ಕೇಂದ್ರ ಸರ್ಕಾರವು ವಕ್ಫ್ ಮಸೂದೆಗೆ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿರುವ ಮತ್ತು ಸಂಸದೀಯ ಸಮಿತಿಯು ತಿದ್ದುಪಡಿಗಳನ್ನು ಪರಿಶೀಲಿಸುತ್ತಿರುವ ಸಮಯದಲ್ಲೆ, ಕರ್ನಾಟಕ ರಾಜ್ಯ ಔಕಾಫ್ ಮಂಡಳಿಯು ಅದರ ಆಸ್ತಿಗಳ ಸಮೀಕ್ಷೆ ಮತ್ತು ಗೆಜೆಟ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ತನ್ನ ಸ್ವಾಧೀನದಲ್ಲಿರುವ 1,07,651 ಎಕರೆ ಭೂಮಿಯಲ್ಲಿ, 90,000 ಎಕರೆ ಭೂಮಿಯ ವ್ಯಾಜ್ಯ ವಿವಿಧ ನ್ಯಾಯಾಲಯಗಳಲ್ಲಿ ಇವೆ ಎಂದು ಮಂಡಳಿಯ ಅಂಕಿಅಂಶಗಳ ಹೇಳುತ್ತವೆ. ವಕ್ಫ್ ಬೋರ್ಡ್‌ನಿಂದ ಸಮೀಕ್ಷೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕರ್ನಾಟಕ ಸ್ಟೇಟ್ ಬೋರ್ಡ್ ಆಫ್ ಔಕಾಫ್‌ನ ಅಧ್ಯಕ್ಷ ಕೆ. ಅನ್ವರ್ ಬಾಷಾ ಅವರು ಮಾತನಾಡಿ, “ಸದ್ಯ, ಮಂಡಳಿಯು ತನ್ನ ಸ್ವಾಧೀನದಲ್ಲಿ 1,07,651 ಎಕರೆ ಭೂಮಿಯನ್ನು ಹೊಂದಿದೆ. ಆದರೆ ಈ ಆಸ್ತಿಗಳ ಪಾಲಕರು ಅವುಗಳನ್ನು ಬಳಸುತ್ತಿರುವ 40,840 ಸಂಸ್ಥೆಗಳು. ಭೂಮಿ ಅವರಿಗೆ ಸೇರಿದ್ದು” ಎಂದು ಹೇಳಿದ್ದಾರೆ.
ಈ ಹಿಂದೆ ಮಂಡಳಿಯು 1.10 ಲಕ್ಷ ಎಕರೆಗೂ ಹೆಚ್ಚು ಭೂಮಿ ಹೊಂದಿತ್ತು. ಆದರೆ ಇನಾಮ್ ನಿರ್ಮೂಲನೆ ಕಾಯ್ದೆ, ಭೂಸುಧಾರಣಾ ಕಾಯ್ದೆ ಸೇರಿದಂತೆ ವಿವಿಧ ಭೂಸುಧಾರಣೆಗಳಿಂದಾಗಿ ಹಲವು ಎಕರೆಗಳು ನಷ್ಟವಾಗಿವೆ. “ಜನರು 1828 ರಿಂದಲೂ ವಕ್ಫ್ ಮಂಡಳಿಗೆ ಭೂಮಿಯನ್ನು ದಾನ ಮಾಡಲು ಪ್ರಾರಂಭಿಸಿದ್ದರು” ಎಂದು ಅವರು ಹೇಳಿದ್ದಾರೆ.ವಕ್ಫ್ ಬೋರ್ಡ್‌ನಿಂದ ಸಮೀಕ್ಷೆ
“ಆಲಮಟ್ಟಿ ಅಣೆಕಟ್ಟು ಮತ್ತು ಇತರ ಯೋಜನೆಗಳಂತಹ ವಿವಿಧ ಯೋಜನೆಗಳಿಗಾಗಿ ಮಂಡಳಿಯು 75,000 ಎಕರೆಗಳನ್ನು ಸರ್ಕಾರಕ್ಕೆ ನೀಡಿತ್ತು. ಅದರಲ್ಲಿ ನಮಗೆ ಸೂಕ್ತ ಪರಿಹಾರ ನೀಡಲಾಗಿದೆ. ಈಗ ನಾವು ವ್ಯಾಜ್ಯದಲ್ಲಿರುವ 90,000 ಎಕರೆಗೆ ಬದಲಾಗಿ ಪರಿಹಾರ ಅಥವಾ ಭೂಮಿಯನ್ನು ಕೇಳುತ್ತಿದ್ದೇವೆ” ಎಂದು ಹೆಸರು ಹೇಳಲು ಇಚ್ಛಿಸದ ಮಂಡಳಿಯ ಮತ್ತೊಬ್ಬ ಸದಸ್ಯರು ಹೇಳಿದ್ದಾರೆ. ಹಸ್ತಾಂತರಿಸಿದ ಭೂಮಿಯನ್ನು ದರ್ಗಾ, ಮಸೀದಿ, ಸ್ಮಶಾನ ಮತ್ತು ಇತರ ಸೌಲಭ್ಯಗಳನ್ನು ಸ್ಥಾಪಿಸಲು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಕಾನೂನು ರೀತಿಯ ಹೋರಾಟದ ಜತೆಗೆ ತನಿಖೆ ಎದುರಿಸಲು ನಾನು ಸಿದ್ಧನಾಗಿದ್ದೇನೆ: ಸಿಎಂ ಸಿದ್ದರಾಮಯ್ಯ
