹೋರಾಟಕ್ಕೆ ಐಕ್ಯಮತ್ಯ ಸೂಚಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ನಮ್ಮಿಂದ 94,000 ಕೋಟಿ ರೂಗಳನ್ನು ತೆರಿಗೆಯಾಗಿ ಸಂಗ್ರಹಿಸಿದೆ, ಆದರೆ ಇದು ಸಿಎಜಿ ವರದಿ ಪ್ರಕಾರ ಬಳಕೆಯಾಗದೆ ಉಳಿದಿದೆ. ಕನ್ಹಯ್ಯ ಕುಮಾರ್ ಅವರಂತಹ ಜನರು ಅಲ್ಲಿ ಅಧ್ಯಯನ ಮಾಡುವುದನ್ನು ತಡೆಯಲು ಜೆಎನ್‌ಯು ಶುಲ್ಕದಲ್ಲಿ ಹಲವಾರು ಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಶಿಕ್ಷಣ ಮತ್ತು ಚಿಂತನೆಯ ಮೇಲಿನ ಯುದ್ಧ ಎಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
The govt has collected 94,000 Cr as tax from us for higher education which remained unutilised according to the CAG. Yet they want a several fold hike in JNU fees to prevent people like Kanhaiya Kumar to study there. It is a war on education&thought itself https://t.co/GlGu4D38JX
— Prashant Bhushan (@pbhushan1) November 19, 2019
ಇದು ಕೇವಲ ಶುಲ್ಕ ಹೆಚ್ಚಳವಲ್ಲ. ಇದು ಶಿಕ್ಷಣದ ವ್ಯಾಪಾರೀಕರಣವಾಗಿದೆ. 2013ರಿಂದ ಜೆಎನ್‌ಯುನಲ್ಲಿ ಶೇ. 50% ಕ್ಕಿಂತ ಹೆಚ್ಚಿನ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಈ ರೀತಿ ಸಾವಿರ ಪಟ್ಟು ಶುಲ್ಕ ಹೆಚ್ಚಿಸಿದರೆ ಆ ಹೆಣ್ಣು ಮಕ್ಕಳ ಶಿಕ್ಷಣದ ಗತಿಯೇನು? ಭೇಟಿ ಪಡಾವೋ ಎಂದು ಕೇವಲ ಜಾಹಿರಾತು ಕೊಟ್ಟರೆ ಸಾಲದು. ಜೆಎನ್‌ಯು ಮೇಲಿನ ದಾಳಿ ಸಾಮಾನ್ಯ ಯುವ ಭಾರತೀಯರ ಉನ್ನತ ಶಿಕ್ಷಣದ ಮೇಲಿನ ಆಕ್ರಮಣವಾಗಿದೆ ಎಂದು ಹೋರಾಟಗಾರ್ತಿ ಕವಿತಾ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಜೆಎನ್‌ಯುಗೆ ಹಣ ನೀಡಬೇಕೆಂದರೆ ನಮ್ಮ ತೆರಿಗೆ ಹಣ ಪೋಲು ಮಾಡುತ್ತಿದ್ದೀರಿ ಎಂದು ಬಿಜೆಪಿ ಬೆಂಬಲಿಗರು ಹರಿಹಾಯುತ್ತಿದ್ದರು. ಆದರೀಗ ದೇಶಾದ್ಯಂತ ಪ್ರತಿಮೆಗಳನ್ನು ಕಟ್ಟಲು, ಕುಂಭಮೇಳಗಳನ್ನು ನಡೆಸಲು ಹಣವಿದೆ, ಬಡಮಕ್ಕಳು ಕಲಿಯಲು ಹಣವಿಲ್ಲವೇ? ನಮ್ಮ ತೆರಿಗೆ ಹಣವನ್ನು ಏನು ಮಾಡಿದ್ದೀರಿ? ನಾವೆಲ್ಲಾ ಜೆಎನ್‌ಯು ವಿದ್ಯಾರ್ಥಿಗಳ ಪರವಿದ್ದೀವಿ ಎಂದು ನೆಟ್ಟಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಟ್ಯಾಧಿಪತಿ ಎಂಪಿಗಳಿಗೆ ಪಾರ್ಲಿಮೆಂಟ್‌ನಲ್ಲಿ ಸಬ್ಸಿಡಿ ದರಕ್ಕೆ ಊಟ ವಸತಿ ಒದಗಿಸುವ ಸರ್ಕಾರ ಮಕ್ಕಳ ಹಾಸ್ಟೆಲ್ ಫೀಸು ಹೆಚ್ಚಿಸುವುದೇಕೆ ಎಂದು ಕಿಡಿಕಾರಿದ್ದಾರೆ.
