ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಿಯಾಗಿರುವ ಮುಸ್ಲಿಂ ವ್ಯಕ್ತಿ ಸೈಯದ್ ಮಾಮೂರ್ ಅಲಿ ಅಥವಾ ಮಾಮೂರ್ ಭಾಯಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್, ‘ಸಂದೇಶ ಕಳುಹಿಸಲು ಇದು ಅತ್ಯುತ್ತಮ ಬೆಳಿಗ್ಗೆ” ಎಂದು ಮಂಗಳವಾರ (ನ.11) ಹೇಳಿದೆ.
ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿದ ಮರುದಿನ ಸುಪ್ರೀಂ ಕೋರ್ಟ್ ಮೇಲಿನ ಹೇಳಿಕೆ ನೀಡಿದೆ. ಆದರೆ, ದೆಹಲಿ ಸ್ಪೋಟಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿಗಳು ತಿಳಿಸಿವೆ.
ಮಂಗಳವಾರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಪರ ವಕೀಲ ಸಿದ್ಧಾರ್ಥ ದವೆ, ದೆಹಲಿ ಸ್ಪೋಟವನ್ನು ಉಲ್ಲೇಖಿಸಿ, “ಇದು ವಾದ ಮಂಡಿಸಲು ಅತ್ಯುತ್ತಮ ಬೆಳಿಗ್ಗೆ ಅಲ್ಲ” ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, “ಸಂದೇಶ ಕಳುಹಿಸಲು ಇದು ಅತ್ಯುತ್ತಮ ಬೆಳಿಗ್ಗೆ” ಎಂದಿದೆ.
ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ಆರೋಪಿಯಿಂದ ಪ್ರಚೋದನಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದಾಗ, ಅದು ಕೇವಲ ಇಸ್ಲಾಮಿಕ್ ಸಾಹಿತ್ಯ ಎಂದು ದೇವ್ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮೆಹ್ತಾ ಅವರು, ಆರೋಪಿಗಳು ವಾಟ್ಸಾಪ್ ಗುಂಪನ್ನು ರಚಿಸಿಕೊಂಡಿದ್ದು, ಅಲ್ಲಿ ಐಸಿಸ್ ಧ್ವಜಕ್ಕೆ ‘ಬಹುತೇಕ ಹೋಲುವ’ ಧ್ವಜ ಕಂಡುಬಂದಿದೆ ಎಂದಿದ್ದಾರೆ.
ಆಗ, ಮಾಮೂರ್ ಅಲಿ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ. ಯಾವುದೇ ಆರ್‌ಡಿಎಕ್ಸ್ ಅಥವಾ ಸ್ಫೋಟಕಗಳು ಅವರ ಬಳಿ ಪತ್ತೆಯಾಗಿಲ್ಲ. ಅಲ್ಲದೆ, ಅವರು ಶೇಕಡ 70ರಷ್ಟು ಅಂಗವಿಕಲರಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದಾರೆ.
ಈ ಎಲ್ಲಾ ವಾದಗಳ ಹೊರತಾಗಿಯೂ, ಆರೋಪಗಳ ಗಂಭೀರತೆಯನ್ನು ಉಲ್ಲೇಖಿಸಿ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.
ಆದಾಗ್ಯೂ, ವಿಚಾರಣೆಯನ್ನು ಎರಡು ವರ್ಷಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಆ ಅವಧಿಯೊಳಗೆ ವಿಚಾರಣೆ ಮುಗಿಯದಿದ್ದರೆ, ವಿಳಂಬಕ್ಕೆ ಆರೋಪಿ ಕಾರಣವಲ್ಲದಿದ್ದರೆ, ಅವರು ಜಾಮೀನಿಗಾಗಿ ಮತ್ತೆ ಅರ್ಜಿ ಸಲ್ಲಿಸಬಹುದು ಎಂದಿದೆ.
ನ್ಯಾಯಾಲಯದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸಾಕೇತ್ ಗೋಖಲೆ, “ನಿಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಈಗ ಸಂಬಂಧವಿಲ್ಲದ ಬೆಳಗಿನ ಸುದ್ದಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ. ಸಂವಿಧಾನ ವಾರಾಂತ್ಯದ ಉಪನ್ಯಾಸಗಳಿಗೆ ಉಲ್ಲೇಖ ಪುಸ್ತಕವಾಗಿ ಮಾತ್ರ ಉಳಿದಿದೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Your personal liberty will now be decided based on unrelated morning news.
The Constitution is a book only meant as a reference for weekend lectures. https://t.co/A1FumJohAS
— Saket Gokhale MP (@SaketGokhale) November 11, 2025
“ಭಾರತೀಯ ಸುಪ್ರೀಂ ಕೋರ್ಟ್ ದುರಂತ ಸ್ಫೋಟದ ಒಂದು ದಿನದ ನಂತರ ಮುಸ್ಲಿಂ ಆರೋಪಿಗೆ ಜಾಮೀನು ನಿರಾಕರಿಸಿ ‘ಸಂದೇಶ ಕಳುಹಿಸಲು’ ಬಯಸುತ್ತಿದೆಯಾ? ಯಾರಿಗೆ ಸಂದೇಶ? ಅದೇ ದಿನ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಕಾನೂನಿನ ಆಡಳಿತಕ್ಕೆ ನ್ಯಾಯಾಲಯದ ಬದ್ಧತೆಯ ಬಗ್ಗೆ ಮಾತನಾಡಿದ್ದರು. ಇದು ನನಗೆ ಕಾನೂನಿನ ಆಡಳಿತದಂತೆ ತೋರುವುದಿಲ್ಲ. ಪಕ್ಷಪಾತಿ ನ್ಯಾಯಾಂಗ ಮನಸ್ಸು,” ಎಂದು ವಕೀಲ ಅಶೀಷ್ ಗೋಯಲ್ ಹೇಳಿದ್ದಾರೆ.
Indian Supreme Court wants to “send a message” by denying liberty to a Muslim accused day after a tragic blast? Message to whom? Earlier in the day, Chief Justice talked about the court's commitment to rule of law. This doesn't sound like rule of law to me? Biased judicial mind https://t.co/A4O5HOJgr6
— Ashish Goel (@ashish_nujs) November 11, 2025
ತಮಿಳುನಾಡು, ಪ.ಬಂಗಾಳದಲ್ಲಿ ಎಸ್‌ಐಆರ್ ಪ್ರಶ್ನಿಸಿ ಅರ್ಜಿ : ಚು. ಆಯೋಗಕ್ಕೆ ಸುಪ್ರೀಂ ನೋಟಿಸ್