ವಕ್ಫ್ ಭೂಮಿಗೆ ಜಿಯೋ ಟ್ಯಾಗ್: ಸರ್ಕಾರಿ ಅಧಿಕಾರಿ
ಎಲ್ಲಾ ವಕ್ಫ್ ಆಸ್ತಿಗಳ ಮೊದಲ ಸಮೀಕ್ಷೆಯನ್ನು 1972-73 ರಲ್ಲಿ ಮಾಡಲಾಯಿತು, ಎರಡನೇ ಸರ್ವೆ 2020 ರಲ್ಲಿ ಪೂರ್ಣಗೊಂಡಿತ್ತು. ವಕ್ಫ್ ಮಂಡಳಿ ಹೊಂದಿರುವ ಯಾವುದೇ ಭೂಮಿ ಸರ್ಕಾರ ಮಂಡಳಿಗೆ ನೀಡಿದ್ದಲ್ಲ. ಈ ಎಲ್ಲಾ ಭೂಮಿ ಜನರು ವಿವಿಧ ಉದ್ದೇಶಗಳಿಗಾಗಿ ದಾನ ಮಂಡಳಿಗೆ ಮಾಡಿದ್ದಾರೆ. ಈಗ ಹೆಚ್ಚಿನ ದೇಣಿಗೆಯೊಂದಿಗೆ, ಎಲ್ಲಾ ಆಸ್ತಿಗಳ ಮರು ಸಮೀಕ್ಷೆಯನ್ನು ಮಾಡಲಾಗುತ್ತದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಮಂಡಳಿಯ ಸಿಇಒ ಜಿಲಾನಿ ಮೊಕಾಶಿ ಹೇಳಿದ್ದಾರೆ.
ಆದರೆ, ಮಂಡಳಿಯು ಪಟ್ಟಿ ಮಾಡಿರುವ ಭೂಮಿಯ ವಿವರಗಳು ಕಂದಾಯ ಇಲಾಖೆಗಿಂತ ಭಿನ್ನವಾಗಿವೆ. ಕಂದಾಯ ಇಲಾಖೆಯ ಭೂಮಿ ಆ್ಯಪ್‌ನ ಮಾಹಿತಿಯಂತೆ ರಾಜ್ಯದಲ್ಲಿ 3,454.6 ಎಕರೆ ಭೂಮಿಯನ್ನು ವಕ್ಫ್ ಭೂಮಿ ಎಂದು ಗುರುತಿಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಲು ಜಮೀನುಗಳ ವಿವರವಾದ ಸಮೀಕ್ಷೆ ಮತ್ತು ಜಿಯೋ ಟ್ಯಾಗ್ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ವಕ್ಫ್ ಆಸ್ತಿ ದೇವರ ಆಸ್ತಿ ಮತ್ತು ಅದನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಸ್ಮಶಾನ ಬಿಟ್ಟರೆ ಸರ್ಕಾರ ಮಂಡಳಿಗೆ ಬೇರಾವುದೇ ಭೂಮಿ ನೀಡಿಲ್ಲ” ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಇತ್ತಿಚೆಗೆ ಹೇಳಿದ್ದರು. ಅನೇಕ ದಾನಿಗಳು ಕಾಲೇಜುಗಳು ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಮಾಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಮೀಸಲಾತಿ ಅವರಪ್ಪನ ಮನೆಯ ಸ್ವತ್ತಲ್ಲ: ಮಾವಳ್ಳಿ ಶಂಕರ್


