ಒಂದು ವೇಳೆ ಮೋದಿ ಮತ್ತು ಅಮಿತ್ ಅವರು ನನ್ನನ್ನು ಕಳುಹಿಸುವುದಾದರೆ ದೇಶಕ್ಕಾಗಿ ತಾನು ಆತ್ಮಹತ್ಯಾ ಬಾಂಬರ್ ಆಗಲು ಮತ್ತು ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗಲು ಸಿದ್ಧ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಅಲ್ಲಾಹನಾಣೆ… ಸೂಸೈಡ್ ಬಾ*ಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗ್ತೀನಿ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ಎಂದಿಗೂ ನಮಗೆ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನನಗೆ ಅವಕಾಶ ನೀಡಿದರೆ, ನಾನು ಆತ್ಮಹತ್ಯಾ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಿ ದಾಳಿ ನಡೆಸಲು ಸಿದ್ಧನಿದ್ದೇನೆ.” ಎಂದು ಅವರು ಹೇಳಿದ್ದಾರೆ.
ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರದ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಝಮೀರ್ ಅವರ ಹೇಳಿಕೆಗೆ ಅವರ ಸುತ್ತಮುತ್ತಲಿನ ಎಲ್ಲರೂ ನಗೆಗಡಲಲ್ಲಿ ತೇಲುತ್ತಿದ್ದಾಗ, ಮಾತನಾಡಿದ ಅವರು, “ನಾನು ಈ ಮಾತನ್ನು ತಮಾಷೆ ಮಾಡುತ್ತಿಲ್ಲ ಅಥವಾ ತಮಾಷೆಯ ರೀತಿಯಲ್ಲಿ ಹೇಳುತ್ತಿಲ್ಲ. ಇದನ್ನು ನಾನು ತುಂಬಾ ಗಂಭೀರವಾಗಿ ಹೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಖಂಡಿಸಿ ಮಾತನಾಡಿದ ಸಮಯದ ನಂತರ ಅವರು ಹೇಳಿಕೆ ನೀಡಿದ್ದಾರೆ. ದಾಳಿಯನ್ನು ಅವರು ಮುಗ್ಧ ನಾಗರಿಕರ ವಿರುದ್ಧದ “ಅನಾಗರಿಕ ಮತ್ತು ಅಮಾನವೀಯ ಕೃತ್ಯ” ಎಂದು ಕರೆದಿದ್ದು, ಭಯೋತ್ಪಾದನೆಯನ್ನು ಎದುರಿಸಲು ಪ್ರತಿಯೊಬ್ಬ ಭಾರತೀಯರು ಒಂದಾಗಬೇಕು ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22, 2025 ರಂದು, ಜಮ್ಮು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ, ಭಾರತ ಪಾಕಿಸ್ತಾನ ಗಡಿಯಲ್ಲಿ ರಾಜತಾಂತ್ರಿಕ ಒತ್ತಡ ಮತ್ತು ಮಿಲಿಟರಿ ಉದ್ವಿಗ್ನತೆ ಭುಗಿಲೆದ್ದಿದೆ. ಅಲ್ಲಾಹನಾಣೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅತ್ಯಾಚಾರ ಸಂತ್ರಸ್ತೆ ಮೇಲೆ ಮತ್ತೆ ಅತ್ಯಾಚಾರ ಆರೋಪ: ಆರು ಜನರ ಬಂಧನ, ಉಪ ಜೈಲರ್ ವಿರುದ್ಧ ಅಪಹರಣ ಕೇಸ್
ಅತ್ಯಾಚಾರ ಸಂತ್ರಸ್ತೆ ಮೇಲೆ ಮತ್ತೆ ಅತ್ಯಾಚಾರ ಆರೋಪ: ಆರು ಜನರ ಬಂಧನ, ಉಪ ಜೈಲರ್ ವಿರುದ್ಧ ಅಪಹರಣ ಕೇಸ್