Homeಮುಖಪುಟಸುಪ್ರೀಂ ನೇಮಿಸಿದ ಸಮಿತಿಯಲ್ಲಿನ ಸದಸ್ಯರೆಲ್ಲರೂ ಕೃಷಿ ಕಾಯ್ದೆ ಸಮರ್ಥಕರು!: ಭುಗಿಲೆದ್ದ ಆಕ್ರೋಶ

ಸುಪ್ರೀಂ ನೇಮಿಸಿದ ಸಮಿತಿಯಲ್ಲಿನ ಸದಸ್ಯರೆಲ್ಲರೂ ಕೃಷಿ ಕಾಯ್ದೆ ಸಮರ್ಥಕರು!: ಭುಗಿಲೆದ್ದ ಆಕ್ರೋಶ

- Advertisement -
- Advertisement -

ಕೃಷಿ ಕಾಯ್ದೆಗಳ ಜಾರಿಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಅಮಾನತು ಮಾಡಿರುವ ಸುಪ್ರೀಂ ಕೋರ್ಟ್‌ ರೈತರ ಆಕ್ಷೇಪಗಳನ್ನು ಆಲಿಸಲು ನಾಲ್ವರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಆದರೆ ಸಮಿತಿಯಲ್ಲಿನ ನಾಲ್ವರು ಸದಸ್ಯರು ಕೂಡ ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ಸಮರ್ಥಕರೆ ಆಗಿದ್ದಾರೆ. ಹಾಗಾಗಿ ಸಮಿತಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಆಕ್ರೋಶ ಕೇಳಿಬಂದಿದೆ.

ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್‌ ಗುಲಾಟಿ, ಮತ್ತು ಅನಿಲ್ ಘನ್ವತ್ ಇದ್ದು ಇವರೆಲ್ಲರೂ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಕಾಯ್ದೆಯ ಪರವಾಗಿರುವವರು ಎಂದು ಆರೋಪಿಸಲಾಗಿದೆ. ಇದಕ್ಕೆ ಆಧಾರವೆಂಬುವಂತೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಇವರ ಹೇಳಿಕೆಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಮಿತಿಯ ಒಬ್ಬೊಬ್ಬರು ಕೃಷಿ ಕಾಯ್ದೆಗಳ ಕುರಿತು ಏನೇನು ಹೇಳಿದ್ದಾರೆ ಎಂಬುದನ್ನು ನೋಡೋಣ.

ಅಶೋಕ್ ಗುಲಾಟಿ

ಈ ಶಾಸನಗಳ ಆರ್ಥಿಕ ತಾರ್ಕಿಕತೆಯೆಂದರೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿದಾರರಿಗೆ ಖರೀದಿಸಲು ಮತ್ತು ಸಂಗ್ರಹಿಸಲು ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ಒದಗಿಸುವುದು, ಇದರಿಂದಾಗಿ ಕೃಷಿ ವ್ಯಾಪಾರೋದ್ಯಮದಲ್ಲಿ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಈ ಸ್ಪರ್ಧೆಯು ಮಾರ್ಕೆಟಿಂಗ್ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ, ಉತ್ತಮ ಬೆಲೆ ಆವಿಷ್ಕಾರವನ್ನು ಶಕ್ತಗೊಳಿಸುವ ಮೂಲಕ, ರೈತರಿಗೆ ಬೆಲೆ ಸಾಕ್ಷಾತ್ಕಾರವನ್ನು ಸುಧಾರಿಸುವ ಮೂಲಕ ಮತ್ತು ಅದೇ ಸಮಯದಲ್ಲಿ ಗ್ರಾಹಕರು ಪಾವತಿಸುವ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಕೃಷಿಯಲ್ಲಿ ಹೆಚ್ಚು ಪರಿಣಾಮಕಾರಿ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಶೋಕ್ ಗುಲಾಟಿಯವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಪ್ರತಿಪಕ್ಷವು ದಾರಿ ತಪ್ಪಿದೆ ಆದರೆ ಸರ್ಕಾರವು ತನ್ನ ಕಾರ್ಯವನ್ನು ಒಟ್ಟುಗೂಡಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಪ್ರಮೋದ್ ಕುಮಾರ್ ಜೋಷಿ

