‘900 ಕುಕಿ ಉಗ್ರಗಾಮಿಗಳು ಸೆಪ್ಟೆಂಬರ್ 28 ರ ಸುಮಾರಿಗೆ ಇಂಫಾಲ್ ಕಣಿವೆಯ ಜಿಲ್ಲೆಗಳ ಹೊರಗಿನ ಗ್ರಾಮಗಳ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದಾರೆ’ ಎಂದು ಹೇಳಿದ್ದ ಮಣಿಪುರ ಸರ್ಕಾರ ತನ್ನ ಹೇಳಿಕೆಯನ್ನು ಕೆಲವು ದಿನಗಳ ನಂತರ ವಾಪಾಸು ಪಡೆದಿದೆ. ಈ ಹೇಳಿಕೆ ಆಧಾರ ರಹಿತವಾಗಿದ್ದು, ಸಶಸ್ತ್ರ ಗುಂಪುಗಳ ಈ ರೀತಿಯ ಯಾವುದೇ ದುಷ್ಕೃತ್ಯಗಳ ಸಾಧ್ಯತೆಯು ಕಡಿಮೆಯಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.ಕುಕಿಗಳ ವಿರುದ್ಧದ ಹೇಳಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಜಂಟಿ ಹೇಳಿಕೆ ನೀಡಿರುವ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಮತ್ತು ಡಿಜಿಪಿ ರಾಜೀವ್ ಸಿಂಗ್, “ಸೆಪ್ಟೆಂಬರ್ 28 ರಂದು ಮೈತೆಯಿ ಸಮುದಾಯಗಳ ಮೇಲೆ ದಾಳಿ ನಡೆಸಲು ಮ್ಯಾನ್ಮಾರ್‌ನಿಂದ 900 ತರಬೇತಿ ಪಡೆದ ಕುಕಿ ಉಗ್ರಗಾಮಿಗಳು ಒಳನುಸುಳಿದ್ದಾರೆ ಎಂಬ ಈ ಮಾಹಿತಿಯನ್ನು ವಿವಿಧ ಮೂಲಗಳಿಂದ ಪರಿಶೀಲಿಸಲಾಗಿದೆ. ಆದರೆ ಅಂತಹ ಯಾವುದೇ ಮಾಹಿತಿಯನ್ನು ನಂಬಲು ಪ್ರಸ್ತುತ ಆಧಾರವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ: ಉದ್ಯೋಗಕ್ಕಾಗಿ ನಗದು ಪ್ರಕರಣ: ಜಾಮೀನು ಪಡೆದ ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿ
“ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಭದ್ರತಾ ಪಡೆಗಳು ಹೆಚ್ಚಿನ ಜಾಗರೂಕತೆ ವಹಿಸಿವೆ. ಎಲ್ಲಾ ಸಮುದಾಯಗಳು ಅವರ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಲಾಗಿದೆ. ಯಾವುದೇ ವದಂತಿಗಳು ಅಥವಾ ಪರಿಶೀಲಿಸದ ಸುದ್ದಿಗಳನ್ನು ನಂಬಬೇಡಿ” ಎಂದು ಸಾರ್ವಜನಿಕರಿಗೆ ಅವರು ಸಲಹೆ ನೀಡಿದ್ದಾರೆ.
ಉಗ್ರಗಾಮಿಗಳು ಹೊರಗಿನ ಗ್ರಾಮಗಳಲ್ಲಿ ಹಿಂಸಾಚಾರ ನಡೆಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ ಎಂದು ಸೆಪ್ಟಂಬರ್ 20 ರಂದು ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ತಿಳಿಸಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಈ ಉಗ್ರರ ಚಲನವಲನದ ವರದಿಗಳು ಹರಿದಾಡುತ್ತಿವೆ ಎಂದು ಅವರು ಹೇಳಿದ್ದರು.
