ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಸಂಸದೆ ಸುಪ್ರಿಯಾ ಸುಲೆ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಸುಪ್ರಿಯಾ ಸುಳೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ವಾರ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾಡಿದ್ದ ‘ಎರಡು ಭಾರತ’ ಎಂಬ ಭಾಷಣವನ್ನು ಉಲ್ಲೇಖಿಸಿ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದರು. ಇದರ ನಂತರ ಸುಪ್ರಿಯಾ ಸುಲೆ ಅವರು ಲೋಕಸಭೆಯಲ್ಲಿ ಮಾತನಾಡಿದ್ದು, ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಷ್ಟೇ ಅಲ್ಲದೆ, ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಮಾಡಿರುವುದನ್ನು ಸಂಸದೆ ಸುಪ್ರಿಯಾ ಸುಲೆ ಖಂಡಿಸಿದ್ದು, “ವ್ಯಕ್ತಿಯೊಬ್ಬರು ಏನು ಧರಿಸಬೇಕು, ಏನು ತಿನ್ನಬೇಕು, ಏನು ಮಾತನಾಡಬೇಕು ಮತ್ತು ಏನು ಯೋಚಿಸಬೇಕು ಎಂಬುದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ. ಅದನ್ನು ಯಾರೂ ತಡೆಯಬಾರದು. ಕರ್ನಾಟಕ ಸರ್ಕಾರ ಹಿಜಾಬ್ ನಿಷೇಧಿಸಿರುವ ಕ್ರಮವು ಸರ್ವಾಧಿಕಾರಿ ಸ್ವಭಾವದ್ದಾಗಿದೆ” ಎಂದು ಅವರು ಕರೆದಿದ್ದಾರೆ.
Hon. @supriya_sule Tai condemned the hijab ban in Karnataka. She emphasized that what to wear, what to eat, what to say and what to think is a matter of an individual`s personal liberty and no one has a say in it. She called the action to ban hijab dictatorial in nature. pic.twitter.com/7sX64D1bSe
— NCP in Parliament (@NCP_Parliament) February 9, 2022
“ಕಾಂಗ್ರೆಸ್ ಮತ್ತು ಅದರ ಕುಟುಂಬ ರಾಜಕಾರಣದ ನಾಯಕರು ತಮ್ಮ ರಾಜಕೀಯ ನಿರುದ್ಯೋಗವನ್ನು ದೇಶದ ನಿರುದ್ಯೋಗ ಎಂದು ಗೊಂದಲಗೊಳಿಸುತ್ತಿದ್ದಾರೆ. ಈ ದೇಶದಲ್ಲಿ ನಿರುದ್ಯೋಗಿಯೊಬ್ಬರು ಇದ್ದರೆ ಅದು ಕಾಂಗ್ರೆಸ್ ಪಕ್ಷದ ಯುವರಾಜ ಮತ್ತು ಕಾಂಗ್ರೆಸ್ ಪಕ್ಷದ ವಂಶಸ್ಥರು” ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು.
ಇದನ್ನು ಉಲ್ಲೇಖಿಸಿದ ಸುಪ್ರಿಯಾ ಸುಲೆ, ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರೊಂದಿಗೆ ತೇಜಸ್ವಿ ಸೂರ್ಯ ಅವರ ಸಂಬಂಧದ ಬಗ್ಗೆ ಕೇಳಿದ್ದಾರೆ. ಶಾಸಕ ರವಿ ಸುಬ್ರಹ್ಮಣ್ಯ ತೇಜಸ್ವಿ ಸೂರ್ಯ ಅವರ ಸೋದರ ಸಂಬಂಧಿಯಾಗಿದ್ದಾರೆ. ಇಷ್ಟೇ ಅಲ್ಲದೆ, ಪ್ರೀತಮ್ ಮುಂಡೆ, ಪೂನಂ ಮಹಾಜನ್, ಹೀನಾ ಗಾವಿತ್, ರಕ್ಷಾ ಖಡ್ಸೆ, ಸುಜಯ್ ವಿಖೆ ಪಾಟೀಲ್ ಸೇರಿದಂತೆ ರಾಜಕೀಯ ಕುಟುಂಬಗಳಿಗೆ ಸೇರಿದ ಬಿಜೆಪಿ ನಾಯಕರ ಹೆಸರನ್ನು ಪಟ್ಟಿ ಮಾಡಿದ್ದಾರೆ.
