ಕಳೆದ ತಿಂಗಳು ಸೆಪ್ಟೆಂಬರ್ 12 ರಂದು, ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಭಾಶ್ರಿ ರವಿಯವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಕ್ರಮವಾಗಿ ನಿರ್ಮಿಸಲಾದ ಹೋರ್ಡಿಂಗ್ ತನ್ನ ಮೇಲೆ ಬಿದ್ದ ಪರಿಣಾಮ ಸಾವನಪ್ಪಿದ್ದರು. ಅವರ ದುರಂತ ಸಾವಿಗೆ ತಮಿಳುನಾಡಿನ ಹಿರಿಯ ರಾಜಕಾರಣಿ ಪೊನ್ನಯ್ಯನ್ “ಗಾಳಿಯನ್ನು ಶಿಕ್ಷಿಸಿ” ಎಂದು ವಿಲಕ್ಷಣ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ AIADMK ಮುಖಂಡ ಪೊನ್ನಯ್ಯನ್, ಹೋರ್ಡಿಂಗ್ ನಿರ್ಮಿಸಿದ ವ್ಯಕ್ತಿಯನ್ನು ಮಹಿಳೆಯ ಸಾವಿಗೆ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಮತ್ತು ಕೇಸು ದಾಖಲಿಬೇಕಾದರೆ ಗಾಳಿಯ ಮೇಲೆ ದಾಖಲಿಸಿ ಶಿಕ್ಷಿಸಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಚೆನ್ನೈನಿಂದ 320 ಕಿಲೋಮೀಟರ್ ದೂರದಲ್ಲಿರುವ ಕೃಷ್ಣಗಿರಿ ಜಿಲ್ಲೆಯಲ್ಲಿ ಮೂರು ವಾರಗಳ ನಂತರ ಬಂಧನಕ್ಕೊಳಗಾದ ಆಡಳಿತಾರೂಡ AIADMK ಸದಸ್ಯ ಜಯಗೋಪಾಲ್ ಅವರು ಈ ಹೋರ್ಡಿಂಗ್ ಅನ್ನು ನಿರ್ಮಿಸಿದ್ದರು.
“ಬ್ಯಾನರ್ ಇಟ್ಟುಕೊಂಡ ವ್ಯಕ್ತಿ ಅವಳನ್ನು ಸಾವಿಗೆ ತಳ್ಳಲಿಲ್ಲ. ಯಾವುದೇ ಪ್ರಕರಣವನ್ನು ದಾಖಲಿಸಬೇಕಾದರೆ, ಗಾಳಿಯನ್ನು ಹೊಣೆಗಾರರನ್ನಾಗಿ ಮಾಡಿ ”ಎಂದು ಅವರು ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ 12 ರಂದು, ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಭಾಶ್ರಿ ರವಿ (23) ಹೆಲ್ಮೆಟ್ ಧರಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಮುಖ ನಗರದ ರಸ್ತೆಯೊಂದರಲ್ಲಿ ಹೋಗುತ್ತಿದ್ದರು. ಆಗ ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸಾಮಿ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾರವರ ಫೋಟೊ ಇದ್ದ ಭಾರೀ ಗಾತ್ರದ ಕಟೌಟ್ ಆಕೆಯ ಸ್ಕೂಟರ್ ಮೇಲೆ ಬಿದ್ದಿತು. ಇದರಿಂದ ಗಾಬರಿಗೊಳಗಾದ ಆಕೆ ಆಯಾತಪ್ಪಿ ವಾಟರ್ ಟ್ಯಾಂಕರ್ ಸ್ಕೂಟರ್‌ನಿಂದ ಡಿಕ್ಕಿ ಹೊಡೆದಾಗ ಅವಳ ತಲೆಗೆ ಗಾಯವಾಯಿತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ.
