Homeಮುಖಪುಟಮಕ್ಕಳಿಗೆ ಉಚಿತವಾಗಿ ‘ಗಂಧದಗುಡಿ’ ತೋರಿಸಬೇಕು, ಏಕೆಂದರೆ..,: ಮಂಸೋರೆ ಮನದ ಮಾತು

ಮಕ್ಕಳಿಗೆ ಉಚಿತವಾಗಿ ‘ಗಂಧದಗುಡಿ’ ತೋರಿಸಬೇಕು, ಏಕೆಂದರೆ..,: ಮಂಸೋರೆ ಮನದ ಮಾತು

- Advertisement -
- Advertisement -

“ಕರ್ನಾಟಕದ ಪ್ರತೀ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ‘ಗಂಧದಗುಡಿ’ ಡಾಕ್ಯೂಡ್ರಾಮಾ ತೋರಿಸಬೇಕು. ಕರ್ನಾಟಕದ ಭೌಗೋಳಿಕ ವೈಭವವನ್ನು ಮುಂದಿನ ಪೀಳಿಗೆ ಅರಿಯುವಂತಾಗಲಿ. ಹತ್ತಾರು ಪುಸ್ತಕ ಓದುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಸಿನೆಮಾ ಅರ್ಥವಾಗುತ್ತದೆ” ಎಂದು ನಿರ್ದೇಶಕರಾದ ಮಂಸೋರೆ ತಿಳಿಸಿದ್ದಾರೆ.

ಕರ್ನಾಟಕರತ್ನ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದಗುಡಿ’ ಸಾಕ್ಷ್ಯಾಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. “ಪುನೀತ್ ಅವರ ಕೊನೆಯ ಚಿತ್ರವೂ ಇದಾಗಿದ್ದು, ಅತ್ಯುತ್ತಮ ಸಂದೇಶವನ್ನೂ ಸಾರುತ್ತಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಈ ಚಿತ್ರವನ್ನು ತೋರಿಸಬೇಕು” ಎಂದು ‘ಹರಿವು’, ‘ನಾತಿಚರಾಮಿ’, ‘ಆಕ್ಟ್‌-1978′ ಸಿನಿಮಾಗಳ ನಿರ್ದೇಶಕ ಮಂಸೋರೆ ಮನವಿ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, ‘ಗಂಧದಗುಡಿ’ ಚಿತ್ರದ ವೈಶಿಷ್ಟ್ಯಗಳನ್ನು ಹಂಚಿಕೊಂಡರು. “ಒಳ್ಳೆಯ ಸಿನಿಮಾಗಳು ಸಾಕಷ್ಟು ಬರುತ್ತವೆ, ಹೋಗುತ್ತವೆ. ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿರುವ ಸಾಕ್ಷ್ಯಾಚಿತ್ರಗಳಿಗಿಂತ ಗಂಧದಗುಡಿ ವಿಭಿನ್ನವಾಗಿದೆ. ಕರ್ನಾಟಕದ ವೈವಿಧ್ಯತೆಯನ್ನು ಕಟ್ಟಿಕೊಟ್ಟಿದೆ. ಪುನೀತ್ ರಾಜ್‌ಕುಮಾರ್‌ ಅವರು ಇಲ್ಲಿ ಪ್ರಯಾಣಿಸಿ, ಚಿಂತನೆಗಳನ್ನು ಬಿತ್ತಿದ್ದಾರೆ” ಎಂದರು.

“ಮಕ್ಕಳಿಗೆ ಹೊಸ ಮಾದರಿಯ ಶಿಕ್ಷಣ ನೀಡಬೇಕು ಎಂಬ ಪ್ರಯತ್ನಗಳು ಈಗ ನಡೆಯುತ್ತಿವೆ. ಇಂತಹ ಸಮಯದಲ್ಲಿ ಗಂಧದಗುಡಿ ಪ್ರದರ್ಶನವಾಗುತ್ತಿರುವುದು ಬಹಳ ಮುಖ್ಯವಾಗಿದೆ. ಇದರಲ್ಲಿ ಅತ್ಯುತ್ತಮ ದೃಶ್ಯಗಳಿವೆ. ಅವುಗಳನ್ನು ಟಿವಿಯಲ್ಲಿ ತೋರಿಸುವುದಕ್ಕಿಂತ ಚಿತ್ರಮಂದಿರದಲ್ಲಿ ಮಕ್ಕಳಿಗೆ ಪ್ರದರ್ಶಿಸಿದರೆ ಉತ್ತಮ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು.

“ಧರ್ಮ, ಹಿಜಾಬ್‌, ಕೇಸರಿಶಾಲು ಇತ್ಯಾದಿ ಗಲಾಟೆಯಾಚೆಗೆ ಕರ್ನಾಟಕವಿದೆ. ನಮ್ಮ ಅಸ್ಮಿತೆ ವಿನೂತನವಾದದ್ದು ಎಂಬುದನ್ನು ಗಂಧದಗುಡಿ ಸಾರುತ್ತದೆ. ಭೌಗೋಳಿಕವಾಗಿ ವಿಶಿಷ್ಟವಾದ ರಾಜ್ಯ ಕರ್ನಾಟಕ ಎಂಬುದನ್ನು ಒಂದೂವರೆ ಗಂಟೆಯಲ್ಲಿ ಪರಿಚಯಿಸಿಕೊಡಲಾಗಿದೆ. ಇದನ್ನು ಮಕ್ಕಳಿಗೆ ತೋರಿಸಿದರೆ ಹಿಜಾಬ್‌, ಕೇಸರಿಶಾಲಿನಂತಹ ಬೇಡವಾದ ವಿಷಯಗಳನ್ನು ಬಿಟ್ಟು ಕರ್ನಾಟಕದ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳುತ್ತಾರೆ” ಎಂದು ಆಶಿಸಿದರು.

