ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡಿದ್ದ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸೋಮವಾರ ಎತ್ತಿ ಹಿಡಿದಿದೆ. ಆದರೆ ಸುಪ್ರೀಂಕೋರ್ಟಿನ ಈ ತೀರ್ಪಿನ ವಿರುದ್ಧ ಜಾಲತಾಣಗಳಲ್ಲಿ ಹಲವರು ಧ್ವನಿ ಎತ್ತಿದ್ದು, ‘ಬ್ಯಾನ್_ಇಡಬ್ಲ್ಯೂಎಸ್’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.
ಸೋಮವಾರ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, “ಇಡಬ್ಲ್ಯೂಎಸ್ 10% ಮೀಸಲಾತಿ ತಾರತಮ್ಯವಲ್ಲ ಮತ್ತು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ. 50% ಸೀಲಿಂಗ್ ಮಿತಿಯ ನಿಯಮವನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮನೋಜ್ ಥಂಡಿ ಎಂಬವರು,“ಸಾಮಾಜಿಕವಾಗಿ ಹಿಂದುಳಿದವರಿಗೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ಆರ್ಥಿಕ ದುರ್ಬಲ ವರ್ಗದ ಮೀಸಲಾತಿಯು ಸಾಂವಿಧಾನಿಕ ರಚನೆಗೆ ಧಕ್ಕೆ ತರುತ್ತದೆ. ಇದು ಅಸಾಂವಿಧಾನಿಕ” ಎಂದು ಮನೋಜ್ ಥಂಡಿ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
The basis of reservation in the constitution is considered to be social backwardness, whereas the reservation of EWS is on the basis of economic which is not compatible with the constitutional structure. EWS reservation is unconstitutional.@HansrajMeena#EWS_आरक्षण_खत्म_करो pic.twitter.com/mKndeVkT0s
— Manoj Tandi (@ManojTandi9) November 7, 2022
ಇದನ್ನೂ ಓದಿ: EWS: ಸಾಮಾಜಿಕ ನ್ಯಾಯಕ್ಕಾಗಿ ನಡೆದ ಶತಮಾನದ ಹೋರಾಟಕ್ಕೆ ಹಿನ್ನಡೆ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
“ಮೇಲ್ಜಾತಿಯ ಬಡವರನ್ನು ಯಾರೂ ದೇವಸ್ಥಾನದಿಂದ ಹೊರಗೆ ಓಡಿಸಲ್ಲ. ಬಾವಿಯಿಂದ ನೀರು ಸೇದುವುದಕ್ಕೆ ಅವರಿಗೆ ನಿರ್ಬಂಧವಿಲ್ಲ. ಅವರಿಗೆ ಪ್ರತ್ಯೇಕವಾಗಿ ಊಟ ನೀಡಲ್ಲ. ಆದರೆ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದ ಜನತೆ ಈ ಅವಮಾನಗಳನ್ನು ಇಂದಿಗೂ ಅನುಭವಿಸುತ್ತಿದೆ. ಬ್ಯಾನ್_ಇಡಬ್ಲ್ಯೂಎಸ್” ಎಂದು ಪತ್ರಕರ್ತ ಹನ್ಸ್‌ರಾಜ್ ಮೀನಾ ಟ್ವೀಟ್ ಮಾಡಿದ್ದಾರೆ.
गरीब सवर्णों को कोई मन्दिर से नहीं भगाता, कुएं से नहीं उतारता, घड़े में से पानी के लिए नहीं रोकता, घोड़ी से नहीं उतारता, अलग थलग बिठाकर खाना नहीं खिलाता I गरीब सवर्ण नरेगा जैसी योजना का लाभ लेकर जीवन जी सकता है पर क्या एससी, एसटी,ओबीसी के साथ जातीय भेदभाव बंद हो सकता है? #BAN_EWS
— Hansraj Meena (@HansrajMeena) November 7, 2022
“ವಾಸ್ತವವಾಗಿ ಇಡಬ್ಲ್ಯೂಎಸ್ ಮೀಸಲಾತಿ ಅಸಾಂವಿಧಾನಿಕ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಕೊಡಬೇಕೇ ಹೊರತು ಆರ್ಥಿಕ ಸ್ಥಿತಿಯ ಆಧಾರದಲ್ಲಿ ಅಲ್ಲ. ಬ್ಯಾನ್_ಇಡಬ್ಲ್ಯೂಎಸ್” ಎಂದು ‘ರಾಜಸ್ಥಾನ ಟ್ರೈಬಲ್ ಆರ್ಮಿ’ ಟ್ವೀಟ್ ಮಾಡಿದೆ.
In fact EWS reservation is unconstitutional. Criteria for reservation is only social& educational backwardness and not economic condition. #EWS_आरक्षण_खत्म_करो #BAN_EWS pic.twitter.com/JDuojW6A4S
— Tribal Army Rajasthan (@TribalArmy_RaJ) November 7, 2022
“ಇಡಬ್ಲ್ಯೂಎಸ್ ಮೀಸಲಾತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಹೊರಗಿಡಲಾಗಿದೆ. ಇಡಬ್ಲ್ಯೂಎಸ್ ಮೀಸಲಾತಿ ಕೇವಲ ಸಾಮಾನ್ಯ ವರ್ಗಕ್ಕೆ ಮಾತ್ರ. ಇದು ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧವಾಗಿದ್ದು, ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ. ಅಂಥ ತಾರತಮ್ಯ ಏಕೆ” ಎಂದು ಸ್ನೇಹ ಸೋನಾಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.
EWS reservation socially & educationally backward classes r excluded..
Its benefit is only up to general class, so it is against equality & equal justice & it violates the basic structure of the constitution..
Why is there such discrimination?#Ban_EWS#EWS_आरक्षण_खत्म_करो pic.twitter.com/kBs0tBZfav— Sneha Sonali (@SnehaSonali2411) November 7, 2022
ಇದನ್ನೂ ಓದಿ: ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!
ಇನ್ನೂ ಹಲವರು ಯು.ಯು. ಲಲಿತ್ ಅವರು ಸಿಜೆಐ ಹುದ್ದೆಯಿಂದ ಹೊರ ನಡೆಯುವ ಮುನ್ನ ಉತ್ತಮ ತೀರ್ಪು ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.



ಈ ಅಂಕಣದಲ್ಲಿ scst ಮತ್ತು obc ಸಮುದಾಯಗಳ ಮೀಸಲಾತಿ ವಿರೋದವಾಗಿ ಬರೆಯುವವರು ಒಂದೋ ಸಂವಿಧಾನ ವಿರೋಧಿಗಳು ಇಲ್ಲವೇ ಮನು ಶಾಸನದಲ್ಲಿದ್ದoತೆ ,ದಲಿತರು ಹಿಂದುಳಿದ ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾವಿರಾರು ವರ್ಷಗಳಿಂದ ಹೇಗೆ ಶೋಚನೀಯ ವಾಗಿದ್ದರು ಅದೇ ಸ್ಥಿತಿಯಲ್ಲಿ ಮುಂದುವರೆಯಲು ಆಶಿಸುವ ಮನೋವಿಕಾರಿ ಜಾತಿವಾದಿ ಕ್ರಿಮಿಗಳಷ್ಟೇ.
Then give permission for everyone to enter temple, road’s,wells .. revoke the reservation in job and edu.
If giving reservation to poor is unconstitutional, then constitution itself is wrong which should be corrected.