ಮುಖ್ಯಮಂತ್ರಿಯ ಕಾರ್ಯದರ್ಶಿ ಎನ್ ಜೆಫ್ರಿ ಮಾತನಾಡಿ, “ಶಸ್ತ್ರಸಜ್ಜಿತ ಗುಂಪುಗಳ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಯ ಆಧಾರದ ಮೇಲೆ, ಮುಖ್ಯಮಂತ್ರಿ ಕಛೇರಿಯು ಗುಪ್ತಚರ ಮಾಹಿತಿಗಳನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡಿದೆ. ಇದರಿಂದ ಮತ್ತಷ್ಟು ವಿವರವಾದ ಮಾಹಿತಿಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಶಸ್ತ್ರ ಗುಂಪುಗಳಿಂದ ಇಂತಹ ದುಷ್ಕೃತ್ಯಗಳು ಸಾಧ್ಯತೆಯಿಲ್ಲ ಎಂದು ಈಗ ಖಚಿತವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂಓದಿ: ಸಮಾಜ ಒಟ್ಟಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕು: ಸಚಿವ ಕೃಷ್ಣ ಬೈರೇಗೌಡ
900 ಕುಕಿ ಉಗ್ರಗಾಮಿಗಳು ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ಸರ್ಕಾರದ ಹೇಳಿಕೆಗೆ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದ ಮಣಿಪುರದ ಕಾಂಗ್ರೆಸ್ ಶಾಸಕ ಟಿ ಲೋಕೇಶ್ವರ್ ಅವರು, ಇದು ಇಂಫಾಲ್ ಕಣಿವೆಯ ಹೊರವಲಯದ ಹಳ್ಳಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಹೇಳಿಕೆಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಕುಕಿಗಳ ವಿರುದ್ಧದ ಹೇಳಿಕೆ
“ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಅವರ ಹೇಳಿಕೆ ಹೊರಗಿನ ಪ್ರದೇಶಗಳಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ. ಅವರು ತಮ್ಮ ಸಮರ್ಥನೆಗಳಿಗೆ ಆಧಾರವನ್ನು ಸ್ಪಷ್ಟಪಡಿಸಬೇಕು ಮತ್ತು ಉಗ್ರಗಾಮಿಗಳ ಪ್ರವೇಶವನ್ನು ಎದುರಿಸಲು ಯಾವ ಕ್ರಮಗಳು ಜಾರಿಯಲ್ಲಿವೆ ಎಂಬುದನ್ನು ವಿವರಿಸಬೇಕು. ಗ್ರಾಮಸ್ಥರು ಭಯದಿಂದ ಬದುಕುವಂತೆ ಆಗಬಾರದು” ಎಂದು ಕಾಂಗ್ರೆಸ್ ಶಾಸಕ ಹೇಳಿದ್ದರು.
ಇಂಫಾಲ್ ಕಣಿವೆಯ ಹೊರಗಿನ ಗ್ರಾಮಗಳನ್ನು ಗುರಿಯಾಗಿಸಲು ಉಗ್ರಗಾಮಿಗಳು ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ವರದಿಗಳ ನಂತರ ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆಯಲ್ಲಿವೆ ಎಂದು ಸೆಪ್ಟೆಂಬರ್ 20 ರ ಶುಕ್ರವಾರದಂದು ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಸೂಚಿಸಿದ್ದರು. ಸೆಪ್ಟೆಂಬರ್ 28 ರ ಸುಮಾರಿಗೆ ಸಂಭಾವ್ಯ ದಾಳಿಗಳಿ ನಡೆಯಲಿದೆ ಎಂದು ಹೇಳಿದ್ದರು.
ವಿಡಿಯೊ ನೋಡಿ: LIVE : ಕ್ರಾಂತಿಕಾರಿ ಪ್ರಜಾಕವಿ, ಗಾಯಕ ಗದ್ದರ್ ಪ್ರಥಮ ಪರಿನಿಬ್ಬಾಣ