ನಿಜವಾದ ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಕೇಂದ್ರದ ಸಕಾರಾತ್ಮಕ ಪ್ರತಿಕ್ರಿಯೆಯ ಹೊರತಾಗಿಯೂ, ರೈತರ ಆಂದೋಲನವನ್ನು ಇನ್ನೂ ಬಗೆಹರಿಸಲಾಗಿಲ್ಲ ಎಂಬುದು ವಿಷಾದನೀಯ. ಪ್ರತಿ ಮಾತುಕತೆಗೆ ಮುಂಚಿತವಾಗಿ ರೈತರು ಗೋಲ್‌ಪೋಸ್ಟ್‌ಗಳನ್ನು ಬದಲಾಯಿಸುತ್ತಿರುವುದು ದುರದೃಷ್ಟಕರ. ಆರಂಭದಲ್ಲಿ, ರೈತರು ಮತ್ತು ರೈತ ಸಂಘಟನೆಗಳನ್ನು ಸಂಪರ್ಕಿಸದೆ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗಿತ್ತು; ಇದು ಅನ್ಯಾಯದ ಹಕ್ಕು. ಕೃಷಿ ಮಾರುಕಟ್ಟೆಗಳನ್ನು ಅನಿಯಂತ್ರಣಗೊಳಿಸುವ ವಿಷಯವು ಚರ್ಚೆಯಲ್ಲಿದೆ ಮತ್ತು ಕಳೆದ ಎರಡು ದಶಕಗಳಿಂದ ಚರ್ಚೆಯಾಗಿದೆ ಎಂದು ಪಿ.ಕೆ ಜೋಶಿಯವರು ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ಗೆ ಲೇಖನ ಬರೆದಿದ್ದಾರೆ.

ಭೂಪಿಂದರ್ ಸಿಂಗ್ ಮಾನ್

AIKCC ಎಂಬ ಒಕ್ಕೂಟದ ಅಧ್ಯಕ್ಷರಾದ ಇವರು 2020ರ ಡಿಸೆಂಬರ್‍ 14 ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ, ವಿರೋಧಗಳಿಗೆ ತಲೆಬಾಗಬೇಡಿ, ಕಾನೂನುಗಳನ್ನು ಜಾರಿಗೆ ತನ್ನಿ‌ ಎಂದು ಮನವಿ ಪತ್ರ ನೀಡಿದ್ದರು. ಅದರ ಸುದ್ದಿ ವರದಿ ಇಲ್ಲಿದೆ.

ಅನಿಲ್ ಘನ್ವತ್

ಮಹಾರಾಷ್ಟ್ರದ ಶೇತ್ಕಾರಿ ಸಂಘಟನ್‌ನ ಅಧ್ಯಕ್ಷರಾದ ಇವರು “ಸರ್ಕಾರವು ಕಾನೂನುಗಳ ಅನುಷ್ಠಾನವನ್ನು ನಿಲ್ಲಿಸಿ, ರೈತರೊಂದಿಗೆ ಚರ್ಚಿಸಿದ ನಂತರ ಅವುಗಳನ್ನು ತಿದ್ದುಪಡಿ ಮಾಡಬಹುದು. ಆದರೆ ರೈತರಿಗೆ ಅವಕಾಶಗಳನ್ನು ತೆರೆದಿರುವ ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಪ್ರತಿಪಾದಿಸಿದವರು. ಅದ ವರದಿ ಇಲ್ಲಿದೆ.

ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದ ನಾಲ್ಕು ಸದಸ್ಯರ ಸಮಿಯಲ್ಲಿರುವ ಪ್ರಮೋದ್ ಜೋಶಿಯವರ ಈ ಕೃಷಿ ಮಸೂದೆ ಪರವಾದ ನಿಲುವುಗಳ ಈ ಲೇಖನ ನೋಡಿ. ಇನ್ನು ಅಶೋಕ್ ಗುಲಾಟಿ ಮಸೂದೆಗಳ ಪರ ಪುಂಖಾನಪುಂಖವಾಗಿ ಲೇಖನಗಳನ್ನು ಬರೆದಿದ್ದಾರೆ. ಇದು ಮೋದಿ ಸರಕಾರ ನೇಮಿಸಿದ ಸಮಿತಿ ಎಂದು ಬಿ.ಶ್ರೀಪಾದ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಕಮಿಟಿಯ ಸದಸ್ಯರನ್ನು ನೋಡಿ. ಭೂಪಿಂದರ್ ಸಿಂಗ್ ಮಾನ್ ತಿದ್ದುಪಡಿಗಳೊಂದಿಗೆ ಈ ಕಾಯಿದೆ ಒಪ್ಪಿಕೊಳ್ಳಲು ಸಿದ್ಧ ಅಂದಿದ್ದರು. ಅಶೋಕ್ ಗುಲಾಟಿ ನೋಟು ರದ್ಧತಿ ಮಹಾನ್ ಕ್ರಾಂತಿಕಾರಿ ಹೆಜ್ಜೆ ಎಂದು ಹಾಡಿ ಹೊಗಳಿದ್ದ ಆಸಾಮಿ. ಅನಿಲ್ ಘನ್ವತ್ ಈ ಕಾಯಿದೆಗಳನ್ನು ಬೆಂಬಲಿಸಿದ್ದರು. ಪಿಕೆ ಜೋಷಿ ವಿಶ್ವ ಬ್ಯಾಂಕಿನ ಅರ್ಥ ಶಾಸ್ತ್ರಜ್ಞ. ಅರ್ಥಾತ್ ಈ ಅಡುಗೆ ಚೌಕಿದಾರನೇ ಸಿದ್ಧಮಾಡಿ ಬೊಬ್ಡೆ ಮೂಲಕ ಸರ್ವ್ ಮಾಡಿರೋದು ಎಂಬುದರ ಬಗ್ಗೆ ಸಂಶಯ ಬೇಡ ಎಂದು ಸುರೇಶ್ ಕಂಜರ್ಪಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್‍ ಧೃವ್ ರಾಠೀ ಟ್ವೀಟ್‌ ಮಾಡಿ “ಬಹಿರಂಗವಾಗಿ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ನಾಲ್ಕು ವ್ಯಕ್ತಿಗಳನ್ನು ಸಮಿತಿಗೆ ಸುಪ್ರೀಂ ಕೋರ್ಟ್‌ ನೇಮಿಸಿದೆ. ಇದು ಹೇಗಿದೆಯೆಂದರೆ ವಿಶ್ವದ ಅತ್ಯುತ್ತಮ ಪ್ರಧಾನಿ ಯಾರೆಂದು ನಿರ್ಧರಿಸಲು ಸಂಬಿತ್ ಪಾತ್ರ, ಕಂಗನಾ ರಾಣಾವತ್, ಅರ್ನಾಬ್ ಗೋಸ್ವಾಮಿ ಮತ್ತು ರಜತ್ ಶರ್ಮಾರನ್ನು ನೇಮಿಸಿದಂತಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಈ ಎಲ್ಲಾ ಕಾರಣಗಳಿಗಾಗಿಯೇ ಹೋರಾಟನಿರತ ರೈತ ಮುಖಂಡರು ಸಮಿತಿ ರಚನೆಯನ್ನು ವಿರೋಧಿಸಿದ್ದರು. “ಗೌರವಾನ್ವಿತ ಸುಪ್ರೀಂ ಕೋರ್ಟ್‌ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್‌ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್‌ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ” ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದರು.


ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ನೇಮಿಸುವ ಸಮಿತಿಯಲ್ಲಿ ಭಾಗವಹಿಸುವುದಿಲ್ಲ: ರೈತ ಮುಖಂಡರ ನಿರ್ಣಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರೈತರ ಬಗ್ಗೆ ತಿಳಿದಿರುವವರ ಬಗ್ಗೆ – ಪುಸ್ತಕದ, ಬಾಟಲಿಯ ಬದನೆಕಾಯಿ ಮಂದಿ ಇಷ್ಟು ಬರೀತಾರಲ್ಲ !!? ನಿಮ್ಮ ಯೋಗ್ಯತೆಗೆ ಇಷ್ಟು ಬೆಂಕಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....