Here is menu card of Parliament canteen.
These millionaire politicians are still eating subsidized food in the Parliament and this govt and RW trolls have problem with free education.
Who is free loader now?? #TaxPayersWithJNU pic.twitter.com/OBhPwQwhww
— Md Asif Khan آصِف (@imMAK02) November 19, 2019
I am a taxpayer and i fully support students in this struggle. They are the future of india ?#TaxPayersWithJNU pic.twitter.com/X2xYOwOyIe
— ?? (@meena_K7707) November 19, 2019
ನಾನೊಬ್ಬ ತೆರಿಗೆದಾರ. ನಾನು ಜೆಎನ್‌ಯೂ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ. ಏಕೆಂದರೆ ಭವಿಷ್ಯದ ಭಾರತ ಅವರೆ ಆಗಿದ್ದಾರೆ ಎಂದು ಮೀನಾ ಎಂಬುವವರು ಟ್ವೀಟ್ ಮಾಡಿದ್ದಾರೆ.
ಪುಟ್ಟ ಶಾಲಾಮಕ್ಕಳು ಜೆಎನ್‌ಯು ವಿದ್ಯಾರ್ಥಿಗಳ ಹೋರಾಟದ ಪರವಾಗಿ ವಿ ವಾಂಟ್ ಜಸ್ಟೀಸ್ ಎಂದು ಶಾಲಾ ಬಸ್‌ನೊಳಗಿಂದಲೇ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ
This is how school kids respond to JNU Protestors yesterday. ❤❤❤#TaxPayersWithJNU #StandWithJNU pic.twitter.com/WQK44JhM2T
— Dragon Hunter (@paraspatel44555) November 19, 2019
ಕೇವಲ ಟ್ವಿಟ್ಟರ್‌ನಲ್ಲಿ ಮಾತ್ರವಲ್ಲದೇ ಬೀದಿಗಳಲ್ಲಿಯು ಜನ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಜೆ.ಎನ್.ಯು ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ, ಅವರ ಹೋರಾಟವನ್ನು ಬೆಂಬಲಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ SFI ನಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ SFI ಮೈಸೂರು ವಿವಿ ಘಟಕದ ಕಾರ್ಯದರ್ಶಿ ವಿಷ್ಣು ವಿಜಯನ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂದೇಶ, ಸಂಶೋಧಕರ ಸಂಘದ ಮಹೇಶ ಸೋಸಲೆ, ಗೋಪಾಲ್ ಮತ್ತು AIDSO ನ ಮಂಜು ಹಂಪಾಪುರ ಭಾಗವಹಿಸಿದ್ದರು.
ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯವನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಖಂಡಿಸಿದೆ. “ಶಿಕ್ಷಣವನ್ನು ಖಾಸಗೀಕರಣ ಮತ್ತು ವ್ಯಾಪಾರೀಕರಣಗೊಳಿಸುತ್ತಿರುವ ಸರ್ಕಾರ ವ್ಯಾಪಾರ ನೀತಿಯ ವಿರುದ್ಧ ಮತ್ತು ಗುಣಮಟ್ಟದ ಉನ್ನತ ಶಿಕ್ಷಣ ಉಚಿತವಾಗಿ ಸಿಗಬೇಕೆಂದು ಹೋರಾಟ ನಡೆಸುತ್ತಿರುತ್ತಿವ ಜೆಎನ್‌ಯು ವಿದ್ಯಾರ್ಥಿಗಳ ಜೊತೆ ಕೆವಿಎಸ್ ನಿಲ್ಲುತ್ತದೆ” ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಜೆ.ಎನ್.ಯು. ವಿದ್ಯಾರ್ಥಿಗಳ ಹೋರಾಟವನ್ನು ಈ ದೇಶದ ಬಡವರೆಲ್ಲರೂ ಬೆಂಬಲಿಸಬೇಕು.