“ಮಕ್ಕಳಿಗಾಗಿ ಪ್ರದರ್ಶನಗಳನ್ನು ಆಯೋಜಿಸುವುದು ಸರ್ಕಾರಕ್ಕೆ ಸವಾಲಿನ ವಿಷಯವೇನೂ ಅಲ್ಲ. ನಾವು ಚಿಕ್ಕವಯಸ್ಸಿನಲ್ಲಿದ್ದಾಗ ಸಾಕಷ್ಟು ಸಿನಿಮಾಗಳನ್ನು ತೋರಿಸುತ್ತಿದ್ದರು. ಸರ್ಕಾರ ಯಾವುದ್ಯಾವುದೋ ವಿಷಯಕ್ಕೆ ಹಣವನ್ನು ಖರ್ಚು ಮಾಡುತ್ತದೆ. ಇಂತಹ ಒಳ್ಳೆಯ ಸಂಗತಿಗೆ ಹಣ ವಿನಿಯೋಗಿಸುವುದು ಸೂಕ್ತ” ಎಂದು ಹೇಳಿದರು.

“ಬಡಮಕ್ಕಳಿಗೆ ಹಣ ನೀಡುವುದು ಕಷ್ಟವಾಗುತ್ತದೆ. ಟಿಕೆಟ್ ವಸೂಲಿ ಮಾಡದೆ, ಉಚಿತವಾಗಿ ಪ್ರದರ್ಶನಗಳನ್ನು ಆಯೋಜಿಸಬೇಕು. ಟಿಕೆಟ್ ಎಂದಾಕ್ಷಣ ಸ್ಥಳೀಯವಾಗಿ ಹಣ ವಸೂಲಿ ಮಾಡುವವರು ಇರುತ್ತಾರೆ. ಯಾವುದೇ ಗೊಂದಲವಿಲ್ಲದೆ ಉಚಿತವಾಗಿ ಪ್ರದರ್ಶನಗಳನ್ನು ಆಯೋಜಿಸಬೇಕು” ಎಂದು ಕೋರಿದರು.

ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವದಂದು ‘ಪುನೀತ್ ರಾಜ್‌ಕುಮಾರ್‌‌’ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

“ಕರ್ನಾಟಕ ವೈವಿಧ್ಯತೆಯನ್ನು ಈ ಸಾಕ್ಷ್ಯಾಚಿತ್ರದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇದು ಎಲ್ಲ ಮಕ್ಕಳಿಗೂ ತಲುಪಬೇಕಿದೆ. ಇದರ ಜೊತೆಗೆ ಪುನೀತ್ ರಾಜ್‌ಕುಮಾರ್‌ ಅವರ ವ್ಯಕ್ತಿತ್ವ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತದೆ. ಗಂಧದಗುಡಿ ನೋಡಿದವರಲ್ಲಿ ಶೇ.10ರಷ್ಟು ಮಕ್ಕಳಾದರೂ ವಿಭಿನ್ನವಾಗಿ ಆಲೋಚನೆ ಬೆಳೆಸಿಕೊಳ್ಳಬಲ್ಲರು” ಎಂದು ತಿಳಿಸಿದರು.

“ದಸರಾಕ್ಕಾಗಿ ಖರ್ಚು ಮಾಡಿದ ಹಣದಲ್ಲಿ ಶೇ.10ರಷ್ಟು ಹಣವನ್ನಾದರೂ ಈ ಕಾರ್ಯಕ್ಕೆ ಖರ್ಚು ಮಾಡಿದರೆ ಸಾಕು, ಎಲ್ಲ ಮಕ್ಕಳಿಗೆ ಸಿನಿಮಾ ತೋರಿಸಬಹುದು. ತಾಲ್ಲೂಕು, ಹೋಬಳಿ ಮಟ್ಟದಲ್ಲಿರುವ ಚಿತ್ರಮಂದಿರಗಳಲ್ಲಿ ಮಕ್ಕಳಿಗಾಗಿ ಮಾರ್ನಿಂಗ್ ಷೋ ಮೀಸಲಿಡಬೇಕು” ಎಂದು ಒತ್ತಾಯಿಸಿದರು.

“ರಾಜ್ಯ ಸರ್ಕಾರ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ. ಮಕ್ಕಳಿಗೆ ಗಂಧದಗುಡಿ ಉಚಿತವಾಗಿ ತೋರಿಸಿದರೆ ಕರ್ನಾಟಕ ರತ್ನವನ್ನು ನೀಡಿದಷ್ಟೇ ಗೌರವವನ್ನು ಅಪ್ಪು ಅವರಿಗೆ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...