ಷೇರು-ವ್ಯಾಪಾರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಒಟ್ಟು 400 ಮಿಲಿಯನ್ (40 ಕೋಟಿ) ದಂಡವನ್ನು ಪಾವತಿಸಲು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಆದೇಶಿಸಿದೆ. 13 ವರ್ಷಗಳ ಹಿಂದೆ ಅಂಬಾನಿ ವ್ಯಾಪಾರಿ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಸಂಸ್ಥೆಯು ಹೇಳಿದೆ.
“ಹಣ ಮತ್ತು ಭವಿಷ್ಯದ ಮಾರುಕಟ್ಟೆಗಳೆರಡರಲ್ಲೂ ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್‌ನಲ್ಲಿನ ಷೇರುಗಳ ಮಾರಾಟದಿಂದ ಅನಗತ್ಯ ಲಾಭಗಳಿಸಲು ರಿಲಯನ್ಸ್ ಮತ್ತು ಅದರ ಏಜೆಂಟರು ಕಾರ್ಯ ನಿರ್ವಹಿಸಿದ್ದಾರೆ” ಎಂದು Securities and Exchange Board of India (SEBI) ಜನವರಿ 1 ರ ತನ್ನ ಆದೇಶದಲ್ಲಿ ಹೇಳಿದೆ.
ರಿಲಯನ್ಸ್ ಇಂಡಸ್ಟ್ರೀಸ್ 400 ಮಿಲಿಯನ್ ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಈ ಅಕ್ರಮ ವಹಿವಾಟಿಗೆ ಅದರ ಅಧ್ಯಕ್ಷ ಅಂಬಾನಿಯವರೇ ಹೊಣೆಗಾರರಾಗಿದ್ದಾರೆ ಎಂದು SEBI ಹೇಳಿದೆ.
ಇದನ್ನೂ ಓದಿ: ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!
ರಿಲಯನ್ಸ್ ವಕ್ತಾರರು ಈ ಆದೇಶದ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ರಿಲಯನ್ಸ್ ಸಂಸ್ಥೆಯು, ಪಟ್ಟಿಮಾಡದ 12 ವ್ಯಾಪಾರ ಸಂಸ್ಥೆಗಳ ಜೊತೆಗೆ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳಲ್ಲಿ ಕಾನೂನುಬಾಹಿರ ವಹಿವಾಟು ನಡೆಸಿದೆ ಎಂದು ಹಲವು ವರ್ಷಗಳ ತನಿಖೆಯ ನಂತರ 2017 ರಲ್ಲಿ SEBI ಕಂಡುಕೊಂಡಿದೆ.
ರಿಲಯನ್ಸ್ ಪೆಟ್ರೋಲಿಯಂ 2009 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ವಿಲೀನಗೊಂಡಿತು. ಪೆಟ್ರೋಲಿಯಂ ಘಟಕವು ಅಂಬಾನಿ ಒಡೆತನದ ಸಂಸ್ಥೆಯ ಪಟ್ಟಿಮಾಡಿದ ಅಂಗಸಂಸ್ಥೆಯಾಗಿದೆ.
ಇದನ್ನೂ ಓದಿ: ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ’ ಸಾಧನೆ ಎಷ್ಟು?