“ರವಿ ಸುಬ್ರಹ್ಮಣ್ಯ ಕರ್ನಾಟಕದ ಬಿಜೆಪಿ ಶಾಸಕ. ನಾನು ತೇಜಸ್ವಿ ಸೂರ್ಯ ಅವರನ್ನು ಕೇಳಲು ಬಯಸುತ್ತೇನೆ, ಅವರಿಗೆ ರವಿ ಸುಬ್ರಹ್ಮಣ್ಯ ಅವರ ಬಗ್ಗೆ ತಿಳಿದಿದೆಯೇ. ಒಂದು ವೇಳೆ ಅವರು ಅವರನ್ನು ತಿಳಿದಿದ್ದರೆ, ಅವರು ಆಕಸ್ಮಿಕವಾಗಿ ಯಾವುದೇ ದೂರದ ಸಂಬಂಧ ಹೊಂದಿದ್ದಾರೆಯೇ?” ಸುಪ್ರಿಯಾ ಸುಲೆ ಕೇಳಿದ್ದಾರೆ.
“ನಾವೆಲ್ಲರೂ ರಾಜಕೀಯ ಕುಟುಂಬಗಳಲ್ಲಿ ಹುಟ್ಟಿದ್ದೇವೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ನಾನು ರಾಜಕೀಯ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಯಾರ ಮಗಳು ಎಂಬ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಸುಪ್ರಿಯಾ ಹೇಳಿದ್ದಾರೆ.
ಮೋದಿ ಬರುವುದಕ್ಕಿಂತ ಮುಂಚೆ ಭಾರತದಲ್ಲಿ ಯಾವುದೇ ಉದ್ದಿಮೆಗಳು ಇರಲಿಲ್ಲ ಎಂಬ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸುಪ್ರಿಯಾ, “ವಿಪ್ರೋ ಬಹುಶಃ ಬೆಂಗಳೂರಿನಲ್ಲಿರುವುದಾಗಿದೆ. ಭಾರತದಲ್ಲಿ ಅತಿ ದೊಡ್ಡ ಕಂಪನಿಯಾಗಿರುವ ಇನ್ಫೋಸಿಸ್ ಕೂಡ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ನಮ್ಮ ರಾಜ್ಯದಲ್ಲಿ ಅವರು ಇದ್ದಾರೆ ಎಂಬುದಕ್ಕೆ ತುಂಬಾ ಹೆಮ್ಮೆ ಇದೆ. ಪೂನಾವಾಲರ ಲಸಿಕೆ ಕಂಪನಿಗೆ ಈ ಸರ್ಕಾರ ಪ್ರಶಸ್ತಿ ನೀಡಿತು. ಆ ವ್ಯಕ್ತಿ ಶೂನ್ಯದಿಂದ ಪ್ರಾರಂಭಿಸಿದ್ದರು, ಅವರು ನನ್ನ ತಂದೆಯೊಂದಿಗೆ ಶಾಲೆಗೆ ಹೋದವರಾಗಿದ್ದರು, ಹಾಗಾಗಿ ನನಗೆ ಸಂಪೂರ್ಣ ಹಿನ್ನೆಲೆ ತಿಳಿದಿದೆ” ಎಂದು ಸುಪ್ರಿಯಾ ಸುಲೆ ಅವರು ಹಲವು ಕಂಪೆನಿಗಳ ಪಟ್ಟಿಯನ್ನು ಓದಿದ್ದಾರೆ.



ನೀವು ಹಿಜಾಬ್ ಹಾಕಿ ಅವರಿಗೆ ಬೆಂಬಲ ಸೂಚಿಸಿ
Abhishek