6 ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿರುವ “ಹೊಸ ಧರ್ಮಗಳ ಉದಯದ” ಬಗ್ಗೆ ಪಾಠ ಮಾಡಕೂಡದು ಮತ್ತು ಈ ಪಠ್ಯ ಭಾಗವನ್ನು ಕೈ ಬಿಡಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಎಸ್‌ಎಫ್‌ಯ ರಾಜ್ಯ ಸಮಿತಿ ಖಂಡಿಸಿದ್ದು, ಸಂವಿಧಾನ ವಿರೋಧಿ ಸುತ್ತೋಲೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ: ‘ಹೊಸ ಧರ್ಮಗಳ ಉದಯ’ ಪಾಠ ಮಾಡಬೇಡಿ: ಶಾಲೆಗಳಿಗೆ ಆದೇಶ ನೀಡಿದ ಶಿಕ್ಷಣ ಇಲಾಖೆ!
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, “ಸರ್ಕಾರ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮಾಡುವ ಮೂಲಕ ಮನುವಾದಿ ಹಿಂದು ರಾಷ್ಟ್ರ ನಿರ್ಮಾಣದತ್ತ ಮೊದಲ ಹೆಜ್ಜೆ ಹಾಕುತ್ತಿದೆ. ಇದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು” ಎಂದು ಹೇಳಿದ್ದಾರೆ.
“ಸರ್ವ ಧರ್ಮಗಳ ಸಮನ್ವಯತೆ, ಜಾತ್ಯತೀತತೆಯ ಮೌಲ್ಯಗಳನ್ನು ನಾಶ ಮಾಡುವ ಆರೆಸ್ಸೆಸ್‌ನ ಹಿಂದುತ್ವ ಅಜೆಂಡಾದ ಜಾರಿಗಾಗಿ ಅವೈದಿಕ ಧರ್ಮಗಳಾದ ಬೌದ್ದ ಮತ್ತು ಜೈನ ಧರ್ಮದ ಉದಯದ ಬಗ್ಗೆ ಶಾಲಾ ಪಠ್ಯಪುಸ್ತಕಗಳಲ್ಲಿ ಬೋಧಿಸಬಾರದು, ಮೌಲ್ಯ ಮಾಪನ ಮಾಡಬಾರದು, ಕಲಿಯಬಾರದು ಎಂದು ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯ ಬಿಜೆಪಿ ಸರ್ಕಾರವು ಹಿಂದುತ್ವದ ಅಜೆಂಡಾವನ್ನು ಶಿಕ್ಷಣದ ಕ್ಷೇತ್ರದಲ್ಲಿ ಜಾರಿಗೆ ತರಲು ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ನ್ಯಾಯಾಲಯ


