Homeಮುಖಪುಟಗುಜರಾತ್‌ ಸೇತುವೆ ದುರಂತ: ಬಿಜೆಪಿ ಸಂಸದನ ಕುಟುಂಬದ 12 ಮಂದಿ ಸಾವು

ಗುಜರಾತ್‌ ಸೇತುವೆ ದುರಂತ: ಬಿಜೆಪಿ ಸಂಸದನ ಕುಟುಂಬದ 12 ಮಂದಿ ಸಾವು

- Advertisement -
- Advertisement -

ಭಾನುವಾರ ಸಂಜೆ ಗುಜರಾತ್‌ನಲ್ಲಿ ಸಂಭವಿಸಿದ ಮೋರ್ಬಿ ಸೇತುವೆ ಕುಸಿತದಲ್ಲಿ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೊಹನ್‌ ಭಾಯ್ ಕಲ್ಯಾನ್‌ಜಿ ಕುಂದರಿಯಾ ಅವರ ಕುಟುಂಬದ ಹನ್ನೆರಡು ಸದಸ್ಯರು ಕೂಡಾ ಪ್ರಾಣ ಕಳೆದುಕೊಂಡಿದೆ.

“ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ನಾನು ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದ ಕುಟುಂಬ ಸದಸ್ಯರನ್ನು ನಾನು ಕಳೆದುಕೊಂಡಿದ್ದೇನೆ” ಎಂದು ಇಂಡಿಯಾ ಟುಡೆ ಟಿವಿಯೊಂದಿಗೆ ಮಾತನಾಡುತ್ತಾ ಸಂಸದ ಮೋಹನ್‌ಭಾಯ್‌ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಜರಾತ್‌ನ ಮೊರ್ಬಿ ನಗರದ ಮಖು ನದಿಯಲ್ಲಿದ್ದ ತೂಗು ಸೇತುವೆ ಕುಸಿತದಿಂದಾಗಿ ಈ ವರೆಗೆ 141 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆ ಮಕ್ಕಳಾಗಿದ್ದಾರೆ ವರದಿಗಳು ಹೇಳಿವೆ. ಎನ್‌ಡಿಆರ್‌ಎಫ್, ಸೇನೆ, ಎಸ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ಐದು ತಂಡಗಳು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

ಇದನ್ನೂ ಓದಿ: ಗುಜರಾತ್‌ ತೂಗುಸೇತುವೆ ದುರಂತ: ಸಾವಿನ ಸಂಖ್ಯೆ 141ಕ್ಕೆ ಏರಿಕೆ; 177 ಜನರ ರಕ್ಷಣೆ

ಸೇತುವೆಯನ್ನು ತೆರೆಯಲು ನೀಡಿದ ಅನುಮತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಸಂಸದ,“ಈ ದುರಂತವು ಹೇಗೆ ನಡೆಯಿತು ಎಂಬುವುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು. ಯಾರು ಈ ದುರಂತಕ್ಕೆ ಜವಾಬ್ದಾರಿಯೊ ಅವರಿಗೆ ಶಿಕ್ಷೆಯಾಗುತ್ತದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸ್ಥಳೀಯರು ಮತ್ತು ಎನ್‌ಜಿಒಗಳು ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

“60 ಕ್ಕೂ ಹೆಚ್ಚು ಶವಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ. ಉಳಿದವರನ್ನು ರಕ್ಷಿಸಲಾಗಿದ್ದು, ಪಾರುಗಾಣಿಕೆ ನಡೆಯುತ್ತಿದೆ. ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ, ಇದು ತುಂಬಾ ದುಃಖಕರವಾಗಿದೆ” ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ತನಿಖೆ ಮಾಡಲು ಸಮಿತಿ ರಚನೆ ಮಾಡಲಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಶ ಸಂಘ್ವಿ ಹೇಳಿದ್ದಾರೆ.

ಈ ನಡುವೆ ಗುಜರಾತ್ ಪೊಲೀಸರು ಖಾಸಗಿ ಏಜೆನ್ಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ಮತ್ತೆ ತೆರೆಯುವ ಮೊದಲು ಸೇತುವೆಯ ಸರಿಯಾದ ಕಾಳಜಿ ಮತ್ತು ಗುಣಮಟ್ಟದ ಪರಿಶೀಲನೆಯನ್ನು ತೆಗೆದುಕೊಳ್ಳಲಿಲ್ಲ, ಇದರಿಂದಾಗಿ ತೀವ್ರವಾದ ಅಜಾಗರೂಕತೆಯನ್ನು ಏಜನ್ಸಿ ಪ್ರದರ್ಶಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಎಡಪಕ್ಷದ ನಾಯಕ ಲುಲಾ ದಿಗ್ವಿಜಯ; ದಶಕದ ನಂತರ ಬಲಪಂಥೀಯ ಸರ್ಕಾರ ಪತನ

ಈ ಮಧ್ಯೆ ಘಟನಾ ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಭೇಟಿಗೆ ಹೊರಟಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ನಿಯೋಗದಲ್ಲಿ ಇರಲಿದ್ದಾರೆ. ಇದಲ್ಲದೆ, ಪಕ್ಷದ ಐದು ಚುನಾವಣಾ ಪ್ರಚಾರ ರ್‍ಯಾಲಿಗಳು ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮೃತಪಟ್ಟವರಿಗೆ ಮತ್ತು ಗಾಯಗೊಂಡವರಿಗೆ ಪರಿಹಾರಗಳನ್ನು ಘೋಷಿಸಿದ್ದಾರೆ. ನಾಳೆ ಮಧ್ಯಾಹ್ನ ಪ್ರಧಾನ ಮಂತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read