ಆಂಟಿಗುವಾದಿಂದ ನಾಪತ್ತೆಯಾಗಿ, ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಿಎನ್‌ಬಿ ಸಾಲದ ವಂಚಕ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದಲೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಲ್ಲಿನ ಕೋರ್ಟ್ ತಡೆ ನೀಡಿದೆ.
“ಈ ಆದೇಶವನ್ನು ಪ್ರತಿವಾದಿಗಳಿಗೆ ಇಮೇಲ್, ಫ್ಯಾಕ್ಸ್ ಮೂಲಕ ವೈಯಕ್ತಿಕವಾಗಿ ತಕ್ಷಣವೇ ನೀಡಬೇಕು ಮತ್ತು ಡೌಗ್ಲಾಸ್ ಚಾರ್ಲ್ಸ್ ವಿಮಾನ ನಿಲ್ದಾಣದಲ್ಲಿನ ವಲಸೆ ಮುಖ್ಯಸ್ಥರಿಗೂ ಇಮೇಲ್ ಮತ್ತು ಫ್ಯಾಕ್ಸ್ ಮೂಲಕ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 28 ರಂದು ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ನಡೆಸಲಿದೆ. ಡೊಮಿನಿಕಾದ ಚೋಕ್ಸಿಯ ವಕೀಲ ವೇಯ್ನ್ ಮಾರ್ಷ್ ಈ ಹಿಂದೆ ತಮ್ಮ ಕಕ್ಷಿದಾರ ಚೋಕ್ಸಿಗೆ ಕಾನೂನು ಸಲಹೆ ಪಡೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಮೇ 27 ರಂದು ಮಾತ್ರ ಚೋಕ್ಸಿಯೊಂದಿಗೆ ಮಾತನಾಡಲು ಅವಕಾಶ ನೀಡಲಾಯಿತು ಎಂದು ಆರೋಪಿಸಿದ್ದರು.
ಇದನ್ನೂ ಓದಿ: ವಿಶ್ವದಲ್ಲೆ ಅತಿಹೆಚ್ಚು ಲಸಿಕೆ ತಯಾರಿಸುವ ಭಾರತ ಯಾಕೆ ಕೊರತೆ ಎದುರಿಸುತ್ತಿದೆ: ಪ್ರಿಯಾಂಕ ಗಾಂಧಿ
“ಅವರಿಗೆ ತೀವ್ರವಾಗಿ ಹಲ್ಲೆ ನಡೆಸಲಾಗಿದ್ದು, ಕಣ್ಣುಗಳು ಊದಿಕೊಂಡಿದ್ದವು. ದೇಹದ ಮೇಲೆ ಹಲವಾರು ಸುಟ್ಟ ಗುರುತುಗಳಿರುವುದನ್ನು ನಾನು ಗಮನಿಸಿದ್ದೇನೆ. ಆಂಟಿಗುವಾದ ಜಾಲಿ ಹಾರ್ಬರ್‌ನಲ್ಲಿ ಅವನನ್ನು ಅಪಹರಿಸಿ ಡೊಮಿನಿಕಾಗೆ ಕರೆತರಲಾಗಿತ್ತು ಎಂದು ಅವರು ನನಗೆ ಹೇಳಿದ್ದಾರೆ. ಅವರು ಭಾರತೀಯ ಮೂಲದ ಆಂಟಿಗುವಾನ್ ಪೊಲೀಸ್ ಎಂದು ನಂಬಿದ್ದ ವ್ಯಕ್ತಿಗಳು ಅವರನ್ನು ಕರೆತಂದಿದ್ದರು” ಎಂದು ಮಾರ್ಷ್ ಎಎನ್‌ಐಗೆ ತಿಳಿಸಿದ್ದಾರೆ.
ಇದು “ನ್ಯಾಯದ ಅವಹೇಳನ” ಎಂದು ಹೇಳಿರುವ ವಕೀಲ ಮಾರ್ಷ್, ಇಡೀ ರಾಷ್ಟ್ರವು ಧ್ವನಿ ಎತ್ತಬೇಕಾದ ಅಗತ್ಯವಿದೆ. ಒಬ್ಬ ವಕೀಲನಾಗಿ ಚೋಕ್ಸಿಯನ್ನು ಶೋಷಣೆ ಮಾಡುವುದನ್ನು ತಡೆಯಲು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಕೋಟ್ಯಾಂತರ ರೂ.ಗಳ ಹಣ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಮೆಹುಲ್ ಚೋಕ್ಸಿ 2018 ರಲ್ಲಿ ಭಾರತದಿಂದ ಆಂಟಿಗುವಾಕ್ಕೆ ಪರಾರಿಯಾಗಿದ್ದರು. ಅವರು 2017 ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದ್ದರು. ಆಂಟಿಗುವಾದಿಂದ ಅವರು ಇತ್ತಿಚೆಗೆ ನಾಪತ್ತೆಯಾಗಿದ್ದರು. ಅದಕ್ಕಾಗಿ ಇಂಟರ್‌ಫೂಲ್ ಅವರ ಪತ್ತೆಗೆ ಯಲ್ಲೋ ನೋಟಿಸ್ ಜಾರಿ ಮಾಡಿತ್ತು. ಇದಾಗಿ ಅವರನ್ನು ಡೊಮಿನಿಕಾದಲ್ಲಿ ಸೆರೆಹಿಡಿಯಲಾಗಿದೆ.
ಇದನ್ನೂ ಓದಿ: ’ಯಾರಿಂದಲೂ ನನ್ನ ಅರೆಸ್ಟ್ ಮಾಡಲು ಸಾಧ್ಯವಿಲ್ಲ’- ಬಾಬಾ ರಾಮ್‌ದೇವ್ ಹೇಳಿಕೆ


