Homeಕರೋನಾ ತಲ್ಲಣವಿಶ್ವದಲ್ಲೆ ಅತಿಹೆಚ್ಚು ಲಸಿಕೆ ತಯಾರಿಸುವ ಭಾರತ ಯಾಕೆ ಕೊರತೆ ಎದುರಿಸುತ್ತಿದೆ: ಪ್ರಿಯಾಂಕ ಗಾಂಧಿ

ವಿಶ್ವದಲ್ಲೆ ಅತಿಹೆಚ್ಚು ಲಸಿಕೆ ತಯಾರಿಸುವ ಭಾರತ ಯಾಕೆ ಕೊರತೆ ಎದುರಿಸುತ್ತಿದೆ: ಪ್ರಿಯಾಂಕ ಗಾಂಧಿ

- Advertisement -
- Advertisement -

“ವಿಶ್ವದಲ್ಲೇ ಅತಿಹೆಚ್ಚು ಲಸಿಕೆಗಳನ್ನು ತಯಾರಿಸುವ ದೇಶಗಳಲ್ಲಿ ಒಂದಾದ ಭಾರತ ಇಂದು ಯಾಕೆ ಕೊರತೆಯನ್ನು ಎದುರಿಸುತ್ತಿದೆ?” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಪ್ರಶ್ನಿಸಿದ್ದು, ಕೊರೊನಾ ಲಸಿಕೆ ಪ್ರಕ್ರಿಯೆಯ ನಿರ್ವಹಣೆಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತ ಸರ್ಕಾರವು ಭಾರತದ ಜನರಿಗೆ ಉತ್ತರಿಸಬೇಕಿದೆ” ಎಂಬ ಶೀರ್ಷಿಕೆಯ ವೀಡಿಯೊವನ್ನು ದಲ್ಲಿ, ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಷ್ಟೇ ಲಸಿಕೆಗಾಗಿ ಮೊದಲ ಆದೇಶ ನೀಡಿದೆ ಎಂದು ಹೇಳಿದ್ದಾರೆ.

“ವಿಶ್ವದ ಅತಿ ಹೆಚ್ಚು ಲಸಿಕೆಗಳ ತಯಾರಕರಲ್ಲಿ ಒಂದಾದ ಭಾರತ ಇಂದು ಏಕೆ ಕೊರತೆಯನ್ನು ಎದುರಿಸುತ್ತಿದೆ? 2020 ರ ಬೇಸಿಗೆಯ ಸಮಯದಲ್ಲಿ ಇತರ ದೇಶಗಳು ಲಸಿಕೆಗಾಗಿ ತಮ್ಮ ಆದೇಶಗಳನ್ನು ನೀಡಲು ಪ್ರಾರಂಭಿಸಿದಾಗ, ಭಾರತ ಸರ್ಕಾರವು ತನಗೆ ಲಸಿಕೆ ಬೇಕೆಂದು ಮೊದಲ ಆದೇಶವನ್ನು 2021 ರ ಜನವರಿಯಲ್ಲಿ ನೀಡಿದ್ದು ಯಾಕೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಜನರಿಗಿಂತ ಸಾಮಾಜಿಕ ಜಾಲತಾಣಗಳನ್ನು ಆದ್ಯತೆಯಾಗಿ ಪರಿಗಣಿಸಿದೆ: ರಾಹುಲ್ ಗಾಂಧಿ

“ನಮ್ಮ ಸರ್ಕಾರವು 2021 ರ ಜನವರಿ ಮತ್ತು ಮಾರ್ಚ್ ನಡುವೆ ಆರು ಕೋಟಿ ಲಸಿಕೆಗಳನ್ನು ರಫ್ತು ಮಾಡುವ ಅದೇ ಸಮಯದಲ್ಲಿ, ಭಾರತೀಯರಿಗೆ ಕೇವಲ 3.5 ಕೋಟಿ ಲಸಿಕೆಯನ್ನು ಮಾತ್ರ ನೀಡಿತು.ಇದಕ್ಕೆ ಭಾರತ ಸರ್ಕಾರವು ದೇಶದ ಜನರಿಗೆ ಉತ್ತರಿಸಬೇಕಿದೆ. ನಾವು ಅವರಿಗೆ ಪ್ರಶ್ನೆಗಳನ್ನು ಕೇಳಬೇಕಾಗಿದ್ದು, ಅದಕ್ಕೆ ಅವರು ಉತ್ತರಿಸಲೇ ಬೇಕು” ಎಂದು ಹೇಳಿದ್ದಾರೆ.

ಪ್ರಿಯಾಂಕ ಗಾಂಧಿ ಈ ಹಿಂದೆ ಕೂಡಾ ದೇಶದಲ್ಲಿ ಕೊರೊನಾ ಲಸಿಕೆಗಳ ಕೊರತೆಗೆ ಕೇಂದ್ರ ಸರ್ಕಾರವನ್ನು ಟೀಕಿದ್ದರು.

ಇದನ್ನೂ ಓದಿ: ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು

ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಲಸಿಕೆ ಕೊರತೆಯಾಗಿರುವುದಕ್ಕೆ ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಪಂಜಾಬ್, ಕೇರಳ, ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಕೊರೊನಾ ಲಸಿಕೆಗಳಿಗಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯುವ ಹಾದಿಯಲ್ಲಿದೆ.

ಲಸಿಕೆ ತಯಾರಕ ಸಂಸ್ಥೆಯಾದ ಮೊಡೆರ್ನಾ ನೇರವಾಗಿ ಲಸಿಕೆಗಳನ್ನು ಪಂಜಾಬ್ ಸರ್ಕಾರಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕಳೆದ ವಾರ ಮಾಹಿತಿ ನೀಡಿದ್ದರು. ದೆಹಲಿಗೆ ಕೂಡಾ ಫಿಜರ್ ಮತ್ತು ಮಾಡರ್ನಾ ಸಂಸ್ಥೆಗಳು ಅದೇ ಪ್ರತಿಕ್ರಿಯೆ ನೀಡಿದೆ.

ದೆಹಲಿಗೆ ಲಸಿಕೆಗಳನ್ನು ಪೂರೈಸಲು ಸ್ಪುಟ್ನಿಕ್ ವಿ ತಯಾರಕರು ಒಪ್ಪಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಮಾಹಿತಿ ನೀಡಿದ್ದಾರೆ.

ಕೇಂದ್ರ ಮಟ್ಟದಲ್ಲಿ ಟೆಂಡರ್ ಕರೆಯುವಂತೆ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...