ಈ ಘಟನೆಯು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ರಾಜಕಾರಣಿಗಳನ್ನು ಕಟುವಾಗಿ ಟೀಕಿಸಿದ್ದರು. ರಾಜಕೀಯ ಪಕ್ಷಗಳು ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ನಿರ್ಮಿಸುವುದನ್ನು ನಿಷೇಧಿಸಿದ ಮದ್ರಾಸ್ ಹೈಕೋರ್ಟ್, “ರಾಜ್ಯವು ಅಕ್ರಮ ಹೋರ್ಡಿಂಗ್‌ಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ “ಇನ್ನೂ ಎಷ್ಟು ಲೀಟರ್ ರಕ್ತ” ಚೆಲ್ಲುಬೇಕು ಎಂದು ಪ್ರಶ್ನಿಸಿತ್ತು.
ಆದರೆ, ಚೆನ್ನೈನಿಂದ 60 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಪಟ್ಟಣವಾದ ಮಾಮಲ್ಲಾಪುರಂನಲ್ಲಿ ನಡೆದ ಅನೌಪಚಾರಿಕ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಲು ಗುರುವಾರ ನ್ಯಾಯಾಲಯವು, 30 ಬ್ಯಾನರ್‌ಗಳನ್ನು ಹಾಕಲು ಅನುಮತಿ ನೀಡಿತು. ಭಾರತ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಡುವೆ ವ್ಯತ್ಯಾಸವಿದೆ ಎಂದು ನ್ಯಾಯಾಲಯ ವಾದಿಸಿತು.
ಆದರೆ ಈ ಘಟನೆಯನ್ನು ಡಿಎಂಕೆ ಮುಖಂಡ ಕಮಲ್ ಹಾಸನ್ ತೀವ್ರವಾಗಿ ಖಂಡಿಸಿದ್ದರು. ಅನಧಿಕೃತವಾಗಿ ಹೋರ್ಡಿಂಗ್ ಹಾಕಿರುವವರ ಮೇಲೆ ಸೂಕ್ತ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದರು.
ನಾಲ್ಕು ಬಾರಿ ಶಾಸಕರಾದ ಪೊನ್ನಯ್ಯನ್ “ಎಂ.ಕೆ. ಸ್ಟಾಲಿನ್ ಈ ಬಗ್ಗೆ ಸುಳ್ಳು ಹೇಳುತ್ತಾರೆ ಮತ್ತು ಉತ್ಪ್ರೇಕ್ಷೆ ಮಾಡುತ್ತಾರೆ. ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಗಲಿ. ಅವರು ತೀರ್ಮಾನಿಸಲಿ. ಕರುಣಾನಿಧಿಯ ಆಡಳಿತ ದಿನಗಳಿಂದ ಎಷ್ಟು ಬ್ಯಾನರ್‌ಗಳನ್ನು ಹಾಕಿದ್ದರೆಂದು ಗೊತ್ತಾಗುತ್ತದೆ ಎಂದು ಅವರ “ಬ್ಯಾನರ್ ಒಂದು ಸಂವಹನ ರೂಪವಾಗಿದೆ ” ಎಂದು ತಿಳಿಸಿದ್ದಾರೆ.
ನವೆಂಬರ್ 2017 ರಲ್ಲಿ, 30 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ತಮಿಳುನಾಡಿನ ಕೊಯಮತ್ತೂರಿನಲ್ಲಿ ಸ್ನೇಹಿತರನ್ನು ಭೇಟಿಯಾಗಿ ವಾಪಸ್ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವರ ಬೈಕ್‌ಗೆ ಮರದ ಹೋರ್ಡಿಂಗ್ ಡಿಕ್ಕಿ ಹೊಡೆದು ಮೃತಪಟ್ಟರು. ಆಡಳಿತಾರೂಡ AIADMK ಎಂಜಿಆರ್‌ರವರ ಶತಮಾನೋತ್ಸವಕ್ಕಾಗಿ ಆ ಹೋರ್ಡಿಂಗ್‌ಅನ್ನು ರಸ್ತೆಯಲ್ಲಿ ಸ್ಥಾಪಿಸಿದ್ದರು.


