ಅಂಗನವಾಡಿಗಳಲ್ಲೆ ಎಲ್.ಕೆ.ಜಿ ಮತ್ತು ಯುಕೆಜಿ ಆರಂಭಿಸುವಂತೆ ಒತ್ತಾಯಿಸಿ ತುಮಕೂರಿನಿಂದ ಬೆಂಗಳೂರಿಗೆ ಕೈಗೊಂಡಿದ್ದ ಪಾದಯಾತ್ರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ತುಮಕೂರು ನಗರಕ್ಕೆ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಪೊಲೀಸರು ಪಾದಯಾತ್ರೆಗೆ ಅವಕಾಶ ಮಾಡಿಕೊಡದೇ ಇರುವುದರಿಂದ ತುಮಕೂರಿನ ಗಾಜಿನ ಮನೆಯಲ್ಲಿ ಧರಣಿ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಮಹಿಳಾ ಹೋರಾಟಗಾರ್ತಿಯರು ತಮ್ಮ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ತದನಂತರ ಪ್ರಮುಖ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಲೀಡರ್ಗಳ ಮನೆಗೆ ಹೋಗಿ ತಪಾಸಣೆ ನಡೆಸಿದ್ದಾರೆ. ಕೋಲಾರದ ಮಾಲೂರಿನ ಅಂಗನವಾಡಿ ಮುಖಂಡರನ್ನು ರಾತ್ರಿಯೆಲ್ಲ ಮನೆಯಲ್ಲೇ ಗೃಹಬಂಧನದಲ್ಲಿಟ್ಟು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಡುಗಡೆ ಮಾಡಿದ್ದಾರೆ ಎಂದು ಅಂಗನವಾಡಿ ನೌಕರರ ಸಂಘದ ಮುಖಂಡರು ಹೇಳಿದರು.

ಪತ್ರಿಕಾಗೋಷ್ಟಿ ಮುಕ್ತಾಯವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಎಎಸ್ಪಿ ಮತ್ತು ತುಮಕೂರು ನಗರ ಡಿವೈಎಸ್ಪಿ ಅಂಗನವಾಡಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಿಂಧೂ, ರಾಜ್ಯಾಧ್ಯಕ್ಷ ಎಸ್.ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ, ಸಿಐಟಿಯು ನಾಯಕರಾದ ಮೀನಾಕ್ಷಿ ಸುಂದರಂ, ಕೆ.ಎನ್. ಉಮೇಶ್, ಕೆ. ಮಹಾಂತೇಸ್, ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮೊದಲಾದವರೊಂದಿಗೆ ಅರ್ಧ ಗಂಟೆ ಮಾತುಕತೆ ನಡೆಸಿದರು.
ಯಾವುದೇ ಕಾರಣಕ್ಕೂ ಪಾದಯಾತ್ರೆಗೆ ಅವಕಾಶ ಇಲ್ಲವೆಂಬುದನ್ನು ಪೊಲೀಸ್ ಅಧಿಕಾರಿಗಳು ಹೆಳಿದರು. ಇದಕ್ಕೆ ನೀವು ಲಿಖಿತವಾಗಿ ನಮಗೆ ಮಾಹಿತಿ ನೀಡಿದರೆ ನಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ದ. ಆದರೆ ಸುಮ್ಮನೆ ಮನವಿ ಕೊಟ್ಟು ಬರಲು ಹೋಗುವುದಾದರೆ ಬೇಡ ಎಂದು ಪಟ್ಟು ಹಿಡಿದರು. ಬಳಿಕ ಅಲ್ಲಿಂದ ಗಾಜಿನಮನೆಗೆ ಸಹಸ್ರಾರು ಕಾರ್ಯಕರ್ತೆಯರು ಮೆರವಣಿಗೆ ಬಂದರು. ಅಲ್ಲಿಗೆ ಆಗಮಿಸಿದ ಎಸ್.ಪಿ. ಡಾ. ಕೋನಂ ವಂಶಿಕೃಷ್ಣ ಸಿಐಟಿಯು ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡುತ್ತೇವೆ. ನಿಮಗೆ ಮುಖ್ಯಮಂತ್ರಿ ಜೊತೆ ಮಾತುಕತೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಅಲ್ಲಿಂದ ನಿರ್ಗಮಿಸಿದರು.
ಇದೀಗ ಅಂಗನವಾಡಿ ನೌಕರರ ಸಂಘದ ಪ್ರಮುಖರಾದ ಸಿಂಧೂ, ಎಸ್.ವರಲಕ್ಷ್ಮಿ, ಸುನಂದ, ಗುಲ್ಜಾರ್ ಬಾನು, ಶಾಂತ ಘಂಟಿ, ನಾಗರತ್ನ ಅವರನ್ನು ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತುಕತೆಗೆ ಕರೆದೊಯ್ಯಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ವೈಜ್ಞಾನಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರವನ್ನು ಕಾಂಗ್ರೆಸ್ ಬದಲು ತಾಯಂದಿರೇ ಕಿತ್ತೊಗೆಯಲಿದ್ದಾರೆ ಎಂದು ಗ್ರಾಮ ಸೇವಾ ಸಂಘದ ಅಧ್ಯಕ್ಷ ಹೆಗ್ಗೋಡು ಪ್ರಸನ್ನರವರು ಎಚ್ಚರಿಕೆ ನೀಡಿದರು.



Houdu anganavagi shaleyalli LKG And UKG aarambavagabeku, yakendre:
6 varsha kinta kadime eru makkalige antene anganavadi shale yannu terayalagide adre aa makkalallli LKG UKG Anta bere school Ali hoguttare adre 6 varsha kinta kadime eru makkaligagi teradiru e anganavadi yalli makkala sankhye kadime agatide anganavadi shale ge koduva facelities West agatide adarinda anganavadi shale alli LKG and UKG prarambhavagabeku.