ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಸಂತ, ಕಲಬುರಗಿಯ ಖ್ವಾಜಾ ಬಂದೇ ನವಾಝ್ ದರ್ಗಾದ ಪೀಠಾಧಿಪತಿ ಹಾಗೂ ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಸಾಹೇಬ್ (79) ಅವರು ಇಂದು (ನ.7) ನಿಧನರಾಗಿದ್ದಾರೆ.
ಇಸ್ಲಾಮಿನ ಚಿಸ್ತಿ ಸೂಫಿ ಪರಂಪರೆಯ ಪ್ರಮುಖ ವ್ಯಕ್ತಿಯಾಗಿದ್ದ ಖುಸ್ರೋ ಹುಸೈನಿ ಅವರು, ಪ್ರಸಿದ್ದ ಸೂಫಿ ಸಂತ ಹಝ್ರತ್ ಖ್ವಾಜಾ ಬಂದೇ ನವಾಝ್ ಅವರ 23ನೇ ನೇರ ವಂಶಸ್ಥರಾಗಿದ್ದಾರೆ. ಹುಸೈನಿ ಅವರು ವಿವಿಧ ಧರ್ಮಗಳ ನಡುವೆ ಭಾವೈಕ್ಯತೆ, ಸೌಹಾರ್ದತೆ ಕಾಪಾಡಿಕೊಂಡು ಬರುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.
ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿಯೂ ಆಗಿದ್ದ ಖುಸ್ರೋ ಹುಸೈನಿ, ಕಲಬುರಗಿಯ ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಖ್ವಾಜಾ ಬಂದೇ ನವಾಝ್ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.
ಖ್ವಾಜಾ ಬಂದೇ ನವಾಝ್ ವಿಶ್ವ ವಿದ್ಯಾಲಯದ ಸ್ಥಾಪಕರೂ ಆಗಿರುವ ಖುಸ್ರೋ ಹುಸೈನಿ, ಖ್ವಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ.
ಖುಸ್ರೋ ಹುಸೈನಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
“ಹಿರಿಯ ಧಾರ್ಮಿಕ ಮುಖಂಡರು, ಕಲಬುರಗಿಯ ಹಜ್ರತ್ ಖಾಜಾ ಬಂದೇ ನವಾಜ ದರ್ಗಾದ ಗುರುಗಳು ಆದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಬಂದೇನವಾಜ ದರ್ಗಾವನ್ನು ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು. ಸದಾಕಾಲ ಸಮಾಜದ ಒಳಿತನ್ನೇ ಬಯಸುತ್ತಿದ್ದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ಅಗಲಿಕೆಯಿಂದ ನೊಂದಿರುವ ಅವರ ಬಂಧು ಮಿತ್ರರಿಗೆ, ಅನುಯಾಯಿಗಳಿಗೆ ನನ್ನ ಸಂತಾಪಗಳು” ಎಂದು ಸಿಎಂ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಹಿರಿಯ ಧಾರ್ಮಿಕ ಮುಖಂಡರು, ಕಲಬುರಗಿಯ ಹಜ್ರತ್ ಖಾಜಾ ಬಂದೇನವಾಜ ದರ್ಗಾದ ಗುರುಗಳು ಆದ ಸಯ್ಯದ್ ಶಾ ಖುಸ್ರೊ ಹುಸೇನಿ ಅವರ ನಿಧನದ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಬಂದೇನವಾಜ ದರ್ಗಾವನ್ನು ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು… pic.twitter.com/kYF4oC3zHP
— Siddaramaiah (@siddaramaiah) November 7, 2024
ಇದನ್ನೂ ಓದಿ : ವಕ್ಫ್ ಜಟಾಪಟಿ | ಜೆಪಿಸಿ ಅಧ್ಯಕ್ಷರ ರಾಜ್ಯ ಭೇಟಿಗೆ ಕಾಂಗ್ರೆಸ್ ವಿರೋಧ


