Homeಮುಖಪುಟಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!

ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್!

- Advertisement -
- Advertisement -

ಬಡವರು ಅಥವಾ ಆರ್ಥಿಕವಾಗಿ ದುರ್ಬಲ ವಿಭಾಗ (EWS)ಗಳಿಗೆ ಕಾಲೇಜು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ನೀಡಿರುವ 10% ಮೀಸಲಾತಿಯನ್ನು ಸುಪ್ರೀಂಕೋರ್ಟ್ ಸೋಮವಾರ ಬೆಂಬಲಿಸಿದೆ. ಇದು ತಾರತಮ್ಯವಲ್ಲ ಮತ್ತು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ ಎಂದು ಅದು ತೀರ್ಪಿನಲ್ಲಿ ಹೇಳಿದೆ.

50% ಸೀಲಿಂಗ್ ಮಿತಿಯ ನಿಯಮವನ್ನು EWS ಮೀಸಲಾತಿ ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

EWS ಮೀಸಲಾತಿಯನ್ನು 2019 ರ ಸಾರ್ವತ್ರಿಕ ಚುನಾವಣೆಯ ಮೊದಲು ಪ್ರಾರಂಭಿಸಲಾಯಿತು ಮತ್ತು ಭಾರತೀಯ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಯೋಜನಕಾರಿಯಾಗಲು ಇದನ್ನು ತರಲಾಗಿದೆ.

ಇದನ್ನೂ ಓದಿ: 10% ಮೀಸಲಾತಿ: ಆರ್‌‌ಎಸ್‌ಎಸ್‌ ಮಂದಿ ಹಬ್ಬಿಸಿರುವ 100% ಸುಳ್ಳುಗಳು! 

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಸೋತ ಕೂಡಲೇ 103 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಮಾಡಿದ ಒಕ್ಕೂಟ ಸರ್ಕಾರವು ಜನವರಿ 2019 ರಲ್ಲಿ ಈ ಕಾನೂನು ಅಂಗೀಕರಿಸಿತ್ತು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಕಾನೂನನ್ನು ಪ್ರಶ್ನಿಸಿ ತಕ್ಷಣವೇ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು.

1992 ರಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೀಸಲಾತಿಯ 50% ದ ರಾಷ್ಟ್ರೀಯ ಮಿತಿಯನ್ನು ಈ ಮೀಸಲಾತಿ ದಾಟಬಹುದೆ ಮತ್ತು ಸಂವಿಧಾನದ “ಮೂಲ ರಚನೆ” ಯನ್ನು ಬದಲಾಯಿಸಿದ್ದು ಸರಿಯೆ ಎಂದು ಅರ್ಜಿಗಳು ಪ್ರಶ್ನಿಸಿದ್ದವು.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ

ಐವರು ನ್ಯಾಯಮೂರ್ತಿಗಳಲ್ಲಿ ನಾಳೆ ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್‌‌ ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಆರ್ಥಿಕ ದುರ್ಬಲತೆ, ಆರ್ಥಿಕ ಹಿಂದುಳಿದಿರುವಿಕೆ ಸಂವಿಧಾನ ಈ ತಿದ್ದುಪಡಿಯ ಬೆನ್ನೆಲುಬಾಗಿದೆ. ಆದರೆ ಈ ತಿದ್ದುಪಡಿಯು ಸಾಂವಿಧಾನಿಕವಾಗಿ ಅಸಮರ್ಥನೀಯವಾಗಿದೆ. ಜೊತೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಯಂತಹ ವರ್ಗಗಳನ್ನು ಈ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನಾತ್ಮಕವಾಗಿ ಅನುಮತಿಸಲಾಗುವುದಿಲ್ಲ” ಎಂದು ರವೀಂದ್ರ ಭಟ್‌‌ ಹೇಳಿದರು.

ಇದರ ಜೊತೆಗೆ ಜಸ್ಟಿಸ್ ಪಾರ್ದಿವಾಲ ಮತ್ತು ಜಸ್ಟಿಸ್ ತ್ರಿವೇದಿ ಅವರುಗಳು 75 ವರ್ಷಗಳು ಕಳೆದರೂ ಮೀಸಲಾತಿ ವ್ಯವಸ್ಥೆ ಮುಂದುವರೆದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಈ ಕಾನೂನನ್ನು ವಿರೋಧಿಸಲಿಲ್ಲ. ಆದರೆ ದೇಶದಲ್ಲೇ ಅತಿ ಹೆಚ್ಚು ಮೀಸಲಾತಿ ಹೊಂದಿರುವ ತಮಿಳುನಾಡು ಸೇರಿದಂತೆ ಒಟ್ಟು 40 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸಿದೆ.

ಇದನ್ನೂ ಓದಿ: ಮುಂದಿನ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳ ಇಡಬ್ಲ್ಯೂಎಸ್‌ ಮೀಸಲಾತಿ ಮಾನದಂಡ ಬದಲು: ಕೇಂದ್ರ

ಈ ಪ್ರಕರಣವನ್ನು ಮೊದಲು ಮೂವರು ನ್ಯಾಯಾಧೀಶರ ಮುಂದೆ ತರಲಾಗಿತ್ತು. ಆದರೆ ಅವರು ಅದನ್ನು 2019 ರಲ್ಲಿ ಐದು ನ್ಯಾಯಾಧೀಶರ ದೊಡ್ಡ ಪೀಠಕ್ಕೆ ವರ್ಗಾಯಿಸಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯವು ಈ ಪ್ರಕರಣವನ್ನು ನಿರಂತರವಾಗಿ ಆರೂವರೆ ದಿನಗಳ ವಿಚಾರಣೆಯನ್ನು ನಡೆಸಿತು ಮತ್ತು ಅದರ ತೀರ್ಪನ್ನು ಕಾಯ್ದಿರಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಒಟ್ಟಿನಲ್ಲಿ, ಸಂವಿಧಾನದ ರಕ್ಷಣೆ ಮಾಡ್ತಾಇದ್ದೇವೆ ಎಂದು ಹೇಳಿಕೊಂಡು ಬಂದ ನ್ಯಾಯಲಯಾಗಳೇ ಸಂವಿಧಾನದ ಅಶಯಗಳನ್ನ ಗಾಳಿಗೆ ತೂರಿ ಅಸಂವಿಧಾನಕ ತೀರ್ಪು ನೀಡಿದೆ.

  2. EWS ಮೀಸಲಾತಿ, ಸುಪ್ರೀಂ ಕೋರ್ಟ್ 1992 ರಲ್ಲಿ ನಿಗದಿಪಡಿಸಿದ 50% ಮಿತಿ ಮೀರುವುದಿಲ್ಲ ಎಂಬುದು ಹೇಗೆ ಎಂದು ನನ್ನಂಥ ಪಾಮರರಿಗೆ ಅರ್ಥ ಆಗಲೇ ಇಲ್ಲ!

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...