Homeಕರ್ನಾಟಕರಿಯಾಯಿತಿ ದರದಲ್ಲಿ ಗಂಧದಗುಡಿ ಚಿತ್ರ ಪ್ರದರ್ಶನ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಣೆ

ರಿಯಾಯಿತಿ ದರದಲ್ಲಿ ಗಂಧದಗುಡಿ ಚಿತ್ರ ಪ್ರದರ್ಶನ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಘೋಷಣೆ

- Advertisement -
- Advertisement -

ಕರ್ನಾಟಕರತ್ನ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದಗುಡಿ’ ಸಾಕ್ಷ್ಯಾಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪುನೀತ್ ಅವರ ಕೊನೆಯ ಚಿತ್ರವೂ ಇದಾಗಿದ್ದು, ಅತ್ಯುತ್ತಮ ಸಂದೇಶವನ್ನೂ ಸಾರುತ್ತಿದೆ. ಕಾಡಿನ ಕುರಿತ ಪರಿಸರ ಕಾಳಜಿಯ ಈ ಚಿತ್ರ ಮಕ್ಕಳು ಸೇರಿದಂತೆ ಹೆಚ್ಚು ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಪ್ರದರ್ಶನ ಮಾಡುತ್ತೇವೆ ಎಂದು ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.

ನವೆಂಬರ್ 7ರ ಸೋಮವಾರದಿಂದ ನವೆಂಬರ್ 10ರ ಗುರುವಾರದವರೆಗೂ ಕರ್ನಾಟಕ ರಾಜ್ಯಾದ್ಯಂತ ಥೀಯೇಟರ್‌ಗಳಲ್ಲಿ 56 ರೂಗಳಿಗೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 112ರೂಗಳಿಗೆ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಗಂಧದಗುಡಿ ಅಪ್ಪುರವರ ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಈ ಸಿನಿಮಾವನ್ನು ಎಲ್ಲ ಕನ್ನಡಿಗರು, ಅದರಲ್ಲಿಯೂ ಮಕ್ಕಳ ನೋಡಬೇಕೆಂಬುದು ಅಪ್ಪುರವರ ಉದ್ದೇಶವಾಗಿತ್ತು. ಹಾಗಾಗಿ ಚಿತ್ರತಂಡದೊಂದಿಗೆ ಚರ್ಚಿಸಿ, ವಿತರಕರು ಮತ್ತು ಪ್ರದರ್ಶಕರ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ಏರ್ಪಡಿಸಿದ್ದೀವಿ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಪ್ರತೀ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ‘ಗಂಧದಗುಡಿ’ ಡಾಕ್ಯೂಡ್ರಾಮಾ ತೋರಿಸಬೇಕು. ಕರ್ನಾಟಕದ ಭೌಗೋಳಿಕ ವೈಭವವನ್ನು ಮುಂದಿನ ಪೀಳಿಗೆ ಅರಿಯುವಂತಾಗಲಿ. ಹತ್ತಾರು ಪುಸ್ತಕ ಓದುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಸಿನೆಮಾ ಅರ್ಥವಾಗುತ್ತದೆ” ಎಂದು ನಿರ್ದೇಶಕರಾದ ಮಂಸೋರೆ ಈ ಹಿಂದೆ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಮಕ್ಕಳಿಗೆ ಉಚಿತವಾಗಿ ‘ಗಂಧದಗುಡಿ’ ತೋರಿಸಬೇಕು, ಏಕೆಂದರೆ..,: ಮಂಸೋರೆ ಮನದ ಮಾತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...